ಬ್ರೇಕಿಂಗ್ ನ್ಯೂಸ್
27-02-25 10:48 pm Mangalore Correspondent ಕರಾವಳಿ
ಮಂಗಳೂರು, ಫೆ.27: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆಗೆ ಮೂರು ತಿಂಗಳ ಹಿಂದಿನಿಂದಲೇ ಸಂಚು ಹೆಣೆಯಲಾಗಿತ್ತು ಎನ್ನುವುದನ್ನು ಆರೋಪಿಗಳು ಮೊದಲೇ ಒಪ್ಪಿಕೊಂಡಿದ್ದರು. ಆದರೆ, ಇದರ ಹಿಂದಿನ ರೂವಾರಿ ಯಾರು ಎನ್ನುವುದು ಪತ್ತೆಯಾಗಿರಲಿಲ್ಲ. ಪ್ರಮುಖ ಆರೋಪಿ ಮುರುಗನ್ ಡಿ ದೇವರ್, ಶಶಿ ತೇವರ್ ಎನ್ನುವ ಹೆಸರನ್ನು ಹೇಳಿದ್ದರೂ ಈ ಮಾದರಿಯ ಹೆಸರು ಸ್ಥಳೀಯರದ್ದಲ್ಲ ಎಂದು ಆತನನ್ನು ಮತ್ತೆ ಬೆಂಡೆತ್ತಿದ್ದರು. ಕೊನೆಗೆ, ಸ್ಥಳೀಯ ನೋಟೆಡ್ ವ್ಯಕ್ತಿಗಳ ಫೋಟೋಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ, ಭಾಸ್ಕರ ಬೆಳ್ಚಪ್ಪಾಡ ಎನ್ನುವ ವೃದ್ಧ ವ್ಯಕ್ತಿಯನ್ನು ನೋಡಿ ತಲೆದೂಗಿ ಬಿಟ್ಟಿದ್ದ.
ಪೊಲೀಸರ ಪ್ರಕಾರ, ಭಾಸ್ಕರ ಬೆಳ್ಚಪ್ಪಾಡ ಮೂಲತಃ ವಿಟ್ಲ ಸಮೀಪದ ಕನ್ಯಾನ ನಿವಾಸಿಯಾಗಿದ್ದರೂ, ಆತ ನೆಲೆ ಕಂಡುಕೊಂಡಿದ್ದು ಮುಂಬೈ ಮತ್ತು ಗುಜರಾತ್ ನಲ್ಲಿ. ಅಲ್ಲಿದ್ದುಕೊಂಡೇ ಬ್ಯಾಂಕ್ ಇನ್ನಿತರ ದರೋಡೆಗಳನ್ನು ಮಾಡಿಸುತ್ತಿದ್ದ. ನಟೋರಿಯಸ್ ಗ್ಯಾಂಗ್ ಸದಸ್ಯರಿಗೆ ಸ್ಕೆಚ್ ಗಳನ್ನು ಮಾಡಿಸಿಕೊಟ್ಟು ದರೋಡೆ ಕೃತ್ಯ ಜಾರಿಗೊಳಿಸುತ್ತಿದ್ದ. ಎರಡು ವರ್ಷಗಳ ಹಿಂದೆ ತೊಕ್ಕೊಟ್ಟಿನಲ್ಲಿ ಸೂಪರ್ ಗೋಲ್ಡ್ ಜುವೆಲ್ಲರಿಯನ್ನು ದೋಚುವುದಕ್ಕೆ ಎಲ್ಲ ತಯಾರಿ ನಡೆದಿತ್ತು. ಉಳ್ಳಾಲದ ಮಂಚಿಲದಲ್ಲಿ ಹಳೆಯ ಮನೆಯೊಂದನ್ನು ಬಾಡಿಗೆ ಪಡೆದು ದರೋಡೆಗೆ ಪ್ಲಾನ್ ಹಾಕಿದ್ದರು. ಆ ಪ್ರಕರಣದಲ್ಲಿಯೂ ಹೆಚ್ಚಿನವರು ಬಿಹಾರಿ, ಯುಪಿಯವರಾಗಿದ್ದರೆ, ಒಬ್ಬನೇ ಸ್ಥಳೀಯ ವ್ಯಕ್ತಿಯಾಗಿ ಭಾಸ್ಕರ ಬೆಳ್ಚಪ್ಪಾಡ ಸಿಕ್ಕಿಬಿದ್ದಿದ್ದ.
ಸಿಸಿಬಿ ಇನ್ಸ್ ಪೆಕ್ಟರ್ ಆಗಿದ್ದ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸರು 2022ರ ನವೆಂಬರ್ 28ರಂದು ರಾತ್ರಿ ಹಠಾತ್ ದಾಳಿ ನಡೆಸಿ ಭಾಸ್ಕರ್ ಬೆಳ್ಚಡ ಸೇರಿದಂತೆ 9 ಮಂದಿಯನ್ನು ಅರೆಸ್ಟ್ ಮಾಡಿದ್ದರು. ಗುಜರಾತ್ ನಿವಾಸಿಯೆಂದು ತೋರಿಸಿಕೊಂಡಿದ್ದ ಭಾಸ್ಕರ ಬೆಳ್ಚಡ(65), ನೇಪಾಳಿ ಮೂಲವಾಗಿದ್ದರೂ ಗುಜರಾತಿನಲ್ಲಿ ನೆಲೆಸಿದ್ದ ದಿನೇಶ್ ರಾವಲ್(38), ಜಾರ್ಖಂಡ್ ಮೂಲದ ಮಹಮ್ಮದ್ ಜಮೀಲ್ ಶೇಖ್ (29), ಇಂಜಮಾಮುಲ್ ಹಕ್(27), ನೇಪಾಳ ಮೂಲದ ಬಿಸ್ತಾ ರೂಪ್ ಸಿಂಗ್ (24), ಕೃಷ್ಣ ಬಹಾದುರ್ ಬೊಗಾಟ(41), ಜಾರ್ಖಂಡ್ ಮೂಲದ ಇಮ್ದದಾದುಲ್ ರಜಾಕ್ ಶೇಕ್ (32), ಬೈವೂಲ್ ಶೇಖ್ (31), ಇಮ್ರಾನ್ ಶೇಕ್ (30) ಎಂಬವರನ್ನು ಬಂಧಿಸಲಾಗಿತ್ತು.
ದರೋಡೆಗೆ ಮೊದಲೇ ಸಿಕ್ಕಿಬಿದ್ದಿದ್ದು ಹೇಗೆ ?
ರೈಲಿನಲ್ಲಿ ಮಂಗಳೂರಿಗೆ ಬಂದಿದ್ದ ತಂಡದಲ್ಲಿ ಆರು ಮಂದಿ ಉಳ್ಳಾಲದ ಮಂಚಿಲದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರೆ, ಭಾಸ್ಕರ ಸೇರಿ ಮೂವರು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ದರೋಡೆ ನಡೆಸುವುದಕ್ಕೂ ಮುನ್ನ ಕೊಣಾಜೆ, ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನಗಳನ್ನು ಕದ್ದಿದ್ದು, ಆಚೀಚೆ ಸುತ್ತಾಡಲು ಅದನ್ನು ಬಳಸಿಕೊಂಡಿದ್ದರು. ಬೈಕ್ ಕಳವು ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ಆಧಾರದಲ್ಲಿ ಒಬ್ಬ ಯುವಕನ ಬೆನ್ನುಬಿದ್ದು ಅರೆಸ್ಟ್ ಮಾಡಿದಾಗ, ದರೋಡೆ ಸಂಚು ತಿಳಿದುಬಂದಿತ್ತು. ಇದರ ಬೆನ್ನಲ್ಲೇ ಆಗಿನ ಪೊಲೀಸ್ ಕಮಿಷನರ್ ಶಶಿಕುಮಾರ್ ಸೂಚನೆಯಂತೆ ಸಿಸಿಬಿ ಪೊಲೀಸರು ದಾಳಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ, ದರೋಡೆಗೆ ರೆಡಿ ಮಾಡಿಕೊಂಡಿದ್ದ ಗ್ಯಾಸ್ ಕಟ್ಟರ್, ಸುತ್ತಿಗೆ, ಹೇಕ್ಸೋ ಬ್ಲೇಡ್ ಸೇರಿದಂತೆ ಹಲವು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿತ್ತು.
ಸಾಹೇಬ್ ಗಂಜ್ ತಂಡದ ಸದಸ್ಯರು
ಒಂಬತ್ತು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಿಹಾರದ ಸಾಹೇಬ್ ಗಂಜ್ ದರೋಡೆ ತಂಡದ ಸದಸ್ಯರು ಎನ್ನುವುದು ಬೆಳಕಿಗೆ ಬಂದಿತ್ತು. ಸಾಹೇಬ್ ಗಂಜ್ ಗ್ಯಾಂಗ್ ಜಾರ್ಖಂಡ್ ಮೂಲದ್ದಾಗಿದ್ದು, ಉತ್ತರ ಭಾರತದಲ್ಲಿ ಕುಖ್ಯಾತಿ ಪಡೆದಿದೆ. ಬ್ಯಾಂಕ್ ರಾಬರಿ, ಜುವೆಲ್ಲರಿ ಶಾಪ್ ಗಳನ್ನು ಗುರಿಯಾಗಿಸಿ ದರೋಡೆ ನಡೆಸುವ ಕೃತ್ಯದಲ್ಲಿ ತೊಡಗಿಕೊಂಡಿದೆ. ನಟೋರಿಯಸ್ ತಂಡದಲ್ಲಿ ನೇಪಾಳಿ ಮೂಲದವರೂ ಸದಸ್ಯರಾಗಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಬ್ಯಾಂಕ್, ಜುವೆಲ್ಲರಿ ದರೋಡೆಗೆ ಸಂಚು ಹೂಡುವುದು, ಆಸುಪಾಸಿನಲ್ಲಿ ಕೆಲವು ದಿನ ಉಳಿದುಕೊಂಡು ಕೃತ್ಯ ನಡೆಸಿ ಪರಾರಿಯಾಗುವುದು ಇವರ ಖಯಾಲಿ. ಕೃತ್ಯದ ಬಳಿಕ ನೇಪಾಳಕ್ಕೆ ತೆರಳಿ ಕೆಲವು ತಿಂಗಳ ಕಾಲ ಅಲ್ಲಿಯೇ ಇದ್ದುಕೊಂಡು ಪೊಲೀಸರು ಹುಡುಕಾಟ ನಿಲ್ಲಿಸಿದ ಬಳಿಕ ಮರಳುತ್ತಾರೆ.
ಅಂದು ಬಂಧನಕ್ಕೀಡಾದ ಭಾಸ್ಕರ ಬೆಳ್ಚಡ, ದಿನೇಶ್ ರಾವಲ್, ಇಂಜಮಾಮುಲ್ ಹಕ್, ಬಿಸ್ತಾ ರೂಪ್ ಸಿಂಗ್, ಕೃಷ್ಣ ಬಹಾದುರ್ ಬೊಗಾಟ ವಿರುದ್ಧ ಮುಂಬೈ, ಪುಣೆ, ಸೂರತ್, ಮಧ್ಯಪ್ರದೇಶದ ಮಾಧವ್ ನಗರ್, ಕೇರಳದ ತ್ರಿಶ್ಶೂರ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಇದೇ ಮಾದರಿಯ ಕೃತ್ಯ ನಡೆಸಿದ್ದಾರೆ. ದರೋಡೆ ಸಂಚಿನಲ್ಲಿ ಸಿಕ್ಕಿಬೀಳುವುದಕ್ಕೂ ಮುನ್ನ ಇವರು ನಾಟೆಕಲ್ ನಲ್ಲಿ ಸ್ಕೂಟರ್ ಸವಾರನನ್ನು ತಡೆದು ಕಬ್ಬಿಣದ ರಾಡ್ ನಲ್ಲಿ ಹೊಡೆದು ವಾಹನವನ್ನು ಕದ್ದುಕೊಂಡು ತೆರಳಿದ್ದರು. ಆನಂತರ, ಉಳ್ಳಾಲ ಠಾಣೆ ವ್ಯಾಪ್ತಿಯ ಅಂಬಿಕಾ ರೋಡ್, ಉಚ್ಚಿಲದಲ್ಲಿಯೂ ಅಂತಹದ್ದೇ ಕೃತ್ಯ ನಡೆದಿತ್ತು. ಹೀಗಾಗಿ ಪೊಲೀಸರು ಬೆನ್ನುಬಿದ್ದುದರಿಂದ ದರೋಡೆಗೆ ಸಂಚು ಹೂಡಿದ್ದ ಆರೋಪಿಗಳು ಸಿಕ್ಕಿಬೀಳುವಂತಾಗಿತ್ತು.
ಹಳೆ ಕೇಸಿನಲ್ಲೂ ಇವರ ಕೈವಾಡ ಇದ್ಯಾ?
2015ರ ನವೆಂಬರ್ ನಲ್ಲಿ ಕಿನ್ನಿಗೋಳಿಯಲ್ಲಿ ಎಸ್.ಕೆ. ಗೋಲ್ಡ್ ಸ್ಮಿತ್ ಸಹಕಾರಿ ಸಂಘದ ಕಚೇರಿಗೆ ನುಗ್ಗಿ 20 ಕೇಜಿಗೂ ಹೆಚ್ಚು ಚಿನ್ನಾಭರಣ ಲೂಟಿ ಮಾಡಲಾಗಿತ್ತು. ಅದೇ ವರ್ಷ ಬಿ.ಸಿ.ರೋಡ್ ನಲ್ಲಿ ಭಗವತಿ ಸಹಕಾರಿ ಬ್ಯಾಂಕಿನ ಕಚೇರಿಗೂ ನುಗ್ಗಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿತ್ತು. ಇವೆರಡು ಪ್ರಕರಣದಲ್ಲಿಯೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲಾಗದೆ, ಸಿ ರಿಪೋರ್ಟ್ ಹಾಕಿ ಕೈತೊಳೆದುಕೊಂಡಿದ್ದರು. ಇದೀಗ 25 ವರ್ಷಗಳಿಂದಲೂ ಮುಂಬೈ, ಗುಜರಾತಿನಲ್ಲಿ ನೆಲೆಸಿದ್ದಲ್ಲದೆ, ನಟೋರಿಯಸ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡು ಬ್ಯಾಂಕ್ ದರೋಡೆಯನ್ನೇ ವೃತ್ತಿ ಮಾಡಿಕೊಂಡಿದ್ದ ಭಾಸ್ಕರ ಬೆಳ್ಚಡ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಳೆಯ ಎರಡು ದರೋಡೆ ಪ್ರಕರಣವನ್ನೂ ಟ್ರೇಸ್ ಮಾಡಲು ಸಾಧ್ಯವಾಗುತ್ತಾ ಎನ್ನುವುದಕ್ಕೆ ಒಂದಷ್ಟು ಶ್ರಮ ಹಾಕಬಹುದು.
Mangalore Kotekar robbey case, Bhaskar Belchapada was a active member of Saheb Ganj robbery gang, crime report. Crime report by Headline Karnataka on the history of kotekar bank robbery mastermind Bhaskar Belchada.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm