ಬ್ರೇಕಿಂಗ್ ನ್ಯೂಸ್
10-05-23 10:35 pm Mangalore Correspondent ಕರಾವಳಿ
ಮಂಗಳೂರು, ಮೇ 10 : ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿಗೆ ಕಲ್ಲೆಸೆತ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದಿದ್ದು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿದ್ದಾರೆ. ಸ್ಥಳಕ್ಕೆ ಭೇಟಿಯಿತ್ತ ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಕಾವೂರು ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಹೇರಿದ್ದಾರೆ.
ಮೂಡುಬಿದ್ರೆ ಮತಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆಯ ಮತಗಟ್ಟೆ ಒಂದಕ್ಕೆ ಸಂಜೆ ವೇಳೆಗೆ ಮಿಥುನ್ ರೈ ತೆರಳಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಸಂಜೆ ಏಳು ಗಂಟೆ ವೇಳೆಗೆ ಅಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಈ ವೇಳೆ, ಮಿಥುನ್ ರೈ ಕಾರು ನಿಲ್ಲಿಸಿದ್ದು ಜೊತೆಗಿದ್ದ ಬೆಂಬಲಿಗರು ಕಾಂಗ್ರೆಸ್ ಜೈಕಾರ ಹಾಕಿದ್ದಾರೆ. ಕೂಡಲೇ ಎರಡೂ ಕಡೆಯಲ್ಲಿ ಗುಂಪು ಜಮಾವಣೆ ಆಗಿದ್ದು ಕಾರ್ಯಕರ್ತರು ಪರಸ್ಪರ ವಿರುದ್ಧ ಘೋಷಣೆ ಕೂಗಿದ್ದಾರೆ. ಎರಡು ತಂಡಗಳ ಮಧ್ಯೆ ವಾಗ್ವಾದ, ತಳ್ಳಾಟ ನಡೆಯುತ್ತಿದ್ದಾಗಲೇ ಕಲ್ಲು ತೂರಾಟ ಆಗಿದ್ದು ಮೂವರು ಕಾಂಗ್ರೆಸ್ ಕಾರ್ಯಕರ್ತರು ಏಟು ಬಿದ್ದು ಗಾಯಗೊಂಡಿದ್ದಾರೆ.
ಆನಂತರ, ಸ್ಥಳದಲ್ಲಿ ಪೊಲೀಸರು ಜಮಾವಣೆಗೊಂಡು ಎರಡೂ ತಂಡಗಳು ಜಗಳ ನಡೆಸದಂತೆ ತಡೆದಿದ್ದಾರೆ. ಕಾರ್ಯಕರ್ತರ ರಂಪಾಟ ಎಷ್ಟಿತ್ತು ಎಂದರೆ, ಹೊಡೆದಾಡಲು ನುಗ್ಗಿ ಬರುತ್ತಿದ್ದರು. ಪೊಲೀಸರು ಕೈ ಕೈ ಹಿಡಿದು ಅಡ್ಡಕ್ಕೆ ತಡೆಬೇಲಿಯಾಗಿ ನಿಂತು ಕಾರ್ಯಕರ್ತರು ಘರ್ಷಣೆ ನಡೆಸದಂತೆ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಪೊಲೀಸ್ ಕಮಿಷನರ್ ಸ್ಥಳಕ್ಕೆ ಬಂದು ಸ್ಥಳದಲ್ಲಿ ಕೆಎಸ್ ಆರ್ ಪಿ ಪಡೆಯನ್ನು ನಿಯೋಜಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಕುಲದೀಪ್ ಜೈನ್, ಘಟನೆ ಹಿನ್ನೆಲೆಯಲ್ಲಿ ಕಾವೂರು ಠಾಣೆ ವ್ಯಾಪ್ತಿಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದೇವೆ. ಮೂಡುಶೆಡ್ಡೆಗೆ ಹೊರಭಾಗದ ಜನರು ಬರದಂತೆ ಚೆಕ್ ಪೋಸ್ಟ್ ಹಾಕಿದ್ದೇವೆ ಎಂದರು. ಕಾರ್ಯಕರ್ತರು ಘೋಷಣೆ ಕೂಗಿದ ಕಾರಣಕ್ಕೆ ಸಮಸ್ಯೆ ಉಂಟಾಗಿದೆ ಎಂಬ ಮಾಹಿತಿ ಇದೆ. ತನಿಖೆ ನಡೆಸುತ್ತೇವೆ, ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಲ್ಪ ಗಾಯವಾಗಿದೆ. ಒಬ್ಬರು ಪೊಲೀಸ್ ಸಿಬಂದಿಗೂ ಕಲ್ಲೇಟಿನಿಂದ ಗಾಯ ಆಗಿದೆ. ಉದ್ರಿಕ್ತ ಗುಂಪನ್ನು ಪೊಲೀಸರು ಚದುರಿಸಿದ್ದಾರೆ, ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದರು.
ಮೋದಿ ಮೋದಿ ಕೂಗಿಗೆ ಕಾಂಗ್ರೆಸ್ ಜೈಕಾರ ; ಮಿಥುನ್ ರೈ ಕಾರಿಗೆ ಕಲ್ಲು, ಮೂಡುಶೆಡ್ಡೆ ಉದ್ವಿಗ್ನ
Mangalore Moodushedde stone pelted on Mithun Rai car, fight between Congress BJP, 144 section imposed in Kavoor limits. Tension erupted at Moodushedde gram panchayath limits as a scuffle broke out between workers of the Bharatiya Janata Party (BJP) and the Congress on Wednesday, .The incident occurred during the visit of Congress candidate Mithun Rai to the area, leading to a clash between Congress workers and BJP
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm