ಕಡಲ್ಕೊರೆತ ತಡೆಗೋಡೆಗೆ ಉನ್ನತ ಅಧ್ಯಯನ, ಸಮಗ್ರ ಡಿಪಿಆರ್ ತಯಾರಿಸಿ ಕೇಂದ್ರ-ರಾಜ್ಯದಿಂದ ವಿಶೇಷ ಪ್ಯಾಕೇಜ್ ; ರಸ್ತೆ ದುರಸ್ತಿಗೆ 500 ಕೋಟಿ ಬಿಡುಗಡೆ  

13-07-22 06:48 pm       udupi Correspondent   ಕರಾವಳಿ

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತ ಆಗುತ್ತಿದ್ದು, ಶಾಶ್ವತ ಪರಿಹಾರವಾಗಿ ಕೇರಳ ಮಾದರಿಯಲ್ಲಿ ಸೀ ವೇವ್ ಬ್ರೇಕ್ ವಾಟರ್ ತಡೆಗೋಡೆ ನಿರ್ಮಿಸಲಾಗುವುದು.

ಉಡುಪಿ, ಜುಲೈ 13: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತ ಆಗುತ್ತಿದ್ದು, ಶಾಶ್ವತ ಪರಿಹಾರವಾಗಿ ಕೇರಳ ಮಾದರಿಯಲ್ಲಿ ಸೀ ವೇವ್ ಬ್ರೇಕ್ ವಾಟರ್ ತಡೆಗೋಡೆ ನಿರ್ಮಿಸಲಾಗುವುದು. ಮೊದಲಿಗೆ ಮಂಗಳೂರಿನ ಉಳ್ಳಾಲದಲ್ಲಿ ಈ ಮಾದರಿಯನ್ನು ಜಾರಿಗೆ ತರಲಿದ್ದು, ಅದು ಯಶಸ್ವಿಯಾದರೆ ಮೂರೂ ಜಿಲ್ಲೆಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಉಡುಪಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮಟ್ಟದ ಸಭೆಯನ್ನು ನಡೆಸಿದ ಮುಖ್ಯಮಂತ್ರಿ, ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಡಲ್ಕೊರೆತ ತಡೆಗೋಡೆ ಕಾಮಗಾರಿಗಾಗಿ ಎಡಿಬಿ ಸಾಲದ ಯೋಜನೆಯಡಿ 300 ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ ಅದರಲ್ಲಿ ಸಮರ್ಪಕ ಕಾಮಗಾರಿ ಆಗದ ಕಾರಣ ಕಡಲ್ಕೊರೆತ ಸಮಸ್ಯೆ ನಿವಾರಣೆ ಆಗಿಲ್ಲ. ಇಡೀ ಕರಾವಳಿಯಲ್ಲಿ ಕೇರಳ ಮಾದರಿಯ ಬ್ರೇಕ್ ವಾಟರ್ ಯೋಜನೆ ಕೈಗೆತ್ತಿಕೊಳ್ಳಲು ದೊಡ್ಡ ಮಟ್ಟದ ಹಣಕಾಸು ಬೇಕಾಗುತ್ತದೆ. ಅದಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಪ್ರತ್ಯೇಕ ಡಿಪಿಆರ್ ತಯಾರಿಸಲು ಸೂಚಿಸುತ್ತೇನೆ. ಕೇಂದ್ರ ಮತ್ತು ರಾಜ್ಯದಿಂದ ಪ್ರತ್ಯೇಕ ಪ್ಯಾಕೇಜ್ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ಇದಲ್ಲದೆ, ಕಡಲ್ಕೊರೆತ ರೀತಿಯ ಸಮಸ್ಯೆ ಆದಾಗ ಮಾತ್ರ ಜಿಲ್ಲಾಧಿಕಾರಿಗಳು ಎಚ್ಚತ್ತುಕೊಳ್ಳುವುದಲ್ಲ. ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು. ವರ್ಷದ ಯಾವುದೇ ಸಂದರ್ಭದಲ್ಲಿ ಸಮಸ್ಯೆ ಎದುರಾದರೂ, ಅದರ ದುರಸ್ತಿಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಮೂರೂ ಜಿಲ್ಲೆಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

ನಾಲ್ಕು ಸಂಸ್ಥೆಗಳಿಂದ ಅಧ್ಯಯನ

ಭೂಕಂಪ ಮತ್ತು ಗುಡ್ಡ ಕುಸಿತದ ಬಗ್ಗೆ ನಾಲ್ಕು ಸಂಸ್ಥೆಗಳಿಂದ ಅಧ್ಯಯನ ನಡೆಸಲಾಗುವುದು. ಜೀಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ, ಎನ್ ಡಿಆರ್ ಎಫ್ ಮತ್ತು ಅಮೃತ ಯುನಿವರ್ಸಿಟಿ ವತಿಯಿಂದ ಅಧ್ಯಯನ ನಡೆಸಲಿದ್ದು, ಅವರು ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಆಗಿರುವ ಪ್ರಾಕೃತಿಕ ವಿಕೋಪಗಳ ಬಗ್ಗೆ ನೀಡುವ ವರದಿ ಆಧರಿಸಿ ಪರಿಹಾರ ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಒಟ್ಟು 1062 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿಯಿದೆ. ದಕ್ಷಿಣ ಕನ್ನಡದಲ್ಲಿ 479, ಉತ್ತರ ಕನ್ನಡದಲ್ಲಿ 437, ಉಡುಪಿಯಲ್ಲಿ 196 ಮನೆಗಳಿಗೆ ಹಾನಿ ಆಗಿದೆ. ಮನೆ ಪೂರ್ತಿ ಕಳಕೊಂಡವರಿಗೆ ತಲಾ 5 ಲಕ್ಷ, ಆಂಶಿಕ ಕಳಕೊಂಡವರಿಗೆ 3 ಲಕ್ಷ, ಸ್ವಲ್ಪಮಟ್ಟಿಗೆ ಡ್ಯಾಮೇಜ್ ಆಗಿದ್ದರೆ 50 ಸಾವಿರ ನೀಡಲಾಗುವುದು.

ರಸ್ತೆ ದುರಸ್ತಿಗೆ 500 ಕೋಟಿ ಬಿಡುಗಡೆ
 

ಮೂರು ಜಿಲ್ಲೆಗಳಲ್ಲಿ ಪಿಡಬ್ಲ್ಯುಡಿ ಸೇರಿ ಒಟ್ಟು 2287 ಕಿಮೀ ರಸ್ತೆ ಹಾಳಾಗಿರುವ ಬಗ್ಗೆ ಅಂದಾಜಿದೆ. ಉತ್ತರ ಕನ್ನಡದಲ್ಲಿ 571, ಉಡುಪಿಯಲ್ಲಿ 960, ದಕ್ಷಿಣ ಕನ್ನಡದಲ್ಲಿ 726 ಕಿಮೀ ಉದ್ದ ರಸ್ತೆ ಹಾಳಾಗಿದೆ. ಒಟ್ಟು ಮೂರು ಜಿಲ್ಲೆಗಳಲ್ಲಿ 5285 ವಿದ್ಯುತ್ ಕಂಬ ಮುರಿದು ಬಿದ್ದಿದೆ. 422 ವಿದ್ಯುತ್ ಟ್ರಾನ್ಸ್ ಫಾರ್ಮರ್, 168 ಸೇತುವೆ ಹಾಳಾಗಿದೆ. 12 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಎನ್ ಡಿಆರ್ ಎಫ್ ನಿಧಿಯಲ್ಲಿ ಜಿಲ್ಲಾಧಿಕಾರಿಗಳ ಬಳಿ ಫಂಡ್ ಇದ್ದು, ಸೂಕ್ತವಾಗಿ ಖರ್ಚು ಮಾಡಲಿದ್ದಾರೆ. ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸಲು ತಕ್ಷಣವೇ ರಾಜ್ಯ ಸರಕಾರದಿಂದ 500 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಇಡೀ ರಾಜ್ಯದಲ್ಲಿ ರಸ್ತೆ ದುರಸ್ತಿಗೆ ಈ ಅನುದಾನ ಖರ್ಚು ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕೃಷಿ ಹಾನಿಗೆ ಒಂದು ಹೆಕ್ಟೇರಿಗೆ ಕೇಂದ್ರದಿಂದ 13500 ರೂಪಾಯಿ ನೀಡಲಾಗುತ್ತಿತ್ತು. ನಾವು ರಾಜ್ಯದಿಂದ 25 ಸಾವಿರ ಕೊಡುತ್ತೇವೆ. ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರಿಗೆ 28 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಮುಂದಿನ ಬಾರಿ ಬೆಳಗಾವಿಗೆ ಬರುವ ಸಂದರ್ಭದಲ್ಲಿ ಭೇಟಿ ನೀಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. 

ನಮ್ಮದು ಘರ್ಜಿಸುವ ಸಿಂಹ 

ರಾಷ್ಟ್ರ ಲಾಂಛನದ ಕುರಿತ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ಸಿಂಹದ ಮಾದರಿಯ ಲಾಂಛನವನ್ನು ಸಾರಾನಾಥದ ಮಾದರಿ ಇಟ್ಟುಕೊಂಡು ಮಾಡಲಾಗಿದೆ. ಸಿಂಹ ಉಗ್ರವಾಗಿದೆಯೋ, ಘರ್ಜಿಸುತ್ತದೋ ಅವೆಲ್ಲ ವಿವಾದ ಮಾಡುವವರು ಎಬ್ಬಿಸುವ ಪುಕಾರು ಅಷ್ಟೇ. ಹಿಂದಿನದು ಮಲಗಿದ ಸಿಂಹವಾಗಿದ್ದರೆ, ಈಗಿನ ಬಿಜೆಪಿ ಸರಕಾರದ್ದು ಘರ್ಜಿಸುವ ಸಿಂಹ ಎಂದು ಕಟಕಿಯಾಡಿದರು.

After a two-and-half hour long review meeting with the officials of three districts, Chief minister Basavaraj Bommai said the government would release Rs 500 crore immediately for the restoration of infrastructure like roads, bridges, electric poles and transformers.Addressing the media here on Wednesday, July 13, he said, "We will approach the central government, NDRF, to release funds for the natural disaster management, once we get the comprehensive report from all the districts. The state team is all set to face natural calamities and ready to release compensation without any delay. We are not able to prevent sea erosion effectively.