ಬ್ರೇಕಿಂಗ್ ನ್ಯೂಸ್
30-08-20 04:22 pm Headline Karnataka News Network ದೇಶ - ವಿದೇಶ
ಮೈಸೂರು, ಆಗಸ್ಟ್ 30: ನೈಋತ್ಯ ರೈಲ್ವೆ ದೇಶದಲ್ಲೇ ಮೊದಲ ಬಾರಿಗೆ ಹೈಸ್ಪೀಡ್ ಮೆಮು ಮೋಟಾರ್ ಕೋಚ್ ವ್ಹೀಲ್ ಅನ್ನು ಯಶಸ್ವಿಯಾಗಿ ತಯಾರು ಮಾಡಿದ್ದು ಮೈಸೂರಿನ ವ್ಹೀಲ್ ಶಾಪ್ ಇದನ್ನು ತಯಾರಿಸಿದೆ.
160 ಕಿ. ಮೀ. ವೇಗದಲ್ಲಿ ಚಲಿಸಲು ಸೂಕ್ತವಾದ ಹೈಸ್ಪೀಡ್ ಮೆಮು ಮೋಟಾರ್ ಕೋಚ್ ವ್ಹೀಲ್ ಅನ್ನು ತಯಾರು ಮಾಡಲಾಗಿದೆ. ಇಂತಹ ಚಕ್ರಗಳನ್ನು ಮೊದಲ ಬಾರಿಗೆ ಭಾರತೀಯ ರೈಲ್ವೆ ಕಾರ್ಯಾಗಾರದಲ್ಲಿ ತಯಾರು ಮಾಡಲಾಗಿದ್ದು ಶ್ಲಾಘನೀಯ.
ಮೇಸರ್ಸ್ ಬೊಂಬಾರ್ಡಿಯರ್ ಟ್ರಾನ್ಸ್ಪೋರ್ಟೇಶನ್ ಭಾರತದಲ್ಲಿ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್ ರೇಕ್ಗಳಿಗಾಗಿ ಈ ರೀತಿಯ ಇಎಂಯು ಅಸೆಂಬ್ಲಿಗಳನ್ನು ಬಳಕೆ ಮಾಡುತ್ತದೆ. ಇಂತಹ ಚಕ್ರಗಳ ತಯಾರಿಕೆ ಯೋಜನೆಯನ್ನು ಮೊದಲ ಬಾರಿಗೆ ಆರಂಭಿಸಲಾಗಿದೆ.

ಬಿಇಎಂಎಲ್ 225 ಟೈಲರ್ ಕೋಚ್ ಕಾರುಗಳಿಗೆ 900 ಟೈಲರ್ ಕೋಚ್ ವ್ಹೀಲ್ ಸೆಟ್ಗಳನ್ನು ಮತ್ತು 75 ಮೋಟಾರ್ ಕೋಚ್ ಕಾರುಗಳಿಗೆ 300 ಮೋಟಾರ್ ಕೋಚ್, ವ್ಹೀಲ್ ಸೆಟ್ಗಳನ್ನು ತಯಾರು ಮಾಡಲು ಬೇಡಿಕೆ ಸಲ್ಲಿಸಿತ್ತು.
ಗಾಜಿಯಾಬಾದ್ ಮತ್ತು ದೆಹಲಿ ನಡುವೆ ಸಂಚಾರ ನಡೆಸುವ ರೈಲುಗಳಿಗಾಗಿ ಈ ವ್ಹೀಲ್ಗಳನ್ನು ಬಳಕೆ ಮಾಡಲಾಗುತ್ತದೆ. ಬಿಇಎಂಎಲ್ ಈ ಗಾಲಿಗಳಿಗೆ ಅನುಗುಣವಾಗಿ ರೈಲು ಬೋಗಿಯನ್ನು ತಯಾರು ಮಾಡುತ್ತಿದೆ.
ಮೊದಲ ಹಂತದಲ್ಲಿ 6 ವ್ಹೀಲ್ ಸೆಟ್ಗಳನ್ನು ಬಿಇಎಂಎಲ್ಗೆ ರವಾನಿಸಲು ಸಿದ್ದವಾಗಿದ್ದು ಇವುಗಳ ವೆಚ್ಚ 2.4 ಕೋಟಿ ರೂ.ಗಳು. ಪಿಸಿಎಂಇ ರವಿ ಕುಮಾರ ಮಾರ್ಗದರ್ಶನದಲ್ಲಿ ಮೈಸೂರು ಕಾರ್ಯಾಗಾರದ ವ್ಯವಸ್ಥಾಪಕ ಟಿ.ಶ್ರೀನಿವಾಸು ಈ ಕೆಲಸವನ್ನು ಮೊದಲ ಬಾರಿಗೆ ಕೈಗೊಂಡಿದ್ದಾರೆ.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm