ಬ್ರೇಕಿಂಗ್ ನ್ಯೂಸ್
21-03-26 06:31 pm HK News Staffer ಕರಾವಳಿ
ಬಂಟ್ವಾಳ, ಮಾರ್ಚ್ 21: ಯುವಕನೊಬ್ಬ ಪಾನಮತ್ತನಾಗಿ ಬಂದು ಮೆಲ್ಕಾರ್ ಗುಡ್ಡೆಯಂಗಡಿ ಎಂಬಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ದಾಂಧಲೆಗೈದು ಅಲ್ಲಿದ್ದ ಸೊತ್ತುಗಳನ್ನು ಧ್ವಂಸಗೈದ ಘಟನೆ ನಡೆದಿದ್ದು, ಪೊಲೀಸ್ ಒಬ್ಬರ ಎದುರಲ್ಲೇ ಆವಾಜ್ ಹಾಕುತ್ತಾ ಸ್ಥಳದಲ್ಲಿ ಹೈಡ್ರಾಮಾ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿದೆ.
ಮಾರ್ಚ್ 20ರಂದು ಸಂಜೆ ಘಟನೆ ನಡೆದಿದ್ದು, ಸಜಪಮೂಡ ಕಾರಾಜೆಯ ಅಫ್ರೀದ್ (28) ಎನ್ನುವ ಯುವಕ ಕುಡಿದು ತೂರಾಡುತ್ತಾ ಗ್ಯಾಸ್ ಹಾಕುತ್ತಿದ್ದ ಸಿಬಂದಿ ಬಳಿಗೆ ಬಂದಿದ್ದಾನೆ. ಅಲ್ಲಿದ್ದ ಸಿಬಂದಿ ಜೊತೆಗೆ ವಾಗ್ವಾದ ನಡೆಸಿ ಒಬ್ಬನಿಗೆ ಹಲ್ಲೆ ನಡೆಸಿದ್ದಾನೆ. ಆನಂತರ, ಗ್ಯಾಸ್ ಪೈಪನ್ನು ಎಳೆದು ಕಾಲಿನಲ್ಲಿ ತುಳಿದು ಅಲ್ಲಿದ್ದ ಇತರೇ ಉಪಕರಣಗಳಿಗೂ ಹಾನಿ ಮಾಡಿದ್ದಲ್ಲದೆ, ಸಿಬಂದಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ.



ಬಳಿಕ ಸ್ಥಳಕ್ಕೆ ಬಂದ ಬೀಟ್ ಪೊಲೀಸ್ ಒಬ್ಬರು ರಂಪಾಟ ಮಾಡುತ್ತಿದ್ದ ಯುವಕನನ್ನು ಎತ್ತಿಕೊಂಡು ಹೋಗಲು ಠಾಣೆಯಿಂದ ಪೊಲೀಸ್ ಜೀಪ್ ಬರಲು ಹೇಳಿದ್ದಾರೆ. ಆದರೆ ಅಷ್ಟರಲ್ಲೇ ಪೊಲೀಸರಿಗೂ ಆವಾಜ್ ಹಾಕುತ್ತಾ ಅವರಿಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಬಳಿಕ ಪೊಲೀಸ್ ಜೀಪ್ ಬರುತ್ತಲೇ ಅಲ್ಲಿಂದ ಆತನನ್ನು ಎಳಕೊಂಡು ಜೀಪಿಗೆ ತಳ್ಳಿ ಠಾಣೆಗೆ ಒಯ್ದಿದ್ದಾರೆ.
ಘಟನೆ ಬಗ್ಗೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಆಗಿರುವ ಕುನಾಲ್ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ಆರೋಪಿ ಆಟೋ ಚಾಲಕನ ವಿರುದ್ಧ 115(2), 287, 324(4), 351(2) ಹಾಗೂ 352 ಅಡಿ ಕೇಸು ದಾಖಲಿಸಿದ್ದಾರೆ. ಆರೋಪಿ ಯುವಕ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೂ ಅಲ್ಲಿಗೆ ಆಟೋ ತಂದಿರಲಿಲ್ಲ. ಕುಡಿದು ತೂರಾಡುತ್ತಾ ನಡೆದುಕೊಂಡೇ ಬಂದಿದ್ದು ಸ್ಥಳದಲ್ಲಿ ಗಲಾಟೆ ನಡೆಸಿದ್ದಾನೆ.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm