ಬ್ರೇಕಿಂಗ್ ನ್ಯೂಸ್
04-03-21 05:13 pm Mangalore Correspondent ಕರಾವಳಿ
ಮಂಗಳೂರು, ಮಾ.4: ತಲಪಾಡಿ ಟೋಲ್ ಗೇಟ್ ಸಿಬಂದಿ ಮತ್ತು ಖಾಸಗಿ ಬಸ್ ಮಾಲೀಕರ ಜಟಾಪಟಿ ಒಂದು ಹಂತಕ್ಕೆ ಬಂದಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಂಧಾನದಲ್ಲಿ ಖಾಸಗಿ ಬಸ್ ಗಳು ಶುಲ್ಕ ತೆತ್ತು ತಲಪಾಡಿ ಗೇಟ್ ಹಾದುಹೋಗಲು ಒಪ್ಪಿವೆ.
ಸ್ಥಳೀಯ ನಾಗರಿಕರು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದು ಇದರ ಫಲವಾಗಿ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ನೇತೃತ್ವದಲ್ಲಿ ಬಸ್ಸು ಮಾಲಕರು ಮತ್ತು ಟೋಲ್ ಅಧಿಕಾರಿಗಳ ನಡುವೆ ಇಂದು ಮಂಗಳೂರಿನ ಕದ್ರಿಯಲ್ಲಿರುವ ಮ.ನ.ಪಾ ವಿಭಾಗೀಯ ಕಚೇರಿಯಲ್ಲಿ ಸಭೆ ನಡೆದಿದೆ.
ತಲಪಾಡಿಯ ಟೋಲ್ ನಲ್ಲಿ ದುಬಾರಿ ಸುಂಕ ನೀಡಲು ನಿರಾಕರಿಸಿದ 31 ಸಿಟಿ ಬಸ್ಸುಗಳು ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುತ್ತಿದ್ದರು. ಟೋಲ್ ಮತ್ತು ಖಾಸಗಿ ಬಸ್ಸುಗಳ ನಡುವೆ ಸಮನ್ವಯ ಇಲ್ಲದ ದುಪ್ಪರಿಣಾಮ ಬಸ್ಸು ಪ್ರಯಾಣಿಕರಿಗೆ ತಟ್ಟಿತ್ತು. ಪ್ರಯಾಣಿಕರು ಬಸ್ ಇಳಿದು ಟೋಲ್ ದಾಟಿ ನಡೆದು ಹೋಗಬೇಕಾಗಿತ್ತು.
ಇದೀಗ ನಡೆದ ಸಭೆಯಲ್ಲಿ ಪ್ರತೀ ಬಸ್ಸುಗಳು ತಿಂಗಳಿಗೆ 14,000 ರೂಪಾಯಿ ಸುಂಕವನ್ನು ಟೋಲ್ಗೆ ನೀಡಬೇಕೆಂಬ ತೀರ್ಮಾನಕ್ಕೆ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ತಿಂಗಳ 14,000 ರೂಪಾಯಿ ಟೋಲನ್ನು ಮುಂಗಡವಾಗಿ ಕಟ್ಟಿದ ಮೇಲೆ ಅವರ ಪಾಸ್ಟ್ ಸ್ಟ್ಯಾಗ್ ಆಕ್ಟಿವೇಶನ್ ಆದ ಬಳಿಕ ಸಿಟಿ ಬಸ್ಸುಗಳು ತಲಪಾಡಿ ಟೋಲ್ ಗೇಟನ್ನು ಹಾದು ಮೇಲಿನ ತಲಪಾಡಿಗೆ ತೆರಳಬಹುದಾಗಿದೆ. ಇದಕ್ಕಾಗಿ ಮಂಗಳೂರಿನಿಂದ ಮೇಲಿನ ತಲಪಾಡಿಗೆ ಸಂಚರಿಸುವ ಪ್ರಯಾಣಿಕರ ಟಿಕೆಟ್ ದರದಲ್ಲಿ 2 ರೂಪಾಯಿ ಏರಿಕೆ ಆಗಲಿದೆ. ಅಲ್ಲದೆ ತಲಪಾಡಿಯ ಸ್ಥಳೀಯ ವಾಹನ ಸವಾರರಿಗೆ ಟೋಲ್ನಲ್ಲಿ ರಿಯಾಯಿತಿ ನೀಡಲಾಗಿದೆ.
ತಲಪಾಡಿ ಗ್ರಾಮಸ್ಥರೂ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿನಯ್ ನಾಯ್ಕ್ ಉಪಸ್ಥಿತರಿದ್ದು ನಾಗರಿಕರ ಪರವಾಗಿ ಅಹವಾಲು ಮಂಡಿಸಿದರು. ಖಾಸಗಿ ಬಸ್ಸು ಮತ್ತು ಟೋಲ್ ಅಧಿಕಾರಿಗಳ ನಡುವಲ್ಲಿ ಇದ್ದ ಭಿನ್ನಾಬಿಪ್ರಾಯ ಗೊಂದಲದಿಂದ ಸ್ಥಳೀಯ ಬಸ್ಸು ಪ್ರಯಾಣಿಕರು ಕಳೆದ ಒಂದು ವರ್ಷದಿಂದ ಬಹಳಷ್ಟು ಸಮಸ್ಯೆಯನ್ನು ಅನುಭವಿಸಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಜಟಿಲ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಸಂತೋಷ. ಟೋಲ್ ನಲ್ಲಿ ಸ್ಥಳೀಯ ವಾಹನ ಸವಾರರಲ್ಲಿ ಫಾಸ್ಟ್ ಟ್ಯಾಗ್ ನೆಪದಲ್ಲಿ ಸುಂಕ ವಸೂಲು ಮಾಡದೆ ಹಿಂದಿನ ಯಥಾಸ್ಥಿತಿಯನ್ನೇ ಮುಂದುವರೆಸಬೇಕು. ರಾಷ್ಟ್ರೀಯ ಹೆದ್ದಾರಿಗಳುದ್ದಕ್ಕೂ ಎಲ್ಲೆಂದರಲ್ಲಿ ಅಡ್ಡಲಾಗಿ ಹಾಕಲಾಗಿರುವ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಬೇಕು. ಇದರಿಂದ ಹೆದ್ದಾರಿಗಳಲ್ಲಿ ಅಫಘಾತಗಳ ಪ್ರಮಾಣ ಜಾಸ್ತಿ ಆಗುತ್ತಿದೆ. ಅಗತ್ಯ ಬಿದ್ದರೆ ಹೆದ್ದಾರಿಗಳಲ್ಲಿ ಸಣ್ಣ ಉಬ್ಬುಗಳನ್ನು ನಿರ್ಮಿಸಿ ರಿಫ್ಲೆಕ್ಟರ್ ಗಳನ್ನ ಅಳವಡಿಸಬೇಕೆಂದು ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಹೆದ್ದಾರಿ ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ಶಿಶುಮೋಹನ್ , ನವಯುಗ ಕಂಪನಿಯ ಶಿವಪ್ರಸಾದ್ ಶೆಟ್ಟಿ, ರಾಮಕೃಷ್ಣ, ಖಾಸಗಿ ಬಸ್ಸು ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿಲ್ ರಾಜ್ ಆಳ್ವ , ಪದಾಧಿಕಾರಿಗಳಾದ ಶರತ್ ಮರೋಳಿ, ಅಶ್ವತ್ಥಾಮ ಹೆಗ್ಡೆ, ರವಿರಾಜ್ , ಸುದೇಶ್ ಮರೋಳಿ, KSRTC ಅಧಿಕಾರಿಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತರಾದ ಯಶು ಪಕ್ಕಳ ತಲಪಾಡಿ, ವಾಣಿ ಪೂಜಾರಿ,ತಾ.ಪಂ ಸದಸ್ಯರಾದ ಸಿದ್ದೀಕ್ ಕೊಳಂಗೆರೆ, ಸುರೇಖ ಚಂದ್ರಹಾಸ್, ಗ್ರಾ.ಪಂ ಸದಸ್ಯರಾದ ವೈಭವ್ ಶೆಟ್ಟಿ, ಪ್ರಮುಖರಾದ ವಿನು ಶೆಟ್ಟಿ ಮೊದಲಾದವರು ಸಭೆಯಲ್ಲಿ ಇದ್ದರು.
Raed: ಬೃಹತ್ ಮಾನವ ಸರಪಳಿ ; ಅರ್ಧಕ್ಕೆ ಬಿಡುತ್ತಿದ್ದ ಬಸ್ ಗಳನ್ನ ತಲಪಾಡಿ ಟೋಲ್ ದಾಟಿಸಿದ ನಾಗರಿಕರು !
Residents of Talapady are now happy and also thank DC of Mangalore as buses are now ending trips after toll plaza.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm