ಬ್ರೇಕಿಂಗ್ ನ್ಯೂಸ್
01-03-21 03:43 pm Mangalore Correspondent ಕರಾವಳಿ
ಮಂಗಳೂರು, ಮಾ.1: ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಪೊಲೀಸ್ ಸಿಬಂದಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅಮಾನತು ಮಾಡಿದ್ದಾರೆ. ಕಾರು ಮಾರಾಟ ಪ್ರಕರಣ ಸಂದರ್ಭದಲ್ಲಿ ಸಿಸಿಬಿಯಲ್ಲಿದ್ದ ರಾಜ ಮತ್ತು ಆಶಿತ್ ಡಿಸೋಜ ಎಂಬ ಇಬ್ಬರು ಸಿಬಂದಿಯನ್ನು ಅಮಾನತು ಮಾಡಲಾಗಿದೆ.


ಎರಡು ದಿನಗಳ ಹಿಂದಷ್ಟೇ ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳರಾಜ್ ಮತ್ತು ಪಾಂಡೇಶ್ವರದ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯ ಇನ್ ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಅಮಾನತು ಮಾಡಲಾಗಿತ್ತು. ಇದಕ್ಕೂ ಮುನ್ನ ಕಾರು ಮಾರಾಟ ಮತ್ತು ಅದಕ್ಕೆ ಕಾರಣವಾದ ಮನಿ ಡಬ್ಲಿಂಗ್ ಪ್ರಕರಣವನ್ನು ಡಿಜಿಪಿಯವರು ಸಿಐಡಿ ತನಿಖೆಗೆ ಒಪ್ಪಿಸಿದ್ದರು. ಒಟ್ಟು ಪ್ರಕರಣದ ಬಗ್ಗೆ ಮಂಗಳೂರು ಡಿಸಿಪಿ ವಿನಯ ಗಾಂವ್ಕರ್ ನೀಡಿದ ವರದಿಯಂತೆ ಡಿಜಿಪಿ ಕ್ರಮ ಜರುಗಿಸಿದ್ದರು.

ಐಪಿಎಸ್ ಅಧಿಕಾರಿಗೆ ಮಹಜರು ಹೊಣೆ
ಇದೇ ವೇಳೆ, ಮಂಗಳೂರಿನ ನಾರ್ಕೋಟಿಕ್ ಠಾಣೆಯಲ್ಲಿ ದಾಖಲಾಗಿದ್ದ ಮನಿ ಡಬ್ಲಿಂಗ್ ಪ್ರಕರಣದ ಎಫ್ಐಆರ್ ಅನ್ನು ಸಿಐಡಿಗೆ ವರ್ಗಾಯಿಸಲು ಸಿದ್ಧತೆ ನಡೆದಿದೆ. ನಾರ್ಕೋಟಿಕ್ ಠಾಣೆಯ ಇನ್ ಸ್ಪೆಕ್ಟರ್ ಅವರನ್ನು ಅಮಾನತು ಪಡಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಎಸಿಪಿ, ಐಪಿಎಸ್ ಅಧಿಕಾರಿ ರಂಜಿತ್ ಬಂಡಾರು ನೇತೃತ್ವದಲ್ಲಿ ಸೋಮವಾರ ಕಾರುಗಳನ್ನು ಮಹಜರು ನಡೆಸಲಾಗಿದೆ. ಆರೋಪಿಗಳಿಂದ ವಶಕ್ಕೆ ಪಡೆದ ಕಾರುಗಳನ್ನು ಜಪ್ತಿ ತೋರಿಸಿರಲಿಲ್ಲ. ಇದೇ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇನ್ ಸ್ಪೆಕ್ಷರ್ ರಾಮಕೃಷ್ಣ ಅಮಾನತು ಆಗಿದೆ ಎನ್ನಲಾಗುತ್ತಿದೆ. ಹೀಗಾಗಿ ಎಸಿಪಿ ರಂಜಿತ್ ಬಂಡಾರು, ಕಮಿಷನರ್ ಕಚೇರಿ ಬಳಿ ನಿಲ್ಲಿಸಿರುವ ಎರಡು ಕಾರುಗಳನ್ನು ಆರೋಪಿಗಳ ಸಮ್ಮುಖದಲ್ಲೇ ಮಹಜರು ನಡೆಸಿದ್ದಾರೆ. ಮನಿ ಡಬ್ಲಿಂಗ್ ಪ್ರಕರಣದ ಆರೋಪಿಗಳಾದ ಮ್ಯಾಥ್ಯೂ ಮತ್ತು ರಾಜನ್ ಅವರನ್ನು ಕರೆಸಿ, ಮಹಜರು ಎಸಿಪಿ ಖುದ್ದಾಗಿ ಮಹಜರು ಮಾಡಿದ್ದಾರೆ.
ಕಾರಿನ ಮಹಜರು ನಡೆದ ಬಳಿಕ ಸೊತ್ತು ರಿಕವರಿಯನ್ನು ಎಫ್ಐಆರ್ ನಲ್ಲಿ ಹೆಚ್ಚುವರಿಯಾಗಿ ಸೇರಿಸಿ, ಸಿಐಡಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಸಿಐಡಿ ಅಧಿಕಾರಿಗಳು ಒಟ್ಟು ಪ್ರಕರಣದ ಅಧ್ಯಯನ ನಡೆಸಿ, ಹಳೆ ಆರೋಪಿಗಳನ್ನು ಮೊದಲು ತನಿಖೆಗೆ ಒಳಪಡಿಸಲಿದ್ದಾರೆ. ಬಳಿಕ ಕಾರು ಮಾರಾಟ ಪ್ರಕರಣದಲ್ಲಿ ಆಪಾದಿತರೆಂದು ಕಂಡುಬಂದ ಪೊಲೀಸರು ಮತ್ತು ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಿದ್ದಾರೆ. ಅಗತ್ಯ ಕಂಡುಬಂದರೆ, ಆರೋಪಿ ಪೊಲೀಸರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಲಿದೆ. ಎಫ್ಐಆರ್ ದಾಖಲಾದರೆ, ಮಾತ್ರ ಆರೋಪಿ ಪೊಲೀಸರಿಗೆ ಸಂಕಷ್ಟ ಎದುರಾಗಲಿದೆ.

ಪ್ರಕರಣದಲ್ಲಿ ಮೇಲಧಿಕಾರಿಗಳ ಪಾತ್ರವೂ ಇದೆಯೆಂಬ ಮಾಹಿತಿ ಕೇಳಿಬರ್ತಿದೆಯಾದರೂ, ಆರಂಭದಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಕಡಿಮೆ. ವಿಚಾರಣೆ ವೇಳೆ, ಮೇಲಧಿಕಾರಿಗಳ ಪಾತ್ರದ ಬಗ್ಗೆ ಗಂಭೀರ ಆರೋಪ ಕೇಳಿಬಂದರೆ ಅವರ ವಿರುದ್ಧವೂ ಕ್ರಮ ಖಚಿತ ಎನ್ನಲಾಗುತ್ತಿದೆ. ಆದರೆ, ಮೇಲಿನ ಮಟ್ಟದ ಅಧಿಕಾರಿಗಳು ಈ ಬಗ್ಗೆ ಯಾವ ನಿರ್ಧಾರ ತಳೆಯುತ್ತಾರೆ, ಅದರ ಮೇಲೆ ಕ್ರಮ ಕೈಗೊಳ್ಳುವ ವಿಚಾರ ನಿರ್ಣಯವಾಗಲಿದೆ.

ಸಿಸಿಬಿಯಲ್ಲೇ ಇದ್ದ ಆಶಿತ್ ಡಿಸೋಜ
ಸಿಸಿಬಿ ಸಿಬಂದಿ ತೊಕ್ಕೊಟ್ಟಿನಲ್ಲಿ ಎಣ್ಣೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು, ಬಳಿಕ ಶಿಸ್ತುಕ್ರಮಕ್ಕೊಳಗಾಗಿ ಏಳು ಮಂದಿ ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿದ್ದರು. ಈ ಘಟನೆಯ ಬಳಿಕ ಸಿಸಿಬಿಯ ಬಲ ಕಡಿಮೆಯಾಗಿತ್ತು. 18 ಮಂದಿ ಇರಬೇಕಾದ ತಂಡದಲ್ಲಿ ಆಶಿತ್ ಡಿಸೋಜ ಸೇರಿ ಇತರೇ ಹತ್ತು ಮಂದಿ ಮಾತ್ರ ಇದ್ದರು. ಈಗ ಸಸ್ಪೆಂಡ್ ಆಗಿರುವ ರಾಜ್, ಅದಕ್ಕೂ ಮೊದಲೇ ಬಂದರು ಠಾಣೆಗೆ ವರ್ಗಾವಣೆಯಾಗಿದ್ದರು. ಆಶಿತ್ ಮತ್ತು ರಾಜ್ ಇಬ್ಬರು ಕೂಡ ಸಿಸಿಬಿಯಲ್ಲಿದ್ದಾಗ ಎಸ್ಐ ಕಬ್ಬಾಳರಾಜ್ ಜೊತೆ ನಿಷ್ಠರಾಗಿದ್ದರು ಎನ್ನಲಾಗಿದೆ. ಎಣ್ಣೆ ಪಾರ್ಟಿ ಹೊರಬಿದ್ದ ಬಳಿಕ, ಮೊದಲೇ ಎರಡು ಗುಂಪುಗಳಾಗಿದ್ದ ತಂಡದಲ್ಲಿ ಒಬ್ಬರಿಗೊಬ್ಬರು ಗ್ರೆಜ್ ಕಟ್ಟಿಕೊಂಡು ಡೀಲ್ ಕತೆ ಹೊರಹಾಕಿದ್ದರು.
Mangalore Luxury car missing in CCB Police custody another two police staffs Raj and Ashith Dsouza have been suspended by the order of Mangalore Police Commissioner Shashi Kumar.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm