ಬ್ರೇಕಿಂಗ್ ನ್ಯೂಸ್
01-03-25 10:00 pm Mangalore Correspondent ಕರಾವಳಿ
ಮಂಗಳೂರು, ಮಾ.1: ಸಿದ್ದರಾಮಯ್ಯ ತಮ್ಮನ್ನು ಹಿಂದುಳಿದ ವರ್ಗದ ನಾಯಕನೆಂದು ತಮಟೆ ಬಾರಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಇವರ ಅಧಿಕಾರದಲ್ಲಿಯೇ ದಲಿತರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಲಾಗಿದೆ. ಇತಿಹಾಸದಲ್ಲಿ ಯಾವತ್ತೂ ಇಷ್ಟೊಂದು ಮಟ್ಟದಲ್ಲಿ ದಲಿತರ ಹಣ ದುರುಪಯೋಗ ಆಗಿದ್ದಿಲ್ಲ. ಎಸ್ಸಿ- ಎಸ್ಟಿ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಕೊಟ್ಟು ಕಬಳಿಕೆ ಮಾಡಿರುವುದು ದಲಿತೋದ್ಧಾರವೇ ಎಂದು ದಲಿತ ವರ್ಗದ ಹಿರಿಯ ನಾಯಕ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಜೆಟ್ ನಲ್ಲಿ ದಲಿತರ ಕಲ್ಯಾಣಕ್ಕೆಂದು ಒಟ್ಟು ಆದಾಯದ 24 ಶೇಕಡಾವನ್ನು ತೆಗೆದಿಡುತ್ತಾರೆ, ಆನಂತರ, ಅದನ್ನು ಬಳಸದೆ ಬೇರೆ ವಿಚಾರಗಳಿಗೆ ದುರುಪಯೋಗ ಮಾಡುತ್ತಾರೆ. ಕಾಂಗ್ರೆಸ್ ಯಾವತ್ತೂ ದಲಿತರನ್ನು ಉದ್ಧಾರ ಮಾಡಿಲ್ಲ. ನಮ್ಮ ಸಮಾಜದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅಪಾರ ಗೌರವ ಇದೆ. ಆದರೆ ಕಾಂಗ್ರೆಸ್ ಅಧ್ಯಕ್ಷರೂ ಆದ ಖರ್ಗೆಯವರನ್ನು ಕೇರಳದಲ್ಲಿ ನಾಮಿನೇಶನ್ ಸಂದರ್ಭದಲ್ಲಿ ನಡೆಸಿಕೊಂಡಿದ್ದನ್ನು ನೋಡಿದ್ದೇವೆ. ತಾಯಿ, ಮಕ್ಕಳು ಹಾಜರಿದ್ದ ಸಂದರ್ಭದಲ್ಲೇ ಖರ್ಗೆಯವರು ಕಿಟಕಿಯಲ್ಲಿ ಇಣುಕಿ ನೋಡುವ ಸ್ಥಿತಿಯಾಗಿತ್ತು. ಇದು ದಲಿತರಿಗೆ, ದಲಿತ ನಾಯಕರಿಗೆ ಮಾಡಿರುವ ದೊಡ್ಡ ಅನ್ಯಾಯ, ಅಪಮಾನ. ಹಿಂದೆ ಅಂಬೇಡ್ಕರ್ ಅವರನ್ನು ಯಾವ ರೀತಿ ಮಾಡಿದ್ದರೋ ಅದೇ ರೀತಿ ಈಗ ದಲಿತರನ್ನೂ ಮಾಡುತ್ತಿದೆ ಎಂದು ಹೇಳಿದರು.
25 ಸಾವಿರ ಕೋಟಿ ಗ್ಯಾರಂಟಿಗೆ ಬಳಕೆ
ಎಂಎಲ್ಸಿ ಎನ್.ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ಸರಕಾರ ಎಸ್ಸಿ- ಎಸ್ಟಿ ವರ್ಗದ ಹಣವನ್ನು ಬೇರೆ ಉದ್ದೇಶಕ್ಕ ಬಳಸಬಾರದೆಂದು ಕಾಯ್ದೆ ತಂದಿದ್ದನ್ನು ಸ್ವಾಗತಿಸುತ್ತೇವೆ. ಆದರೆ, ಇವರದೇ ಸರಕಾರ ದಲಿತರಿಗೆ ಮೀಸಲಿಟ್ಟ ಹಣವನ್ನು ನುಂಗಿ ಹಾಕಿ ಆ ಕಾಯ್ದೆಗೆ ಅವಮಾನಿಸಿದ್ದಾರೆ. ಸಿದ್ದರಾಮಯ್ಯ ಸರಕಾರ ದಲಿತರಿಗೆ ಬಗೆದ ದ್ರೋಹ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ಮೊದಲ ವರ್ಷ 14 ಸಾವಿರ ಕೋಟಿ, ಎರಡನೇ ವರ್ಷ 11 ಸಾವಿರ ಕೋಟಿ ಹೀಗೆ ಒಟ್ಟು ಎಸ್ಸಿ- ಎಸ್ಟಿಗೆ ಬಜೆಟ್ ನಲ್ಲಿ ತೆಗೆದಿಡಲಾಗಿದ್ದ 25,464 ಕೋಟಿ ಮೊತ್ತವನ್ನು ಗ್ಯಾರಂಟಿಗೆ ಕೊಟ್ಟಿದ್ದಾರೆ. ಇವರದ್ದು ದಲಿತೋದ್ಧಾರ ಬೊಗಳೆಯೇ, ಹಿಂದುಳಿದ ವರ್ಗದ ಕಲ್ಯಾಣವೇ ಎಂದು ಪ್ರಶ್ನೆ ಮಾಡಿದರು.
ಈ ಬಾರಿ ಬಜೆಟ್ ನಲ್ಲಿ ದಲಿತರಿಗೆ ಮೀಸಲಿಟ್ಟ 15 ಸಾವಿರ ಕೋಟಿಯನ್ನು ತೆಗೆಯಲು ಹುನ್ನಾರ ನಡೆಸಿದ್ದಾರೆ. ನಾವು ಇದಕ್ಕಾಗಿ ರಾಜ್ಯದಾದ್ಯಂತ 15 ಕಮಿಟಿಗಳನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸಲು ಹೊರಟಿದ್ದೇವೆ. 2024-25ರಲ್ಲಿ 28 ಸಾವಿರ ಕೋಟಿ ಇಟ್ಟಿದ್ದನ್ನು ಏನು ಮಾಡಿದ್ದೀರಿ, ದಲಿತ ವಿದ್ಯಾರ್ಥಿಗಳಿಗೆ ಕೊಟ್ಟಿದ್ದೀರಾ, ಬಡವರಿಗೆ ಬೋರ್ವೆಲ್ ಹಾಕಿಸಿದ್ದೀರಾ, ದಲಿತರಿಗೆ ಟ್ಯಾಕ್ಸಿ ಕಾರು ಕೊಡಿಸಿದ್ದೀರಾ.. ಕೇವಲ ಎರಡು ಸಾವಿರ ಕೊಟ್ಟರೆ ದಲಿತರು ಉದ್ಧಾರ ಆಗುತ್ತಾರೆಯೇ ಎಂದು ಪ್ರಶ್ನಿಸಿದರು. ಸರ್ಕಾರದಲ್ಲಿ ಹಣ ಇಲ್ಲವೆಂದು ಯುನಿವರ್ಸಿಟಿಗಳನ್ನು ಮುಚ್ಚುತ್ತಿದ್ದಾರೆ. ಅಲ್ಲಿ ನಿವೃತ್ತರಿಗೆ ಹಣ ಕೊಡಲು ಇವರಲ್ಲಿ ದುಡ್ಡಿಲ್ಲ. 16 ಸಲ ಬಜೆಟ್ ಮಂಡಿಸಿದ ಸಿದ್ದರಾಮಯ್ಯ, ಹಣ ಇಲ್ಲವೆಂದು ಯುನಿವರ್ಸಿಟಿಗಳನ್ನು ಬಂದ್ ಮಾಡುತ್ತಿರೋದು ನಾಚಿಕೆಗೇಡು. ಅತಿ ಹಿಂದುಳಿದ, ಹೆಚ್ಚು ದಲಿತರು ಇರುವ ಕೊಪ್ಪಳ, ಚಾಮರಾಜನಗರದಲ್ಲೂ ಯುನಿವರ್ಸಿಟಿ ಬಂದ್ ಮಾಡುತ್ತಿರೋದು ಏನನ್ನು ಸೂಚಿಸುತ್ತದೆ. ನೀವೊಬ್ಬ ದಲಿತ ವಿರೋಧಿ, ದಲಿತರ ಹಣಕ್ಕೆ ಕನ್ನ ಹಾಕಿದವರು ಎಂದು ದೂರಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಪರಿಶಿಷ್ಟ ವರ್ಗದ ವಿವಿಧ ಪ್ರಕೋಷ್ಟಗಳ ಪ್ರಮುಖರು ಉಪಸ್ಥಿತರಿದ್ದರು.
No BJP, JDS MLAs in touch with Congress, says Ramesh Jigajinagi in Mangalore. Mr. Kumar said the Congress MLAs themselves are now speaking against their own government as the guarantee schemes of the government have failed. It appears that the government will not complete its five-year term, he said.
21-08-25 02:03 pm
HK News Desk
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm