ಬ್ರೇಕಿಂಗ್ ನ್ಯೂಸ್
11-03-25 10:33 pm Mangalore Correspondent ಕರಾವಳಿ
ಉಳ್ಳಾಲ, ಮಾ.11 : ದಕ್ಷಿಣ ಕನ್ನಡ ಜಿಲ್ಲೆಯು ಉತ್ತರ ಭಾರತದಲ್ಲಿ ಯಾವುದೇ ರಾಜ್ಯದಲ್ಲಿದ್ದರೂ ಪ್ರತೀ ವರ್ಷ ಹತ್ತು ಮಕ್ಕಳಿಗೆ ಕ್ರೀಡಾ ಕೋಟಾದಲ್ಲಿ ಉದ್ಯೋಗ ಲಭಿಸುತ್ತಿತ್ತು. ಆದರೆ ಇಲ್ಲಿನ ಜನಪ್ರತಿನಿಧಿಗಳು ಕ್ರೀಡಾಪಟುಗಳ ಬಗ್ಗೆ, ಅವರ ಉದ್ಯೋಗದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾಜಿ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು, ಕಾಪಿಕಾಡು ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ ಸಂಯೋಜಕ ಗೋಪಿನಾಥ್ ಕಾಪಿಕಾಡು ಬೇಸರ ವ್ಯಕ್ತಪಡಿಸಿದರು.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ "ತಿಂಗಳ ಬೆಳಕು- ಗೌರವ" ಕಾರ್ಯಕ್ರಮದಲ್ಲಿ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ ಸಂಸ್ಥೆಯ ಪರವಾಗಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಬಹುತೇಕ ಕ್ರೀಡಾಪಟುಗಳೆಲ್ಲ ಮಧ್ಯಮ ವರ್ಗದವರಾಗಿರುತ್ತಾರೆ. ಕಷ್ಟ ಪಟ್ಟು ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಗೆದ್ದವರಿಗೆ ಸರಕಾರ ಕರೆದು ಉದ್ಯೋಗ ಕೊಡಬೇಕಿತ್ತು. ಜಿಲ್ಲೆಯ ಸರಕಾರಿ ಸ್ವಾಮ್ಯದ ಕಂಪನಿಗಳು, ಸರಕಾರಿ, ಸಹಕಾರಿ ಬ್ಯಾಂಕ್ ಗಳಲ್ಲಿ ಸಂಸದರು, ಶಾಸಕರು ಮನಸ್ಸು ಮಾಡಿದರೆ ಕ್ರೀಡಾಳುಗಳಿಗೆ ನಾಳೆಯೇ ಉದ್ಯೋಗ ಕೊಡಿಸಬಹುದು. ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ಈ ಕಾರ್ಯ ಆಗುತ್ತಿಲ್ಲ.
ಶೇ.2 ಮೀಸಲಾತಿ ಬಂದರೂ 1000 ಹುದ್ದೆಗಳಲ್ಲಿ 20 ಕ್ರೀಡಾಪಟುಗಳಿಗೆ ಮಾತ್ರ ಉದ್ಯೋಗ ಸಿಗಬಹುದು. ಅದೇ ಉತ್ತರ ಭಾರತದಲ್ಲಿ ಪ್ರಮಾಣ ಪತ್ರಕ್ಕಾಗಿ ಗಲಾಟೆಗಳು ನಡೆದಿವೆ. ಪರಿಣಾಮ ಪ್ರಥಮ, ದ್ವಿತೀಯ ಸ್ಥಾನಗಳಲ್ಲಿ ಜಯ ಗಳಿಸಿದರೂ ಕೇಂದ್ರ ಅಥವಾ ರಾಜ್ಯ ಸರಕಾರಗಳ ಅಧೀನದ ಇಲಾಖೆಗಳಲ್ಲಿ ಉದ್ಯೋಗ ಸಿಗುವುದು ಖಚಿತವಾಗಿದೆ. ಅಕಾಡೆಮಿಯ ಹದಿನೈದು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿನುಗುತ್ತಿದ್ದಾರೆ. 33 ವರ್ಷಗಳ ನಂತರ ನಮ್ಮ ಅಕಾಡೆಮಿಯ ಕ್ರೀಡಾಪಟುಗಳು ಅಖಿಲ ಭಾರತ ಅಂತರ್ ವಿವಿ ಚಿನ್ನದ ಪದಕ ಗೆದ್ದಿದ್ದಾರೆ. ಶಾಸಕ ಖಾದರ್ ಅವರು ಬೆಳಗಾವಿ ಸುವರ್ಣ ಸೌಧದಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳನ್ನ ಸನ್ಮಾನಿಸಿ ಒಂದು ಲಕ್ಷ ನಗದನ್ನು ಕೊಟ್ಟು ಗೌರವಿಸಿರುವುದು ಸ್ಮರಣೀಯ. ಅಕಾಡೆಮಿಗೊಂದು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಆಗಬೇಕೆಂಬ ದೊಡ್ಡ ಕನಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಮೆಸ್ಕಾಂನ ಲೆಕ್ಕ ನಿಯಂತ್ರಣ ಅಧಿಕಾರಿ ಹಾಗೂ ದ.ಕ ಜಿಲ್ಲಾ ಪವರ್ ಲಿಪ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಎ.ಉಮೇಶ್ ಗಟ್ಟಿ ಮಾತನಾಡಿ ಸಮಾಜದ ಬೇಕು ಬೇಡಗಳನ್ನ ಅರಿತುಕೊಂಡು, ಸಮಸ್ಯೆಗಳನ್ನ ದರ್ಪಣದಂತೆ ಬಿಂಬಿಸಿ ಉತ್ತಮ ವಿಚಾರಗಳಿಗೆ ಬೆನ್ನು ತಟ್ಟುತ್ತಿರುವ ಉಳ್ಳಾಲ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ. ನಾನು ಮಧ್ಯಮ ವರ್ಗದವನಾದರೂ ಛಲ, ತುಡಿತದಿಂದಾಗಿ ಸಾಧನೆ ಮಾಡಲು ಸಾಧ್ಯವಾಗಿದೆ. ಕೆಪಿಟಿಸಿಎಲ್ ಸ್ಪೋರ್ಟ್ಸ್ ಬೋರ್ಡ್ ಸದಸ್ಯನಾಗಿರುವುದರಿಂದ ಶೋಭಾ ಕರಂದ್ಲಾಜೆ ಸಚಿವೆಯಾಗಿದ್ದ ಸಂದರ್ಭ ಇಲಾಖೆಯಲ್ಲಿ ಇಪ್ಪತ್ತು ಜನ ಆಟಗಾರರ ನಿಯೋಜನೆಗಾಗಿ ಕಡತಗಳನ್ನ ವಿಲೇವಾರಿ ನಡೆಸಿದ್ದರೂ ಆ ಪ್ರಕ್ರಿಯೆ ಕಾರಣಾಂತರದಿಂದ ಮುಂದುವರೆಯಲಿಲ್ಲ. ಶೇ.2 ಸ್ಪೋರ್ಟ್ಸ್ ಕೋಟಾ ಮೀಸಲಾತಿ ಬಂದರೆ ನಮ್ಮೂರಿನ ಸಾಧಕ ಕ್ರೀಡಾಪಟುಗಳಿಗೆ ಜೀವನೋಪಾಯಕ್ಕೆ ದಾರಿಯಾಗುವುದು. ಪತ್ರಕರ್ತರು ಸ್ಪೋರ್ಟ್ಸ್ ಕೋಟ ಜಾರಿಯಾಗಲು ಶ್ರಮ ವಹಿಸಬೇಕೆಂದರು.
ಪ್ರೆಸ್ ಕ್ಲಬ್ ತಿಂಗಳ ಬೆಳಕು- ಗೌರವವನ್ನ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಅಧ್ಯಕ್ಷ ಎ.ಜೆ.ಶೇಖರ್ ಹಾಗೂ ಸಂಯೋಜಕರಾದ ಗೋಪಿನಾಥ್ ಕಾಪಿಕಾಡ್ ಅವರು ಸ್ವೀಕರಿಸಿದರು.
ಪ್ರೊ ಕಬಡ್ಡಿಗೆ ಆಯ್ಕೆಗೊಂಡಿರುವ ಅಕಾಡೆಮಿಯ ರಾಷ್ಟ್ರೀಯ ಮಟ್ಟದ ಆಟಗಾರರಾದ ಸಾಯಿಪ್ರಸಾದ್, ಹಸ್ಸನ್, ಮೊಹಮ್ಮದ್ ನಿಶಾನ್, ಯಶರಾಜ್ ಬಗಂಬಿಲ ಅವರನ್ನ ಅಭಿನಂದಿಸಲಾಯಿತು.
ಉಳ್ಳಾಲ ತಾಲೂಕು ಕಾ.ನಿ.ಪ. ಸಂಘದ ಅಧ್ಯಕ್ಷ ವಸಂತ ಎನ್.ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಶಶಿಧರ ಪೊಯ್ಯತ್ತಬೈಲು, ದಿನೇಶ್ ನಾಯಕ್, ಆರೀಫ್ ಯು.ಆರ್, ಬಶೀರ್, ಸತೀಶ್ ಕೊಣಾಜೆ, ವಜ್ರ ಗುಜರನ್, ಅನ್ಸಾರ್ ಇನೋಳಿ, ಮೋಹನ್ ಕುತ್ತಾರ್, ಸತೀಶ್ ಕುಮಾರ್ ಪುಂಡಿಕಾಯಿ, ಆಸೀಫ್ ಬಬ್ಬುಕಟ್ಟೆ, ಗಂಗಾಧರ್ ನೀರಾರಿ, ಸಫ್ವಾನ್ ಯು.ಆರ್, ಸುಶ್ಮಿತಾ ಸಾಮಾನಿ ಮೊದಲಾದವರಿದ್ದರು.
Ullala Press Club Celebrates Kabaddi Coach Gopinath Kapikad and Umamaheswari Academy, Highlights Need for Equal Sports Opportunities Across Regions
29-04-25 01:04 pm
HK News Desk
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
29-04-25 12:40 pm
Mangalore Correspondent
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
Mangalore, Terror Attack, Doctor Post: ಹೈಲ್ಯಾ...
27-04-25 11:09 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm