ಬ್ರೇಕಿಂಗ್ ನ್ಯೂಸ್
22-02-21 12:49 pm Mangalore Correspondent ಕರಾವಳಿ
ಮಂಗಳೂರು, ಫೆ.22: ಕೋವಿಡ್ ನಿರ್ಬಂಧ ನೆಪದಲ್ಲಿ ದಕ್ಷಿಣ ಕನ್ನಡ - ಕೇರಳ ಗಡಿಭಾಗ ತಲಪಾಡಿಯಲ್ಲಿ ಹೈಡ್ರಾಮಾ ನಡೆದಿದೆ. ಒಂದ್ಕಡೆ ಕೇರಳದ ಕಾಸರಗೋಡು ಕಡೆಯಿಂದ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ತಡೆದು ನಿಲ್ಲಿಸಿದರೆ, ಇತ್ತ ಕರ್ನಾಟಕದಿಂದ ಕೇರಳಕ್ಕೆ ತೆರಳುವ ವಾಹನಗಳನ್ನು ತಡೆದು ಗಡಿಭಾಗ ಕಾಸರಗೋಡಿನ ಜನರು ಪ್ರತಿಭಟನೆ ನಡೆಸಿದ್ದಾರೆ.
ಗಡಿಜಿಲ್ಲೆ ಕಾಸರಗೋಡಿನಿಂದ ನಿತ್ಯ ಸಾವಿರಾರು ಮಂದಿ ಮಂಗಳೂರಿಗೆ ಬರುತ್ತಾರೆ. ಏಳೆಂಟು ತಿಂಗಳ ನಿರ್ಬಂಧ ಬಳಿಕ ಮೂರು ತಿಂಗಳ ಹಿಂದಷ್ಟೇ ಅಂತಾರಾಜ್ಯ ಬಸ್ ಸಂಚಾರ ಆರಂಭಗೊಂಡಿತ್ತು. ಈಗ ಮತ್ತೆ ಕೋವಿಡ್ ನೆಪದಲ್ಲಿ ನಿರ್ಬಂಧ ವಿಧಿಸಿದ್ದು ಗಡಿಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರಿನ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ತಡೆ ಹಾಕಿದ್ದನ್ನು ವಿರೋಧಿಸಿ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ನಿರ್ಬಂಧ ವಿಧಿಸದೆ ಮುಕ್ತ ಪ್ರವೇಶ ನೀಡಬೇಕು. ಇಲ್ಲದೇ ಹೋದರೆ ಕರ್ನಾಟಕದಿಂದ ಕೇರಳಕ್ಕೆ ಬರುವ ವಾಹನಗಳನ್ನೂ ಬಿಡುವುದಿಲ್ಲ ಎಂದು ಜನರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರದ ವಿರುದ್ದ ಸ್ಥಳೀಯರು ಧಿಕ್ಕಾರ ಕೂಗಿ ಆಕ್ರೋಶ ತೋರಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಮೀ ಉದ್ದಕ್ಕೂ ವಾಹನಗಳು ಸಾಲುಗಟ್ಟಿದ್ದು ಬ್ಲಾಕ್ ಆಗಿತ್ತು.
ಕೊನೆಗೆ, ಕೇರಳ ಪೊಲೀಸರು ಗಡಿಗೆ ಆಗಮಿಸಿ ಪ್ರತಿಭಟನಾ ನಿರತರ ಮನವೊಲಿಸಿದ್ದಾರೆ. ಪ್ರತಿಭಟನೆ ಕೈಬಿಟ್ಟ ಜನರು, ಇಂದು ಸಂಜೆಯೊಳಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧಾರ ಬದಲಿಸಲು ಗಡುವು ನೀಡಿದ್ದಾರೆ. ನಿರ್ಧಾರ ಬದಲಿಸದೇ ಇದ್ದರೆ ನಾಳೆಯಿಂದ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸದ್ಯ ಎರಡೂ ಕಡೆಗಳಿಂದ ವಾಹನಗಳು ಸಂಚರಿಸುತ್ತಿದ್ದು ಬೆಳಗ್ಗಿನಿಂದ ಮಧ್ಯಾಹ್ನ ವರೆಗಿನ ಹೈಡ್ರಾಮಾಕ್ಕೆ ತೆರೆಬಿದ್ದಿದೆ.
ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕಕ್ಕೆ ಬರುವ ಜನರನ್ನು ನಿರ್ಬಂಧಿಸಲು ರಾಜ್ಯ ಸರಕಾರ ಕ್ರಮ ಕೈಗೊಂಡಿತ್ತು. ಅಲ್ಲದೆ, ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರಷ್ಟೇ ಕರ್ನಾಟಕ ಪ್ರವೇಶಕ್ಕೆ ಅನುಮತಿ ನೀಡುವುದೆಂದು ನಿರ್ಧಾರ ಕೈಗೊಂಡು ಆಯಾ ಜಿಲ್ಲಾಡಳಿತಗಳಿಂದ ಅನುಷ್ಠಾನ ಕ್ರಮಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ, ದ.ಕ. ಜಿಲ್ಲಾಡಳಿತ ಗಡಿಜಿಲ್ಲೆ ಕಾಸರಗೋಡು ಭಾಗದಿಂದ ಬರುವ ಒಳ ರಸ್ತೆಗಳನ್ನು ತಡೆದು ನಾಲ್ಕು ಪ್ರಮುಖ ಹೆದ್ದಾರಿಗಳಲ್ಲಿ ಮಾತ್ರ ಜನರ ಪ್ರವೇಶಕ್ಕೆ ಅನುಮತಿ ನೀಡಿತ್ತು. ಅಲ್ಲದೆ, ಜನರು 72 ಗಂಟೆಗಳ ಮೊದಲು ಪಡೆದ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕೆಂದು ಸೂಚಿಸಿತ್ತು. ಈ ನಿರ್ಧಾರಕ್ಕೆ ಕಾಸರಗೋಡು ಜಿಲ್ಲೆಯ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಸದ್ಯಕ್ಕೆ ಗಡಿಭಾಗದಲ್ಲಿ ಸಂಚಾರ ಮುಕ್ತ ಆಗಿದ್ದು ಜಿಲ್ಲಾಡಳಿತಕ್ಕೆ ಪರಿಸ್ಥಿತಿ ನಿಭಾಯಿಸುವುದು ಸವಾಲಾಗಿ ಪರಿಣಮಿಸಿದೆ.
Video:
As DC has ordered ban of entry of Keralites into Mangalore due to covid second wave students and public protest near Tapapdy Toll gate demanding their entry into city.
17-04-25 05:01 pm
Bangalore Correspondent
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
ಒಂದನೇ ತರಗತಿಗೆ ಪ್ರವೇಶ ; ಈ ವರ್ಷಕ್ಕೆ ಮಾತ್ರ ಮಕ್ಕಳ...
16-04-25 09:07 pm
Bigg Boss Kannada, Rajath arrested: ರೀಲ್ಸ್ ಶೋ...
16-04-25 06:42 pm
16-04-25 03:54 pm
HK News Desk
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
18-04-25 12:54 pm
Mangalore Correspondent
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
Mangalore, Bantwal Accident, Melroy D’Sa: ಬಂಟ...
16-04-25 10:58 pm
17-04-25 09:56 pm
Mangalore Correspondent
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm
Sullia, Drugs, Mangalore, Ccb Police; ದೆಹಲಿಯಿ...
17-04-25 11:39 am
Air Hostess, ICU, Sexual Harrasment: ICU ನಲ್ಲ...
15-04-25 10:24 pm
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm