ಬ್ರೇಕಿಂಗ್ ನ್ಯೂಸ್
16-02-25 09:14 pm Mangaluru Correspondent ಕರಾವಳಿ
ಉಳ್ಳಾಲ, ಫೆ.16: ಇನ್ನೂರಕ್ಕೂ ಅಧಿಕ ಮಂದಿಗೆ ಉದ್ಯೋಗ ಕೊಟ್ಟಿರುವ ಸಾಗರ್ ಸಂಸ್ಥೆಯು ಪರೋಕ್ಷವಾಗಿ ಇನ್ನೂರು ಕುಟುಂಬಗಳ ಬಾಳನ್ನು ಬೆಳಗಿಸಿದೆ. ಉಳ್ಳಾಲ ಪ್ರದೇಶದಲ್ಲಿ ಬಂಡವಾಳ ಹಾಕುವ ಉದ್ಯಮಿಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಎಲ್ಲಾ ಅಧಿಕಾರಿಗಳಿಗೂ ಸೂಚಿಸಿದ್ದೇನೆ. ಹೊಸ ಹೊಸ ಉದ್ಯಮಗಳು ಬಂದು ಆರ್ಥಿಕ ಸಂಚಲನ ನಡೆದಾಗ ಪ್ರದೇಶ ಅಭಿವೃದ್ಧಿ ಸಾಧ್ಯ. ಸಾಗರ್ ಸಂಸ್ಥೆಯ ಮಾಲಕರಾದ ಇಸ್ಮಾಯಿಲ್ ಮತ್ತು ಅವರ ಸಹೋದರರು ಸಣ್ಣ ವ್ಯಾಪಾರದಿಂದ ಹಂತ ಹಂತವಾಗಿ ಮೇಲೆ ಬಂದಿದ್ದು, ಅವರು ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿರುವುದರ ಬಗ್ಗೆ ಎಂದಿಗೂ ವಿಜೃಂಭಿಸದೆ, ಅತ್ಯಂತ ಶಾಂತಿ, ಸಹನೆ, ಸರಳತೆಯಿಂದಲೇ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟು ಹೃದಯಭಾಗದಲ್ಲಿ ಸ್ವಂತ ಬಹುಮಹಡಿ ಕಟ್ಟಡದಲ್ಲಿ ಆರಂಭಗೊಂಡ ಸಾಗರ್ ಸಿಲ್ಕ್ಸ್ ಆ್ಯಂಡ್ ಸ್ಯಾರೀಸ್ ಮಳಿಗೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಆಗಿನ ಕಾಲದಲ್ಲಿ ಅಭಿವೃದ್ಧಿ ಹೊಂದದ ತೊಕ್ಕೊಟ್ಟಿನಲ್ಲಿ ಧೈರ್ಯದಿಂದ ಉಡುಪುಗಳ ಮಳಿಗೆಯನ್ನು ಆರಂಭಿಸಿದ್ದ ಇಸ್ಮಾಯಿಲ್ ಮತ್ತವರ ಸಹೋದರರು ಗ್ರಾಹಕರ ವಿಶ್ವಾಸ ಗಳಿಸುವ ಮೂಲಕ ಬಟ್ಟೆ ವ್ಯಾಪಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇಂದು ಸಾಗರ್ ಉಡುಪುಗಳ ಮಳಿಗೆಯು ತೊಕ್ಕೊಟ್ಟು ಪರಿಸರಕ್ಕೆ ಮಾತ್ರ ಸೀಮಿತವಾಗಿರದೆ. ಕಾಸರಗೋಡು, ಪುತ್ತೂರು, ಮಂಗಳೂರಿಗರು ಕೂಡ ಇಲ್ಲಿಗೆ ಬಂದು ಬಟ್ಟೆ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಯಶಸ್ವಿ ಉದ್ಯಮ ನಡೆಸಿ ಮುನ್ನಡೆಯುವ ಮೂಲಕ ಯುವ ಸಮುದಾಯಕ್ಕೆ ಸಾಗರ್ ಸಂಸ್ಥೆ ಸ್ಫೂರ್ತಿಯಾಗಿದೆ ಎಂದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ಸ್ಫರ್ಧಾತ್ಮಕ ವ್ಯಾಪಾರ ಕ್ಷೇತ್ರದಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಸೇವೆಯನ್ನ ಸಾಗರ್ ಸಂಸ್ಥೆ ನೀಡುತ್ತಾ ಬಂದಿದೆ. ಗ್ರಾಹಕರಲ್ಲಿ ಶಾಂತಿ, ಸಹನೆಯಿಂದ ವರ್ತಿಸಿ ಅವರನ್ನ ತೃಪ್ತಿಪಡಿಸುವ ದೊಡ್ಡ ಸಿಬ್ಬಂದಿ ವರ್ಗವನ್ನು ಸಂಸ್ಥೆಯು ಹೊಂದಿದೆ ಎಂದರು.
ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್.ಅಬ್ದುಲ್ಲಾ, ತೊಕ್ಕೊಟ್ಟು ವರ್ತಕರ ಸಂಘದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕೌನ್ಸಿಲರ್ ಅಯ್ಯೂಬ್ ಮಂಚಿಲ, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ಸಿಪಿಎಂ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಹಿರಿಯ ಪತ್ರಕರ್ತ ವಿದ್ಯಾಧರ ಶೆಟ್ಟಿ, ಮಂಗಳೂರು ತಾ.ಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಶುಭ ಹಾರೈಸಿದರು. ತೊಕ್ಕೊಟ್ಟು ಸೈಂಟ್ ಸೆಬಾಸ್ಟಿಯನ್ ಚರ್ಚ್ನ ಫಾ.ಸಿಪ್ರಿಯಾನ್ ಪಿಂಟೋ, ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಸಲೀಂ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ನಗರಸಭೆಯ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ ಹರೀಶ್, ಚಾರ್ಟಡ್ ಅಕೌಂಟೆಂಟ್ ಅಬ್ದುಲ್ ಸಮದ್, ಸಾಗರ್ ಕಲೆಕ್ಷನ್ಸ್ ಮಾಲೀಕರಾದ ಇಸ್ಮಾಯಿಲ್ ಯು.ಎ ಮೊದಲಾದವರು ಉಪಸ್ಥಿತರಿದ್ದರು.
ನಾಸೀರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು.ಯು.ಬಿ. ಸಲೀಂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಹಿತ್ ಉಳ್ಳಾಲ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಎಂ.ಸಿ.ಅಬ್ದುಲ್ ರಹ್ಮಾನ್, ಹ್ಯಾಡ್ರಿಯನ್ ವೇಗಸ್, ಫಾತಿಮಾ ಶಝಾ, ಯಶಪಾಲ್ ಬಗಂಬಿಲ ಅವರನ್ನು ಸನ್ಮಾನಿಸಲಾಯಿತು.
ಹೊಸ ಮಳಿಗೆಯಲ್ಲಿ ಮದುವೆ ಸಮಾರಂಭಗಳಿಗೆ ಬೇಕಾದ ಎಲ್ಲಾ ವಸ್ತ್ರಗಳು ಲಭ್ಯವಿದೆ. 10 ಸಾವಿರ ರೂ.ಗಿಂತ ಅಧಿಕ ವೌಲ್ಯದ ಉಡುಪು ಖರೀದಿಯಲ್ಲಿ ವಿಶೇಷ ಕೊಡುಗೆ ನೀಡಲಾಗುವುದು. 1985ರಲ್ಲಿ ಆರಂಭಗೊಂಡ ಸಾಗರ್ ಸಂಸ್ಥೆಯ ಅಧೀನದಲ್ಲಿ ತೊಕ್ಕೊಟ್ಟಿನಲ್ಲಿ ಸಾಗರ್ ಕಲೆಕ್ಷನ್ಸ್ ಮತ್ತು ಮಂಗಳೂರಿನ ಟೋಕ್ಯೊ ಮಾರ್ಕೆಟ್ನಲ್ಲಿ ಸಾಗರ್ ವೆಡ್ಡಿಂಗ್ ಮಳಿಗೆ ಕಾರ್ಯಾಚರಿಸುತ್ತಿದೆ.
Sagar silks and sarees inaugurated at Thokottu in mangalore by speaker UT Khader and MLA Vedavyas Kamath. Speaker Khader also encouraged businessmen to invest in Ullal.
21-08-25 06:24 pm
Bangalore Correspondent
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm