ಬ್ರೇಕಿಂಗ್ ನ್ಯೂಸ್
22-03-26 12:10 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 22: ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ವೇಣೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾಗಿ ಸಂದೇಶ್ ವಿರುದ್ಧ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 21ರಂದು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ವೇಣೂರು ಠಾಣೆ ವ್ಯಾಪ್ತಿಯ ಮಹಿಳೆಯೊಬ್ಬರು 2018ರಿಂದ 2023 ರ ವರೆಗೆ ಆಗಿಂದಾಗ್ಗೆ ಮನೆಗೆ ಬಂದು ಬಲವಂತವಾಗಿ ಅತ್ಯಾಚಾರ ಮಾಡಿರುವುದಾಗಿ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ದೂರು ನೀಡಿದ್ದಾರೆ. ಇದರಂತೆ, ಪೊಲೀಸರು 376(2)ಎ 1, 376(2)ಎನ್, 384, 506 ಅಡಿ ಪ್ರಕರಣ ದಾಖಲಿಸಿದ್ದಾರೆ.
ಇನ್ಸ್ ಪೆಕ್ಟರ್ ಸಂದೇಶ್ ಹಲವಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದು ಹಲವರನ್ನು ಬ್ಲಾಕ್ಮೇಲ್ ಮಾಡಿ ಅತ್ಯಾಚಾರ ಮಾಡಿದ್ದಾಗಿ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ಹೋಗಿತ್ತು. ಆದರೆ ಕಿರುಕುಳಕ್ಕೆ ಒಳಗಾದ ಯಾವುದೇ ಸಂತ್ರಸ್ತರು ದೂರು ನೀಡದ ಕಾರಣ ಪ್ರಕರಣ ಗಂಭೀರತೆ ಪಡೆದಿರಲಿಲ್ಲ. ಅಸಭ್ಯವಾಗಿ ಮಾತನಾಡಿದ ಆಡಿಯೋ ಮತ್ತು ಅಸಭ್ಯ ರೀತಿ ಮಹಿಳೆ ಜೊತೆಗೆ ಪೊಲೀಸ್ ಯೂನಿಫಾರ್ಮ್ ನಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ಹಿನ್ನೆಲೆಯಲ್ಲಿ ಸಂದೇಶ್ ಅವರನ್ನು ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಅಮಾನತು ಮಾಡಿದ್ದರು.
ಇಲಾಖಾ ತನಿಖೆಗಾಗಿ ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ಅವರಿಗೆ ಹೊಣೆ ನೀಡಲಾಗಿತ್ತು. ತನಿಖೆಯ ವೇಳೆ ಯಾವುದೇ ಮಹಿಳೆ ತನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಹೇಳಿಕೆ ನೀಡುವುದಾಗಲೀ, ದೂರು ನೀಡುವುದಾಗಲೀ ಮಾಡದೇ ಇದ್ದುದರಿಂದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಾಕ್ಷ್ಯ ಸಿಕ್ಕಿಲ್ಲವೆಂದು ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದರು. ದುರ್ನಡತೆ ತೋರಿದ್ದಕ್ಕಾಗಿ ಅವರನ್ನು ಅಮಾನತು ಪಡಿಸಿದ್ದು ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಂದೇಶ್ ಬಗ್ಗೆ ಕಮಿಷನರ್ ಮೃದು ಧೋರಣೆ ತಳೆದಿದ್ದಾರೆಂದು ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ವೇಣೂರು ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದು ಪ್ರಕರಣ ಗಂಭೀರತೆ ಪಡೆದಿದೆ.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm