ಬ್ರೇಕಿಂಗ್ ನ್ಯೂಸ್
24-07-22 08:25 pm Mangalore Correspondent ಕರಾವಳಿ
ಮಂಗಳೂರು, ಜುಲೈ 24: ಈ ಬಾರಿ ಜುಲೈ ಮೊದಲ ವಾರದಲ್ಲಿ ಕರಾವಳಿ ಭಾಗದಲ್ಲಿ ನಿರಂತರ ಹತ್ತು ದಿನಗಳ ಮಳೆಯಾಗಿತ್ತು. ಮಂಗಳೂರಿನ ಕೊಟ್ಟಾರ ಸೇರಿದಂತೆ ಕೆಲವು ಕಡೆಗಳಲ್ಲಿ ನೀರು ರಸ್ತೆಗಳ ಮೇಲೆ ಬಂದಿತ್ತು. ಚರಂಡಿ, ತೋಡುಗಳು ತುಂಬಿ ರಸ್ತೆಯೇ ತೋಡಾಗಿತ್ತು. ಆದರೆ ಪ್ರತಿ ಬಾರಿ ಒಂದೇ ಮಳೆಗೆ ರಾಡಿಯಾಗುತ್ತಿದ್ದ ಪ್ರದೇಶದಲ್ಲಿ ಈ ಸಲ ಮಳೆನೀರು ರಸ್ತೆಗೆ ಬಂದಿಲ್ಲ. ಯಾವತ್ತೂ ಮಳೆಗಾಲದಲ್ಲಿ ಸಂಕಷ್ಟ ಪಡುತ್ತಿದ್ದ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿಲ್ಲ. ಆ ಮಟ್ಟಿಗೆ ಅಲ್ಲಿನ ನಿವಾಸಿಗಳು ದೀರ್ಘ ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೇನು ಕಾರಣ ಎಂದು ಹುಡುಕಾಟಕ್ಕೆ ತೊಡಗಿದರೆ, ಅಲ್ಲಿನ ಬದಲಾದ ವಸ್ತುಸ್ಥಿತಿಯೇ ನಮ್ಮ ಕಣ್ಣಿಗೆ ಕಾಣುತ್ತದೆ.
ಬಳ್ಳಾಲ್ ಬಾಗಲ್ಲಿ ನೀರು ಬಂದಿಲ್ಲ ಯಾಕೆ ?
ಬಳ್ಳಾಲ್ ಬಾಗಿನ ಜನತಾ ಡಿಲಕ್ಸ್ ರಸ್ತೆಯ ರಾಜಕಾಲುವೆಯಲ್ಲಿ ಪ್ರತಿ ಬಾರಿಯೂ ಮಳೆಗೆ ಕೊಚ್ಚೆ ನೀರು ಮೇಲೆ ಬರುತ್ತಿತ್ತು. ಇದರಿಂದ ಕೊಡಿಯಾಲಗುತ್ತು ಮತ್ತು ಟಿಎಂಎ ಪೈ ಹಾಲ್ ಆಸುಪಾಸಿನಲ್ಲಿ ಮನೆಗಳಿಗೆ ನೀರು ನುಗ್ಗಿ ತೀವ್ರ ಸಂಕಷ್ಟ ಪಡುವ ಸ್ಥಿತಿ ಎದುರಾಗುತ್ತಿತ್ತು. 2018ರಲ್ಲಿ ಮೇ 29ರಂದು ಒಂದೇ ದಿನ ಸುರಿದ ಮಳೆಗೆ ಇಲ್ಲಿನ ರಸ್ತೆಯ ಪೂರ್ತಿ ನೀರು ತುಂಬಿ ದೋಣಿಯಲ್ಲಿ ಸಾಗುವ ಸ್ಥಿತಿ ಉಂಟಾಗಿತ್ತು. ಕುದ್ರೋಳಿಯ ಗುಜರಾತಿ ಕಾಲನಿ, ಅಳಕೆಯ ನಿವಾಸಿಗಳು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಸಂಕಷ್ಟ ಪಟ್ಟಿದ್ದರು. ಅಪಾರ್ಟ್ಮೆಂಟ್ ಕಟ್ಟಡಗಳಿಗೂ ನೀರು ಸುತ್ತುವರಿದು 2-3 ಅಡಿ ಎತ್ತರಕ್ಕೆ ನಿಂತಿದ್ದರಿಂದ ಜನರ ಸಂಚಾರಕ್ಕೆ ದೋಣಿ ಬಳಸಲಾಗಿತ್ತು. ಆದರೆ ಈ ಬಾರಿಯ ಹತ್ತು ದಿನಗಳ ನಿರಂತರ ಮಳೆಗೆ ಹೋಲಿಸಿದಲ್ಲಿ ಆ ಭಾಗದಲ್ಲಿ ದೊಡ್ಡ ಸಂಕಷ್ಟವೇ ಎದುರಾಗಬೇಕಿತ್ತು.
ಆದರೆ ಅಲ್ಲೆಲ್ಲ ಈ ಬಾರಿ ಅಂಥ ಸ್ಥಿತಿ ಎದುರಾಗಿಲ್ಲ. ನಿರಂತರ ಮಳೆ ಸುರಿದರೂ, ನೀರು ಸರಾಗವಾಗಿ ರಾಜಕಾಲುವೆಯಲ್ಲೇ ಹರಿದು ಹೋಗಿತ್ತು ಎನ್ನುತ್ತಾರೆ ಅಲ್ಲಿನ ನಿವಾಸಿಗಳು. ಈ ಬಗ್ಗೆ ಅಲ್ಲಿನ ಕಾರ್ಪೊರೇಟರ್ ಬಳಿ ಪ್ರಶ್ನೆ ಮಾಡಿದರೆ, ರಾಜಕಾಲುವೆಗೆ ತಡೆಗೋಡೆ ಕಟ್ಟಿದ್ದೇ ಕಾರಣ ಎನ್ನುತ್ತಾರೆ. ಪ್ರತಿ ಬಾರಿ ಮಳೆಯ ಸಂದರ್ಭದಲ್ಲಿ ಕಾಲುವೆಯಲ್ಲಿ ನೀರು ಉಕ್ಕಿ ಬಂದು ಆಸುಪಾಸಿನ ಮನೆಗಳಿಗೆ ನುಗ್ಗುತ್ತಿತ್ತು. ನೀರು ನುಗ್ಗುವ ಜಾಗದಲ್ಲಿ ಅಡ್ಡಲಾಗಿ ಕಾಂಕ್ರೀಟ್ ತಡೆಗೋಡೆ ಹಾಕಲಾಗಿದೆ. ಶಾಸಕ ವೇದವ್ಯಾಸ ಕಾಮತ್ ಅನುದಾನದಿಂದ ತಡೆಗೋಡೆ ನಿರ್ಮಿಸಲಾಗಿದ್ದು, ಅದೇ ಕಾರಣಕ್ಕೆ ಈ ಬಾರಿ ಮನೆಗಳಿಗೆ ನೀರು ನುಗ್ಗುವ ಸ್ಥಿತಿ ತಪ್ಪಿದೆ ಎನ್ನುತ್ತಾರೆ. ಹಿಂದೆ ಜನತಾ ಡಿಲಕ್ಸ್ ರೋಡ್ ಉದ್ದಕ್ಕೂ ಕಾಲುವೆಯ ಇಕ್ಕೆಲದಲ್ಲಿ ತಡೆಗೋಡೆ ಇರಲಿಲ್ಲ. ಈ ಬಾರಿ ಕಾಂಕ್ರೀಟ್ ತಡೆ ಇದ್ದುದರಿಂದ ಕಾಲುವೆಯಲ್ಲಿ ನೀರು ತುಂಬಿ ಹರಿದರೂ ಆಸುಪಾಸಿನ ಮನೆಗಳಿಗೆ ತೊಂದರೆ ಆಗಿಲ್ಲ. ಚಿತ್ರದಲ್ಲಿ ಹಿಂದೆ ಇದ್ದ ಮತ್ತು ಈಗ ಕಾಂಕ್ರೀಟ್ ತಡೆಗೋಡೆ ಆಗಿರುವುದನ್ನು ಗಮನಿಸಬಹುದು.
ಮುಳುಗುತ್ತಿದ್ದ ಜೆಪ್ಪು ನಿವಾಸಿಗಳ ನಿಟ್ಟುಸಿರು
ಜೆಪ್ಪಿನಮೊಗರು ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಮಳೆಗಾಲದಲ್ಲಿ ಸಮಸ್ಯೆ ಆಗುತ್ತಿತ್ತು. ಪಂಪ್ವೆಲ್ ಕಡೆಯಿಂದ ನಗರ ಪ್ರದೇಶದ ನೀರು ಜಪ್ಪಿನಮೊಗರು ಮೂಲಕ ದೊಡ್ಡ ಕಾಲುವೆಗೆ ಸೇರುತ್ತಿದ್ದುದರಿಂದ ಜೋರು ಮಳೆಯಾದರೆ ಪ್ರತಿ ಬಾರಿ ಅಲ್ಲಿನ ತಗ್ಗು ಪ್ರದೇಶಗಳು ಜಲಾವೃತ ಆಗುತ್ತಿತ್ತು. ನೀರು ಹರಿಯಲು ಜಾಗ ಸಾಲದೆ, ಆಸುಪಾಸಿನ ಮನೆಗಳಿಗೆ ನುಗ್ಗುವ ಸ್ಥಿತಿ ಇತ್ತು. ಈ ಬಗ್ಗೆ ಅಲ್ಲಿನ ನಿವಾಸಿಗಳು ಕಾಲುವೆಗೆ ತಡೆಗೋಡೆ ಕಟ್ಟುವಂತೆ ಜನಪ್ರತಿನಿಧಿಗಳಿಗೆ ಮನವಿ ಹೇಳಿಕೊಂಡು ಬಂದಿದ್ದರು. ಆದರೆ ಸೂಕ್ತ ಕಾಮಗಾರಿ ಆಗಿರಲಿಲ್ಲ. ಈ ಬಾರಿ, ಅಲ್ಲಿಯೂ ಕಾಂಕ್ರೀಟ್ ತಡೆಗೋಡೆ ಕಾಮಗಾರಿ ಮಾಡಲಾಗಿದೆ. ಮಳೆ ನೀರು ಮತ್ತು ಆಸುಪಾಸಿನ ಕೊಳಚೆ ನೀರು ಹರಿದು ಹೋಗುವ ಕಾಲುವೆಗೆ ಇಕ್ಕೆಲದಲ್ಲಿ ಕಾಂಕ್ರೀಟ್ ಗೋಡೆ ಕಟ್ಟಲಾಗಿದೆ. ಕಾಲುವೆಯಲ್ಲಿ ನೀರು ತುಂಬಿ ಹರಿದರೂ ಆಸುಪಾಸಿನ ರಸ್ತೆ, ಮನೆಗಳಿಗೆ ನುಗ್ಗದಂತೆ ತಡೆ ಕಟ್ಟಿರುವುದರಿಂದ ಈ ಸಲ ಹೊರಕ್ಕೆ ನೀರು ಹರಿದಿಲ್ಲ ಎನ್ನುತ್ತಾರೆ, ಅಲ್ಲಿನ ಸ್ಥಳೀಯರು. ಇದಕ್ಕಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತರ ಕೆಲಸವನ್ನು ಜನರು ನೆನೆಯುತ್ತಾರೆ.
ಜೆಪ್ಪಿನಮೊಗರು ಭಾಗದ ಕಾರ್ಪೊರೇಟರ್ ಕೂಡ ಇದೇ ಮಾತನ್ನು ಹೇಳುತ್ತಾರೆ. ಜೋರು ಮಳೆಯಾದಲ್ಲಿ ಕಾಲುವೆಯ ನೀರೇ ತಗ್ಗಿನ ಪ್ರದೇಶಕ್ಕೆ ನುಗ್ಗುತ್ತಿತ್ತು. ಈ ಬಾರಿ ಲಕ್ಷಾಂತರ ರೂಪಾಯಿ ವ್ಯಯಿಸಿ, ಶಾಸಕರು ತುರ್ತಾಗಿ ಕಾಂಕ್ರೀಟ್ ತಡೆಗೋಡೆ ಮಾಡಿದ್ದರಿಂದ ಅಲ್ಲಿನ ನಿವಾಸಿಗಳು ಹಿಂದಿನಂತೆ ಸಂಕಷ್ಟ ಅನುಭವಿಸಿಲ್ಲ ಎನ್ನುತ್ತಾರೆ. ಪ್ರತಿ ಬಾರಿಯೂ ಜೆಪ್ಪಿನಮೊಗರು ಹೆದ್ದಾರಿ ಆಸುಪಾಸಿನಲ್ಲಿ ನೀರು ನುಗ್ಗುವುದು, ಕಂರ್ಭಿಸ್ಥಾನ, ಎಕ್ಕೂರು ಆಸುಪಾಸಿನಲ್ಲಿ ಮಳೆ ನೀರಿನಿಂದ ಜಲಾವೃತ ಆಗುವುದು ಹಲವಾರು ವರ್ಷಗಳಿಂದ ನಡೆದುಕೊಂಡೇ ಬಂದಿತ್ತು. ಈ ಬಾರಿ ಅಂಥ ಸಂಕಷ್ಟ ಎದುರಾಗಿಲ್ಲ ಎಂದು ಹೇಳುತ್ತಾರೆ, ಸ್ಥಳೀಯರು.
ಅತ್ತಾವರದಲ್ಲಿ ಪ್ರತಿ ಬಾರಿ ನೆರೆ ಇರ್ತಿತ್ತು !
ಅತ್ತಾವರದಲ್ಲಿಯೂ ಈ ಬಾರಿ ದೊಡ್ಡ ತೊಂದರೆ ಉಂಟಾಗಿಲ್ಲ. ಪ್ರತಿ ಬಾರಿ ಅತ್ತಾವರದ ಕೆಎಂಸಿ ಆಸ್ಪತ್ರೆ ಬಳಿಯಿಂದ ಸಾಗುವ ಕಾಲುವೆಯಲ್ಲಿ ನೀರು ಮೇಲೆ ಬಂದು ಆಸ್ಪತ್ರೆ ಆವರಣ ಜಲಾವೃತ ಆಗುತ್ತಿತ್ತು. ಅಷ್ಟೇ ಅಲ್ಲ,. ಆಸುಪಾಸಿನ ರಸ್ತೆಗಳಲ್ಲಿ ನೀರು ನಿಂತು ಮನೆಗಳಿಗೆಲ್ಲ ನೀರು ಹೋಗುತ್ತಿತ್ತು. ಅತ್ತಾವರದಲ್ಲಿ ನುಗ್ಗುವ ನೀರಿನಿಂದಾಗಿ ಸುಭಾಸನಗರ, ಎಮ್ಮೆಕೆರೆ ಭಾಗದಲ್ಲೂ ನೆರೆ ಬರ್ತಾ ಇತ್ತು. 2018 ಮತ್ತು 19ರಲ್ಲಿ ಅತ್ತಾವರದ ಚಕ್ರಪಾಣಿ, ಕೆಎಂಸಿ ಆಸ್ಪತ್ರೆಯ ಮುಂಭಾಗದ ಪ್ರಮುಖ ರಸ್ತೆಯೇ ಜಲಾವೃತಗೊಂಡು, ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು. ಆದರೆ, ಈ ಬಾರಿ ನಿರಂತರ ಹತ್ತು ದಿನ ಮಳೆಯಾದರೂ, ಅಲ್ಲಿನ ರಸ್ತೆಗೆ ನೀರು ಬಂದಿಲ್ಲ. ಕೊಟ್ಟಾರ, ಪಂಪ್ವೆಲ್ ನಲ್ಲಿ ನೀರು ಬಂದರೂ ಅತ್ತಾವರದಲ್ಲಿ ನೆರೆ ಉಂಟಾಗಿಲ್ಲ. ಇದಕ್ಕೆ ಕಾರಣ, ಕೆಎಂಸಿ ಬಳಿಯಿಂದ ಸಾಗುವ ಕಾಲುವೆಗೆ ಇಕ್ಕೆಲಗಳಿಂದ ತಡೆಗೋಡೆ ಕಟ್ಟಿರುವುದು, ನೀರು ಸರಾಗ ಹರಿದು ಹೋಗಲು ವ್ಯವಸ್ಥೆ ಮಾಡಿರುವುದು ಅನ್ನೋದನ್ನು ಆ ಭಾಗದ ನಿವಾಸಿಗಳು ಹೇಳುತ್ತಾರೆ. ಚಿತ್ರದಲ್ಲಿ ಅಲ್ಲಿ ಹೊಸತಾಗಿ ಕಟ್ಟಿರುವ ತಡೆಗೋಡೆ ಕಾಣಬಹುದು.
ಶಾಸಕರ ಕಚೇರಿಯ ಮಾಹಿತಿ ಪ್ರಕಾರ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ರಾಜಕಾಲುವೆ ತಡೆಗೋಡೆ ಕಾಮಗಾರಿಗಾಗಿ ಒಟ್ಟು 27 ಕಾಮಗಾರಿ ನಡೆದಿದ್ದು ಈ ಪೈಕಿ ಮೂರು ಕಡೆಯ ಹೊರತುಪಡಿಸಿ ಉಳಿದೆಲ್ಲ ಕಡೆ ಕಾಮಗಾರಿ ಮುಗಿದಿದೆ. ಇದಕ್ಕಾಗಿ ಸುಮಾರು 26 ಕೋಟಿ ರೂಪಾಯಿ ಶಾಸಕ ವೇದವ್ಯಾಸ ಕಾಮತ್ ಅನುದಾನವನ್ನು ಖರ್ಚು ಮಾಡಲಾಗಿದೆ.
ಕೊಟ್ಟಾರದಲ್ಲಿ ಇನ್ನೂ ಆಗಿಲ್ಲ ಕಾಲುವೆ ಕೆಲಸ
ಮಂಗಳೂರು ನಗರದಲ್ಲಿ ಹಾದುಹೋಗುವ ಹಲವು ರಾಜಕಾಲುವೆಗಳ ಇಕ್ಕೆಲಗಳಲ್ಲಿ ಕಳೆದೊಂದು ವರ್ಷದಲ್ಲಿ ಕಾಂಕ್ರೀಟ್ ತಡೆಗೋಡೆ ಕಟ್ಟಲಾಗಿದೆ. ಒಮ್ಮೆಗೆ ದೊಡ್ಡ ಖರ್ಚಾದರೂ ಶಾಶ್ವತ ಪರಿಹಾರ ಎನ್ನುವ ನೆಲೆಯಲ್ಲಿ ಕಾಂಕ್ರೀಟ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ಸುರಿಯಲಾಗಿದೆ. ಈ ಹಿಂದೆ ಇದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿರುವ ಜಾಗದಲ್ಲೂ ಕಾಂಕ್ರೀಟ್ ಗೋಡೆಯನ್ನೇ ಹಾಕಲಾಗಿದೆ. ರಸ್ತೆಗೆ ಹೇಗೆ ಕಾಂಕ್ರೀಟ್ ಸುರಿಯಲಾಗಿದೆಯೋ, ಅದೇ ರೀತಿ ನೀರು ಹರಿಯೋ ದಂಡೆಗೆ ಕಾಂಕ್ರೀಟ್ ಗೋಡೆ ಕಟ್ಟಿ ಭದ್ರ ಮಾಡಿರುವುದು ದೊಡ್ಡ ಪ್ಲಸ್ ಪಾಯಿಂಟ್. ಇವೆಲ್ಲ ಕಾಮಗಾರಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅನುದಾನದಲ್ಲಿ ನಡೆದಿದೆ ಅನ್ನುವುದು ವಿಶೇಷ. ಮಂಗಳೂರು ಉತ್ತರ ಕ್ಷೇತ್ರಕ್ಕೆ ಸೇರುವ ಕೊಟ್ಟಾರ, ಮಾಲೆಮಾರ್ ಭಾಗದಲ್ಲಿ ಮಾತ್ರ ಪರಿಸ್ಥಿತಿ ಬದಲಾಗಿಲ್ಲ. ಇಲ್ಲಿಯೂ ಅಂತಹದ್ದೇ ಕೆಲಸ ನಡೆಯಬೇಕು. ಕೊಟ್ಟಾರದ ರಾಜಕಾಲುವೆಯನ್ನು ಅಗಲಗೊಳಿಸಬೇಕು ಅನ್ನುವ ಆಗ್ರಹ ಅಲ್ಲಿನ ಜನರದ್ದಿದೆ.
Artificial floods in Mangalore city get full stop, photos tell it all, MLA Vedavyas Kamath task goes successful. Though the monsoon has been active since the past fortnight, it rained particularly heavily battering the coastal districts. There have been reports of several houses being damaged due to inundation, landslides, and artificial flooding in the city but now the people in the city can rest easily as there won't be any artificial flooding hereafter.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm