ಬ್ರೇಕಿಂಗ್ ನ್ಯೂಸ್
16-02-21 05:44 pm Mangaluru Correspondant ಕರಾವಳಿ
ಮಂಗಳೂರು, ಫೆ.16: ದೇಶಾದ್ಯಂತ ಇಂದಿನಿಂದ ಟೋಲ್ ಗೇಟ್ ನಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಹೀಗಾಗಿ ಫಾಸ್ಟ್ ಟ್ಯಾಗ್ ಇಲ್ಲದವರು ಡಬಲ್ ಶುಲ್ಕ ಕೊಟ್ಟು ಗೇಟ್ ಹಾದು ಹೋಗಬೇಕಾಗಿದೆ. ಕೇರಳದಿಂದ ಬರುವ ಮಂದಿ ಕರ್ನಾಟಕ ಪ್ರವೇಶ ಮಾಡಬೇಕಾದರೆ ಪ್ರಮುಖವಾಗಿ ಸಿಗುವುದು ತಲಪಾಡಿ ಟೋಲ್ ಗೇಟ್.
ಪ್ರತಿ ದಿನವೂ ಉದ್ದಕ್ಕೂ ಲೈನ್ ಇರುತ್ತಿದ್ದ ತಲಪಾಡಿ ಟೋಲ್ ಗೇಟ್ ನಲ್ಲಿ ಇಂದು ಮಧ್ಯಾಹ್ನ ಅಷ್ಟೇನು ವಾಹನಗಳು ಸಾಲುಗಟ್ಟಿದ್ದು ಕಂಡುಬರಲಿಲ್ಲ. ಎಲ್ಲ ಲೈನ್ ಗಳಲ್ಲಿಯೂ ವಾಹನಗಳಿಗೆ ಸಾಗುವುದಕ್ಕೆ ಅವಕಾಶ ನೀಡಲಾಗಿತ್ತು. ಖಾಸಗಿ ಮತ್ತು ಟ್ಯಾಕ್ಸಿ ವಾಹನಗಳು ಸಾಗಾಟಕ್ಕೆ ಮುಕ್ತ ಅವಕಾಶ ಇದ್ದುದರಿಂದ ಲೈನ್ ಇರಲಿಲ್ಲ. ಫಾಸ್ಟ್ ಟ್ಯಾಗ್ ಇಲ್ಲದ ಮಂದಿ ಡಬಲ್ ಶುಲ್ಕ ತೆತ್ತು ಸಾಗುತ್ತಿದ್ದರು.
ಸ್ಥಳೀಯರಿಗೂ ಇಂದಿನಿಂದ ಶುಲ್ಕ !
ಮಹತ್ವದ ಬದಲಾವಣೆ ಏನಂದ್ರೆ, ಸ್ಥಳೀಯರಿಗೂ ಟೋಲ್ ಶುಲ್ಕ ಕಡ್ಡಾಯ ಮಾಡಲಾಗಿತ್ತು. ತಲಪಾಡಿಯ ಆಸುಪಾಸಿನ 5 ಕಿಮೀ ವ್ಯಾಪ್ತಿಯ ಸ್ಥಳೀಯರಿಗೆ ಟೋಲ್ ಗೇಟ್ ನಲ್ಲಿ ಶುಲ್ಕ ಇಲ್ಲದೆ ತೆರಳಲು ಈವರೆಗೆ ಅವಕಾಶ ಇತ್ತು. ಅದನ್ನು ರದ್ದುಪಡಿಸಲಾಗಿದ್ದು, ಇದರಿಂದ ಸ್ಥಳೀಯ ಕೆಲವರು ಟೋಲ್ ಗೇಟ್ ನಲ್ಲಿ ಕಿರಿಕಿರಿ ಮಾಡಿದ್ದಾರೆ. ಆದರೆ ಟೋಲ್ ಸಿಬಂದಿ ಮಾತ್ರ ಸ್ಥಳೀಯರ ಸಾಗಾಟಕ್ಕೂ ಅವಕಾಶ ನೀಡಿರಲಿಲ್ಲ.
ಸ್ಥಳದಲ್ಲೇ ಫಾಸ್ಟ್ ಟ್ಯಾಗ್ ಕಾರ್ಡ್ ವ್ಯವಸ್ಥೆ
ಫಾಸ್ಟ್ ಟ್ಯಾಗ್ ಹೊಂದಿರದ ವಾಹನಗಳಿಗೆ ತಲಪಾಡಿ ಟೋಲ್ ಗೇಟ್ ಬಳಿಯಲ್ಲೇ ಫಾಸ್ಟ್ ಟ್ಯಾಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಏರ್ಟೆಲ್, ಏಕ್ಸಿಸ್, ಪೇಟಿಎಂ, ಎಚ್ ಡಿ ಎಫ್ ಸಿ, ಎನ್ ಎಚ್ ಐ ವತಿಯಿಂದ ಪ್ರತ್ಯೇಕವಾಗಿ ಫಾಸ್ಟ್ ಟ್ಯಾಗ್ ಮಾಡಲು ಸಿಬಂದಿ ನಿಯೋಜನೆ ಮಾಡಲಾಗಿದ್ದು, ವಾಹನದ ಆರ್ ಸಿ ಮತ್ತು ವ್ಯಕ್ತಿಯ ಪಾನ್ ಕಾರ್ಡ್ ಇದ್ದರೆ ಸ್ಥಳದಲ್ಲೇ ಫಾಸ್ಟ್ ಟ್ಯಾಗ್ ಮಾಡಿಕೊಡಲಾಗುತ್ತಿದೆ. ಹತ್ತೇ ನಿಮಿಷದಲ್ಲಿ ಫಾಸ್ಟ್ ಟ್ಯಾಗ್ ಕಾರ್ಡ್ ಮಾಡಲಾಗುತ್ತಿದೆ ಎಂದು ಟೋಲ್ ಗೇಟ್ ಗುತ್ತಿಗೆ ಕಂಪನಿಯ ಪಿಆರ್ ಓ ಭಾಸ್ಕರ ಶೆಟ್ಟಿ ಮಾಹಿತಿ ನೀಡಿದ್ದಾರೆ.
20 ಕಿಮೀ ಪರಿಸರದ ಮಂದಿಗೆ ಪಾಸ್
ಇನ್ನು ತಲಪಾಡಿ ಟೋಲ್ ಗೇಟ್ ವ್ಯಾಪ್ತಿಯ ಕೇರಳ ಮತ್ತು ಕರ್ನಾಟಕ ಭಾಗದ 20 ಕಿಮೀ ಆಸುಪಾಸಿನಲ್ಲಿ ವಾಸವಿರುವ ಮಂದಿಗೆ ತಿಂಗಳ ಪಾಸ್ ನೀಡುವ ವ್ಯವಸ್ಥೆಯೂ ಇದೆ. 20 ಕಿಮೀ ಪರಿಸರದ ಮಂದಿ ತಿಂಗಳಿಗೆ 270 ರೂ. ನೀಡಿ ಪಾಸ್ ತೆಗೆದುಕೊಳ್ಳಬಹುದು. ಖಾಸಗಿ ವಾಹನಗಳು ಈ ಪಾಸ್ ಹೊಂದಿದ್ದರೆ ದಿನದಲ್ಲಿ ಎಷ್ಟು ಬಾರಿಯೂ ಸಾಗಲು ಅವಕಾಶ ನೀಡಲಾಗುತ್ತಿದೆ.
ಇನ್ನು ಟ್ಯಾಕ್ಸಿ ವಾಹನಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಇದ್ದು, ಘನ ವಾಹನಗಳು ತಿಂಗಳಿಗೆ 4200 ರೂ., ಕಾರು ಇನ್ನಿತರ ಲಘು ವಾಹನಗಳಿಗೆ 2100 ರೂ. ತೆತ್ತು ಪಾಸ್ ಪಡೆಯಬಹುದು. ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನ ಸಾಗಲು ಪ್ರತ್ಯೇಕ ಲೈನ್ ಇದೆ ಎಂದು ಮಾಹಿತಿ ನೀಡಿದ ಭಾಸ್ಕರ ಶೆಟ್ಟಿ, ಫೆ.16ರಿಂದ ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ಅಥವಾ 80 ರೂ. ಶುಲ್ಕ ತೆರಬೇಕಿದೆ. ಕೇರಳದಿಂದ ಬರುವ ಬಹುತೇಕ ವಾಹನಗಳು ಇನ್ನೂ ಫಾಸ್ಟ್ ಟ್ಯಾಗ್ ಮಾಡಿಲ್ಲ. ಹೀಗಾಗಿ ಇನ್ನು ದಿನದ ಕಲೆಕ್ಷನ್ ಕೂಡ ಹೆಚ್ಚುವ ಸಾಧ್ಯತೆಯಿದೆ. ಈಗ ದಿನಕ್ಕೆ ಎಂಟು ಲಕ್ಷ ಆಸುಪಾಸು ಕಲೆಕ್ಷನ್ ಆಗುತ್ತದೆ ಎಂದು ಹೇಳಿದರು.
Talapady Toll gate crew issue instant Fastag stickers for vehicles that's don't have tags after the government has made it mandatory.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm