ಬ್ರೇಕಿಂಗ್ ನ್ಯೂಸ್
10-03-21 09:43 pm Mangaluru correspondent ಕರಾವಳಿ
ಮಂಗಳೂರು, ಮಾ.10: ಕಾಲೇಜಿನ ಜೊತೆಗೆ ಆಕೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬೇಕೆನ್ನುವ ಮಹದಾಸೆ ಇತ್ತು. ಹಲವು ಬಾರಿ ಫೋಟೋ ಶೂಟ್ ಮಾಡ್ಕೊಂಡಿದ್ದ ಯುವತಿ ತನ್ನ ಫೋಟೋಗಳನ್ನು ಫೇಸ್ಬುಕ್ಕಲ್ಲೂ ಹಾಕ್ಕೊಂಡಿದ್ದಳು. ತನ್ನ ಆಕರ್ಷಕ ಲುಕ್ಕಿನ ಫೋಟೋಗಳಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಯುವತಿ ತನ್ನ ಮನೆಯಲ್ಲೇ ನಿಗೂಢವಾಗಿ ಸಾವು ಕಂಡಿದ್ದು ಪರಿಸರದ ನಿವಾಸಿಗಳನ್ನು ಅಚ್ಚರಿಗೆ ನೂಕಿದೆ.

ತೊಕ್ಕೊಟ್ಟು ಸಮೀಪದ ಕುಂಪಲದ ಆಶ್ರಯ ಕಾಲೊನಿ ಅಂದ್ರೆ, ಐದು ಸೆಂಟ್ಸ್ ಮನೆಗಳ ಸಮೂಹ. ಒತ್ತೊತ್ತೊಗಿ ಉದ್ದಕ್ಕೂ ಮೂರು, ನಾಲ್ಕು ಸೆಂಟ್ಸ್ ಜಾಗದಲ್ಲಿ ಕಟ್ಟಲಾಗಿರುವ ಮನೆಗಳು. ಅಲ್ಲಿ ಏನೇ ಅಹಿತಕರ ಘಟನೆಗಳಾದ್ರೂ, ಅಕ್ಕಪಕ್ಕದ ಮನೆಗಳವರಿಗೆ ಗೊತ್ತಿರದೇ ಇರಲ್ಲ. ಆದರೆ, ಇಂದು ಮಧ್ಯಾಹ್ನ ಆ ಮನೆಯ ತಾಯಿ ಬರುವ ಮೊದಲೇ ಅಕ್ಕ ಪಕ್ಕದವರಲ್ಲಿ ಏನೋ ದಿಗಿಲು ಇತ್ತು. ಪಕ್ಕದ್ಮನೆಯ ಆಂಟಿ ಒಬ್ಬರು ಹುಡುಗಿಯ ತಾಯಿಗೆ ಫೋನ್ ಮಾಡಿದ್ದರಂತೆ. ತಾಯಿ ಮನೆಗೆ ಬಂದಾಗ, ಮುಂದಿನ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದರೆ, ಹಿಂದಿನ ಬಾಗಿಲು ತೆರೆದಿತ್ತು. ಮನೆಯಲ್ಲಿ ಒಬ್ಬಳೇ ಇದ್ದ ಪಿಯುಸಿ ಓದುತ್ತಿದ್ದ ಹುಡುಗಿ ಎಲ್ಲಿದ್ದಾಳೆಂದು ಆಕೆಯ ಕೊಠಡಿಯತ್ತ ನೋಡಿದರೆ, ಅಲ್ಲಿ ಆಕೆಯ ದೇಹ ಬೆಡ್ಡಿನಲ್ಲಿ ನೇತಾಡುತ್ತಿತ್ತು. ಬೆಡ್ಡಿನ ಮೇಲ್ಭಾಗದಲ್ಲಿ ನಿಂತ ಭಂಗಿಯಲ್ಲೇ ನೆಲಕ್ಕೆ ಕಾಲು ಊರಿಕೊಂಡ ರೀತಿ ಯುವತಿಯ ದೇಹ ಇತ್ತು. ಕುತ್ತಿಗೆಗೆ ಆಕೆಯದ್ದೇ ಶಾಲನ್ನು ಬಿಗಿದು ಫ್ಯಾನಿಗೆ ಕಟ್ಟಲಾಗಿತ್ತು. ಇದನ್ನು ನೋಡಿದವರು ಯಾರು ಕೂಡ ಇದು ಆತ್ಮಹತ್ಯೆ ಅನ್ನುವಂತೇ ಇರಲಿಲ್ಲ.

ವಿಷ್ಯ ತಿಳಿಯುತ್ತಲೇ ಜನ ಸೇರಿದ್ದಾರೆ. ಉಳ್ಳಾಲ ಪೊಲೀಸರು ಕೂಡ ಬಂದಿದ್ದಾರೆ. ಯುವತಿಯನ್ನು ನೋಡಿದ ಎಲ್ಲರೂ ಉದ್ಗಾರ ಎತ್ತಿದ್ದು ಇದು ಆತ್ಮಹತ್ಯೆ ಅಲ್ಲ ಎನ್ನುವುದನ್ನಷ್ಟೇ.. ನೋಡಲು ಸ್ಫುರದ್ರೂಪಿಯಾಗಿದ್ದ ಮತ್ತು ಅಷ್ಟೇ ಚುರುಕಾಗಿದ್ದ ಹುಡುಗಿಯಾಕೆ. ಎಲ್ಲರೊಂದಿಗೂ ಬೆರೆಯುತ್ತಿದ್ದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನುವುದನ್ನು ಒಪ್ಪಲು ಯಾರೂ ತಯಾರಿರಲಿಲ್ಲ. ಮಂಗಳೂರಿನ ನಿಟ್ಟೆ ಕಾಲೇಜಿನಲ್ಲಿ ಮೊದಲ ಪಿಯು ಓದುತ್ತಿದ್ದವಳು, ಪರಿಸರದಲ್ಲಿ ತುಂಬ ಆಕ್ಟಿವ್ ಆಗಿದ್ದ ಪ್ರೇಕ್ಷಾ ಸಾವಿನ ಬಗ್ಗೆ ಸ್ಥಳೀಯರಲ್ಲಿ ದಿಗಿಲು, ಏನೇನೋ ಚರ್ಚೆಗಳು ನಡೆದಿದ್ದವು. ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕೆಲಸಕ್ಕೆ ಹೋಗುವ ಅಲ್ಲಿನ ಮಂದಿ ಅಲ್ಲೇನಾಯ್ತು ಅನ್ನೋದನ್ನು ಖರೆ ಅಂತ ಹೇಳುವಂತಿರಲಿಲ್ಲ.

ಮೂರ್ನಾಲ್ಕು ಹುಡುಗರು ಬಂದಿದ್ದರು !
ಸ್ಥಳೀಯರನ್ನು ಈ ಬಗ್ಗೆ ಪ್ರಶ್ನೆ ಮಾಡಿದಾಗ, ಹುಡುಗಿಯ ಮನೆಗೆ ಮೂರ್ನಾಲ್ಕು ಹುಡುಗರು ಬಂದಿದ್ದಾರೆ. ಗಾಂಜಾ ವ್ಯಸನಿಗಳಾಗಿದ್ದವರು ಸ್ಥಳಕ್ಕೆ ಬಂದಿದ್ದನ್ನು ನೋಡಿದ್ದೇವೆ ಎಂದಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸರಿಗೂ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಯತಿರಾಜ್, ಭವಿತ್, ಸೌರವ್ ಮತ್ತು ಇನ್ನೊಬ್ಬ ಆ ಮನೆಗೆ ಬಂದಿದ್ದನ್ನು ನೋಡಿದ್ದೇವೆ ಎಂದು ತಿಳಿಸಿದ್ದಾರೆ.
ಸಾವಿನ ಬಗ್ಗೆ ತೀವ್ರ ಸಂಶಯ ವ್ಯಕ್ತವಾದ ಕಾರಣ, ಪೊಲೀಸರು ಸ್ಥಳೀಯರ ಮಾಹಿತಿಯಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹುಡುಗಿಯ ತಂದೆ ಚಿತ್ತಪ್ರಸಾದ್ ಕೂಡ, ಮಗಳ ಸಾವಿನ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯೇ ಅಲ್ಲ. ಇದರಲ್ಲಿ ಏನೋ ಆಗಿರಬೇಕು. ಸ್ಥಳೀಯರು ಯಾರೋ ಹುಡುಗರು ಮನೆಗೆ ಬಂದಿರುವ ಬಗ್ಗೆ ತಿಳಿಸಿದ್ದಾರೆ. ಘಟನೆ ಬಗ್ಗೆ ತೀವ್ರ ಸಂಶಯಗಳಿದ್ದು, ಪೊಲೀಸರು ತನಿಖೆ ನಡೆಸಬೇಕು ಎಂದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಆಗಮಿಸಿದ್ದು ಸ್ಥಳೀಯರಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ.

ಆತನದ್ದು ವನ್ ಸೈಡೆಡ್ ಲವ್ ಆಗಿತ್ತಾ ?
ಹುಡುಗರ ಪೈಕಿ ಯತಿರಾಜ್, ಹುಡುಗಿ ಪ್ರೇಕ್ಷಾಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಆಕೆ ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗುವುದು, ಫೋಟೋ ಶೂಟ್ ಗೆ ತೆರಳುವುದಕ್ಕೆ ಆಕ್ಷೇಪ ಎತ್ತಿದ್ದ. ವಾರದ ಹಿಂದೆ ನಡೆದಿದ್ದ ಪಿಲಾರ್ ಜಾತ್ರೆಯ ಸಂದರ್ಭವೂ ಈ ಬಗ್ಗೆ ತಕರಾರು ನಡೆದಿತ್ತು. ಬೆಂಗಳೂರಿಗೆ ಫೋಟೋ ಶೂಟ್ ಗೆ ಹೋಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕಿರಿಕ್ ಮಾಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಮಾಡೆಲಿಂಗ್ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಪ್ರೇಕ್ಷಾ, ಯತಿರಾಜ್ ಮಾತನ್ನು ಲೆಕ್ಕಿಸದೆ ಬೆಂಗಳೂರಿಗೆ ಫೋಟೋ ಶೂಟ್ ತೆರಳಲು ರೆಡಿಯಾಗಿದ್ದಳು. ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ತೆರಳುವುದೆಂದು ನಿಶ್ಚಯಿಸಿ, ಕಾಲೇಜಿಗೆ ರಜೆ ಹಾಕಿ ಬ್ಯೂಟಿ ಪಾರ್ಲರ್ ಹೋಗಿ ಬಂದಿದ್ದಳು. ಈ ನಡುವೆ, ಯತಿರಾಜ್ ಫೋನ್ ಕರೆಯನ್ನು ಹುಡುಗಿ ರಿಸೀವ್ ಮಾಡದೆ ಅವಾಯ್ಡ್ ಮಾಡಿದ್ದಳು ಎನ್ನಲಾಗುತ್ತಿದೆ.
ಮನೆಗೆ ಬಂದು ಗಲಾಟೆ ನಡೆಸಿದ್ದರು !
ಇದೇ ಕಾರಣಕ್ಕೋ ಏನೋ, ಯತಿರಾಜ್ ಮತ್ತು ಇತರ ಮೂವರು ಸೇರಿ ಇಂದು ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಆಕೆಯ ಮನೆಗೆ ಬಂದಿದ್ದಾರೆ. ಆದರೆ, ಕೆಲವು ಹುಡುಗರು ಮನೆಯ ಹೊರಗೆ ಬಂದಿದ್ದನ್ನು ನೋಡಿ, ಪ್ರೇಕ್ಷಾ ಚಿಲಕ ಹಾಕ್ಕೊಂಡು ಮನೆಯ ಒಳಗೆ ಕುಳಿತಿದ್ದಳು ಎನ್ನಲಾಗಿದೆ. ಪಕ್ಕದ ಮನೆಯ ಆಂಟಿ ಒಬ್ಬರು ಈ ವೇಳೆ ಆಕೆಯನ್ನು ಕರೆದಿದ್ದು, ಪ್ರೇಕ್ಷಾ ಹಿಂದಿನ ಬಾಗಿಲು ತೆರೆದಿದ್ದು ಮತ್ತು ಇದೇ ಸಂದರ್ಭವನ್ನು ಕಾದಿದ್ದ ಆಗಂತುಕರು ಮನೆಯ ಒಳಗೆ ಹೊಕ್ಕಿದ್ದಾರೆ ಎನ್ನಲಾಗುತ್ತಿದೆ. ಮನೆಯ ಒಳಗೆ ಆಕೆ, ಫೋಟೋ ಶೂಟ್ ತೆರಳುವ ವಿಚಾರದಲ್ಲಿ ಗಲಾಟೆ ಆಗಿರುವ ಸಾಧ್ಯತೆಯಿದೆ.
ತಾಯಿ ಅಂಗನವಾಡಿ ಕಾರ್ಯಕರ್ತೆ, ತಂದೆ ಎಚ್ ಪಿ ಗ್ಯಾಸ್ ಏಜನ್ಸಿಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ನಿರಂತರ ದುಡಿಮೆಯಿಂದ ಕಡು ಬಡತನದಿಂದ ಮೇಲೆ ಬಂದ ಕುಟುಂಬವದು. ಬೆಂಗಳೂರು ಫೋಟೋ ಶೂಟ್ ಬಳಿಕ ನನಗೆ ದೊಡ್ಡ ಕ್ರೆಡಿಟ್ ಸಿಗಲಿದೆ ಎನ್ನುತ್ತಿದ್ದ ಮಗಳಿಗೆ ಈ ಸ್ಥಿತಿಯಾಗಿದ್ದನ್ನು ನೋಡಿ, ಅವರ್ಯಾರಿಗೂ ಬಾಯಿಂದ ಶಬ್ದ ಹೊರಡುತ್ತಿರಲಿಲ್ಲ. ಅಳುವುದಕ್ಕೂ ಸಾಧ್ಯವಾಗದ ಸ್ಥಿತಿ. ಇನ್ನೊಬ್ಬ ಮಗಳು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡುತ್ತಿದ್ದು ಕಾಲೇಜು ತೆರಳಿದ್ದಳು. ಇಬ್ಬರು ಹೆಣ್ಮಕ್ಕಳನ್ನು ಕಷ್ಟ ಪಟ್ಟು ಕಾಲೇಜು ಓದಿಸುತ್ತಿದ್ದ ಬಡಪಾಯಿ ಹೆತ್ತವರಿಗೆ ದಿಕ್ಕೇ ತೋಚದ ಸ್ಥಿತಿಯಾಗಿದೆ.

ಇಬ್ಬರು ಪೊಲೀಸ್ ವಶಕ್ಕೆ, ವಿಚಾರಣೆ
ಸದ್ಯಕ್ಕೆ ಯತಿರಾಜ್ ಮತ್ತು ಸೌರವ್ ಎಂಬಿಬ್ಬರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭವಿತ್, ಸ್ಥಳೀಯ ಕಾಂಗ್ರೆಸ್ ಪುಢಾರಿಯ ಮಗನಾಗಿದ್ದು, ಆತನ ಬಂಧನ ಆಗದಂತೆ ಕಾಂಗ್ರೆಸ್ ಪ್ರಭಾವಿಗಳ ಮೂಲಕ ಪೊಲೀಸರಿಗೆ ಒತ್ತಡ ಹೇರಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಭವಿತ್ ಈಗ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಘಟನೆ ಏನೇ ಆಗಿದ್ದರೂ, ಪೊಲೀಸರು ಕೂಲಂಕುಷ ತನಿಖೆ ನಡೆಸಿದರೆ ನೈಜ ಕತೆ ಹೊರಬೀಳುವುದಕ್ಕೆ ಕಷ್ಟ ಏನಿಲ್ಲ.

ಗಾಂಜಾ ಅಡ್ಡೆ ಪೊಲೀಸರಿಗೆ ಗೊತ್ತಿಲ್ವೇ ?
ಕುಂಪಲದ ಆಶ್ರಯ ಕಾಲೊನಿ ಮತ್ತು ಆಸುಪಾಸಿನಲ್ಲಿ ಗಾಂಜಾ ವ್ಯಸನಿಗಳ ಕಾಟ ಜೋರಿದ್ಯಂತೆ. ತಡರಾತ್ರಿಯಲ್ಲೂ ಯುವಕರು ಒಂದೆಡೆ ಗುಂಪು ಕಟ್ಟಿಕೊಂಡು ಗಾಂಜಾ ಸೇದುತ್ತಾರೆ. ಗಲಾಟೆ ಮಾಡುತ್ತಾರೆ. ಇಲ್ಲಿಗೆ ವ್ಯವಸ್ಥಿತವಾಗಿ ಗಾಂಜಾ ಪೂರೈಸುವ ಜಾಲ ಇದೆ ಎನ್ನುತ್ತಾರೆ, ಸ್ಥಳೀಯರು. ಮಂಗಳೂರಿನ ಸಿಸಿಬಿ ಸೇರಿದಂತೆ ಹೆಚ್ಚಿನ ಪೊಲೀಸರ ಮನೆಗಳು ಕುಂಪಲದಲ್ಲಿವೆ. ಈ ಭಾಗದಲ್ಲಿ ಗಾಂಜಾ ವ್ಯಸನಿಗಳು ಹೆಚ್ಚಿರುವುದು, ಸಂಜೆಯಾಗುತ್ತಲೇ ಹುಡುಗರು ಪುಂಡಾಟ ನಡೆಸುವುದು ಈ ಪೊಲೀಸರಿಗೆ ಗೊತ್ತಿರದ ವಿಚಾರ ಏನಲ್ಲ. ಅತ್ತ ಉಳ್ಳಾಲ, ಇತ್ತ ಕೊಣಾಜೆ ಪೊಲೀಸರ ಮೌನ ಈಗ ಒಬ್ಬಳು ಅಮಾಯಕ ಯುವತಿ ಬಲಿಯಾಗುವಷ್ಟರ ಮಟ್ಟಿಗೆ ಹೋಗಿದೆ ಅಂದ್ರೆ ತಪ್ಪಾಗಲ್ಲ.
ಕುಂಪಲ ; ಬೆಡ್ಡಿನಲ್ಲೇ ನಿಂತ ಸ್ಥಿತಿಯಲ್ಲಿ ಮಾಡೆಲಿಂಗ್ ಯುವತಿ ಸಾವು !! ಗಾಂಜಾ ಗ್ಯಾಂಗಿನಿಂದ ಕೊಲೆ ಶಂಕೆ !
19-year-old Model who was found dead at her residence in Kumpala, Mangalore under suspicious way is alleged that she was killed by her boyfriend whose love was one side. A detailed crime report by Headline Karnataka.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm