ಬ್ರೇಕಿಂಗ್ ನ್ಯೂಸ್
22-03-26 07:30 pm HK News Staffer ಕರಾವಳಿ
ಉಡುಪಿ, ಮಾರ್ಚ್ 22: ಜಿಲ್ಲೆಯ ರಾಜಕೀಯದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ವಾಗ್ವಾದ ತೀವ್ರಗೊಂಡಿದೆ. ಮಾಜಿ ಶಾಸಕ ರಘುಪತಿ ಭಟ್ ಹಾಲಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಗಂಭೀರ ಆರೋಪಗಳನ್ನು ಹೊರ ಹಾಕಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಡಾನಿಡಿಯೂರು ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕಾಗಿ ಸಲ್ಲಿಸಿದ್ದ ಸಿಂಗಲ್ ಲೇಔಟ್ ಅರ್ಜಿಗೆ ಉದ್ದೇಶಪೂರ್ವಕವಾಗಿ ಅಡ್ಡಿ ಮಾಡಲಾಗುತ್ತಿದೆ ಎಂದು ಭಟ್ ಆರೋಪಿಸಿದ್ದಾರೆ. 2024ರ ಮಾರ್ಚ್ 20ರಂದು ಅರ್ಜಿ ಸಲ್ಲಿಸಿದ್ದರೂ, ಸಾಮಾನ್ಯವಾಗಿ ಮೂರು ತಿಂಗಳಲ್ಲಿ ಸಿಗಬೇಕಿದ್ದ ಅನುಮತಿ ಎರಡು ವರ್ಷವಾದರೂ ಲಭ್ಯವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಶಾಸಕರ ಒತ್ತಡದಿಂದಲೇ ಅನುಮತಿ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಕಿಡಿಕಾರಿದ ಭಟ್, ಹೈಕೋರ್ಟ್ 30 ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಅದನ್ನು ಪಾಲಿಸಲಾಗಿಲ್ಲ ಎಂದು ಮತ್ತೊಂದು ಗಂಭೀರ ಆರೋಪವಾಗಿ ಮಾಡಿದ್ದಾರೆ. ಸಿ.ಆರ್.ಝೆಡ್ ಅನುಮತಿ, ಜೋನ್ ಚೇಂಜ್ ಹಾಗೂ ಕಮರ್ಷಿಯಲ್ ಕನ್ವರ್ಷನ್ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಫೈಲ್ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕನ ಧೋರಣೆಯನ್ನು ಖಂಡಿಸಿ ಸೋಮವಾರದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂಭಾಗದಲ್ಲಿ ನಿರಂತರ ಧರಣಿ ಆರಂಭಿಸುವುದಾಗಿ ಭಟ್ ತಿಳಿಸಿದ್ದಾರೆ. “ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ. ಇದು ರಾಜಕೀಯ ಹೋರಾಟವಲ್ಲ, ವೈಯಕ್ತಿಕ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ” ಎಂದು ಅವರು ಹೇಳಿದ್ದಾರೆ.
ಉಡುಪಿಯಲ್ಲಿ ಇಂತಹ ರಾಜಕೀಯ ದ್ವೇಷದ ಘಟನೆಗಳು ಅಪರೂಪವಾಗಿದ್ದು, ಬೇರೆ ಪಕ್ಷದವರಾದರೂ ವೈಯಕ್ತಿಕ ಉದ್ಯಮಗಳಿಗೆ ಅಡ್ಡಿಪಡಿಸುವ ಸಂಪ್ರದಾಯ ಇಲ್ಲ ಎಂದು ಅವರು ಹೇಳಿದರು. ಯಶ್ ಪಾಲ್ ಸುವರ್ಣ ಶಾಸಕರಾಗಲು ತಾನು ಸಹಕಾರ ನೀಡಿದ್ದೇನೆ ಎಂದು ನೆನಪಿಸಿಕೊಂಡ ಭಟ್, ಈಗ ಅದೇ ವ್ಯಕ್ತಿಯಿಂದ ಅಡಚಣೆ ಎದುರಿಸುತ್ತಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
06-08-26 03:49 pm
HK News Staffer
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಸಮರ್ಥ, ಛಲವಾದಿ...
04-08-26 09:12 pm
ಸಿದ್ದರಾಮಯ್ಯ ಆಪ್ತ ಎಂಬ ಕಾರಣಕ್ಕೆ ನನಗೆ ಅನ್ಯಾಯ ಆಗಿ...
04-08-26 09:10 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
06-08-26 11:03 pm
Mangaluru Staffer
ಅಯೋಧ್ಯೆ ಕಾಣಿಕೆ ಹಣ ಕಳವು ತೀವ್ರ ಆಘಾತಕಾರಿ, ಯಾವುದೇ...
06-08-26 10:22 pm
ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ...
06-08-26 09:33 pm
ಹೆದ್ದಾರಿ ಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆಗಿಳ...
06-08-26 08:09 pm
ಸುರತ್ಕಲ್ ಎನ್ಐಟಿಕೆ ಕಾಲೇಜು ಹಾಸ್ಟೆಲ್ನಲ್ಲಿ ಸ್ವಯ...
05-08-26 08:08 pm
07-08-26 12:35 pm
HK News Staffer
ಲವ್ - ಸೆಕ್ಸ್..ದೋಖಾ ; ಬಳ್ಳಾರಿಯಲ್ಲಿ ಬೆಚ್ಚಿಬೀಳಿಸ...
06-08-26 09:31 pm
ಲವ್ - ಸೆಕ್ಸ್ ದೋಖಾ ; ಬಳ್ಳಾರಿಯಲ್ಲಿ ಬೆಚ್ಚಿಬೀಳಿಸಿ...
06-08-26 09:31 pm
ಬೆಂಗಳೂರು ; ಒಂದು ತಿಂಗಳ ಹಿಂದೆ ನೇಪಾಳದಿಂದ ಕೆಲಸಕ್ಕ...
06-08-26 06:13 pm
7 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ...
06-08-26 11:48 am