ಬ್ರೇಕಿಂಗ್ ನ್ಯೂಸ್
03-05-26 01:30 pm HK News Staffer ಕರ್ನಾಟಕ
ಚಿಕ್ಕಮಗಳೂರು, ಮೇ 3: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿಚಾರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಮತ ಟ್ಯಾಂಪರಿಂಗ್ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ ಸ್ಟ್ರಾಂಗ್ ರೂಂ ಓಪನ್ ಮಾಡಿದಾಗ ಟ್ರಂಕ್ ನ ಲಾಕ್ ಒಡೆದಿದ್ದು ಸೀಲ್ ಇರಲಿಲ್ಲ. ಟ್ರಂಕ್ ಲಾಕ್ ಕಟ್ ಆಗಿತ್ತು, ಹಾರೆ ಹಾಕಿ ಮೀಟಿದಂತೆ ಇತ್ತು. ನಾವು ಬೆಳಗ್ಗೆಯೇ ಓಟ್ ಟ್ಯಾಂಪರಿಂಗ್ ಮಾಡಿದ್ದಾರೆಂಬ ಅನುಮಾನ ವ್ಯಕ್ತಪಡಿಸಿದ್ವಿ. ಟ್ರಂಕ್ ಗಳನ್ನ ಇಲ್ಲಿಗೆ ತಂದಾಗ ಎಲ್ಲವನ್ನೂ ರೆಕಾರ್ಡ್ ಮಾಡಿದ್ದಾರೆ. ಕೋರ್ಟ್ ಆದೇಶದಂತೆ 279 ಮತ ರಿಕೌಂಟ್ ಆಯ್ತು, 6-7 ಹೆಚ್ಚಿಗೆ ಮತ ಬಂದ್ವು, ನನಗೂ 2 ಮತ ಹೆಚ್ಚಾಗಿದೆ.
2023ರ ಚುನಾವಣೆ ಮತ ಎಣಿಕೆ ಬಳಿಕ ಯಾರ್ಯಾರಿಗೆ ಎಷ್ಟು ಮತ ಬಂದಿದೆ ಎಂದು ಬಂಡಲ್ ಮಾಡಿ ಇಟ್ಟಿದ್ದರು. ಕಾಂಗ್ರೆಸ್ -ಬಿಜೆಪಿ-ಜೆಡಿಎಸ್ ಎಲ್ಲಾ ಪಕ್ಷಗಳ ಏಜೆಂಟ್ ಸಮ್ಮುಖದಲ್ಲಿ ಬಂಡಲ್ ಮಾಡಿದ್ರು. ಈಗ ಬಂಡಲ್-ಬಂಡಲ್ ಗಳನ್ನೇ ಟ್ಯಾಂಪರಿಂಗ್ ಮಾಡಿದ್ದಾರೆ. ನನಗೆ ಬಂದಿರುವ ಮತದ ಬ್ಯಾಲೆಟ್ ಪೇಪರ್ ಮೇಲೆ ಮತ್ತೊಬ್ಬರಿಗೆ ಗೆರೆ ಎಳೆದಿದ್ದಾರೆ. ಮಾರ್ಕ್ ಮಾಡಿರೋದು ಟ್ಯಾಲಿ ಆಗ್ತಿಲ್ಲ, ಬೇರೆ-ಬೇರೆ ರೀತಿ ಮಾಡಿದ್ದಾರೆ. ಬೇರೆ ಇಂಕ್ ಬಳಸಿದ್ದಾರೆ, ಅದು ನೋಡೋದಕ್ಕೆ ನೀಟಾಗಿ ಕಾಣುತ್ತೆ. ನನಗೆ ಬಂದಿದ್ದ 158 ಓಟ್ ಗಳನ್ನೂ ಅಸಿಂಧು ಮಾಡಿದ್ದಾರೆ.
ಓಟ್ ಟ್ಯಾಂಪರ್ ಆಗಿದೆ, ಜೀವರಾಜ್ ಹಾಗೂ ಅವರ ಜೊತೆ ಸೇರಿರೋರು ಈ ಕೆಲಸ ಮಾಡಿದ್ದಾರೆ, ಸೂಕ್ತ ತನಿಖೆಯಿಂದ ಸತ್ಯ ಹೊರಬರಲಿದೆ. ನಾನು ಪೊಲೀಸ್ ಸ್ಟೇಷನ್ ಗೆ ದೂರು ದಾಖಲು ಮಾಡುತ್ತೇನೆ. ಟ್ರಂಕ್ ಸೀಲ್ ಇಲ್ಲದಿರೋದು, ಲಾಕ್ ಕಟ್ ಆಗಿರೋದು, ಬಟ್ಟೆ ಸುತ್ತಿರೋದು ಎಲ್ಲವನ್ನೂ ಅಧಿಕಾರಿಗಳು ರಿಪೋರ್ಟ್ ಮಾಡಿದ್ದಾರೆ. 2023ರಲ್ಲಿ ಸಿಂಧು ಆಗಿದ್ದ ಮತಗಳನ್ನ ಇಂದು ಅಸಿಂಧು ಮಾಡಿದ್ದಾರೆ. ನನ್ನ 258 ಮತಗಳನ್ನ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ರಾಜೇಗೌಡ ಆರೋಪಿಸಿದ್ದಾರೆ.
2023ರಲ್ಲಿ ಕಾಂಗ್ರೆಸಿನ ರಾಜೇಗೌಡ 201 ಮತಗಳ ಅಂತರದಲ್ಲಿ ಗೆದ್ದಿದ್ದರು. 2026ರ ಈಗಿನ ಮತ ಎಣಿಕೆಯಲ್ಲಿ 52 ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದಾರೆ. 2023ರಲ್ಲಿ 569 ಅಂಚೆ ಮತ ಪಡೆದಿದ್ದ ರಾಜೇಗೌಡಗೆ ಈಗ 314 ಮತಗಳನ್ನು ಪಡೆದಿದ್ದಾರೆ. ಹೀಗಾಗಿ ಮತ ಕಳವು ಆಗಿದೆ ಎಂದು ಚಿಕ್ಕಮಗಳೂರು ನಗರ ಠಾಣೆಯಲ್ಲಿ ಅಂಚೆ ಮತ ಎಣಿಕೆ ಟೇಬಲ್ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ದೂರು ನೀಡಿದ್ದಾರೆ.
ರಾಜೇಗೌಡಗೆ ಬಿದ್ದಿದ್ದ 257 ಮತಗಳು ಮರು ಎಣಿಕೆಯಲ್ಲಿ ಡಬಲ್ ಎಂಟ್ರಿ ಎಂದು ಅಮಾನ್ಯ ಮಾಡಿದ್ದಾರೆ. ಒಂದೇ ಕಟ್ಟಿನಲ್ಲಿದ್ದ 170 ಮತಗಳನ್ನ ತಿದ್ದುಪಡಿ ಮಾಡಿದ್ದಾರೆ. 2023ರ ಮತ ಎಣಿಕೆ ಬಳಿಕ ಅಂದಿನ ಚುನಾವಣಾಧಿಕಾರಿ ವೇದಮೂರ್ತಿ, ಅಭ್ಯರ್ಥಿ ಜೀವರಾಜ್ ಹಾಗೂ ಡಿಸಿ ರಮೇಶ್ ಈ ರೀತಿ ಸಂಚು ರೂಪಿಸಿದ್ದಾರೆ. ಬ್ಯಾಲೆಟ್ ಪೇಪರನ್ನ ತಿದ್ದಿರಿವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತೀರ್ಪು ಘೋಷಣೆ ಹೈಕೋರ್ಟ್ ಆದೇಶದಲ್ಲಿ ಇಲ್ಲ !
ಈ ಬಗ್ಗೆ ಚುನಾವಣಾ ಅಧಿಕಾರಿ ಗೌರವ್ ಕುಮಾರ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು ಹೈಕೋರ್ಟ್ ಏಪ್ರಿಲ್ 6ರ ತೀರ್ಪಿನ ಪ್ರಕಾರ ಮರು ಪರಿಶೀಲನೆ, ಮರು ಎಣಿಕೆ ಮಾಡಲಾಗಿದೆ. ತೀರ್ಪು ಘೋಷಣೆ ಮಾಡುವಂತೆ ಹೈಕೋರ್ಟ್ ಆದೇಶದಲ್ಲಿ ಇರಲಿಲ್ಲ. 279 ಅಂಚೆ ಮತಗಳನ್ನ ಮರು ಪರಿಶೀಲನೆ ಮಾಡಿ ಬಾಕಿ ಉಳಿದ 1543 ಅಂಚೆ ಮತಗಳನ್ನ ಮರು ಎಣಿಕೆ ಮಾಡಲು ಆದೇಶ ನೀಡಿತ್ತು. ರಾಜೇಗೌಡ ಮತ್ತು ಜೀವರಾಜ್ ಅವರ ವೋಟ್ ನಲ್ಲಿ ವ್ಯತ್ಯಾಸವಿದ್ದರೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಬೇಕೆಂದು ಇತ್ತು. 2023 ರಲ್ಲಿ ಡಿ.ಎನ್ ಜೀವರಾಜ್ 692 ಮತಗಳು, ಟಿ.ಡಿ ರಾಜೇಗೌಡ 569 ಮತಗಳನ್ನು ಪಡೆದಿದ್ದರು. ಮರು ಎಣಿಕೆ ಬಳಿಕ ಜೀವರಾಜ್ ಅವರಿಗೆ 690 ಮತಗಳು ಮತ್ತು ಟಿ.ಡಿ ರಾಜೇಗೌಡ ಅವರಿಗೆ 314 ಮತಗಳು ಚಲಾವಣೆಯಾಗಿದೆ. ಹೈಕೋರ್ಟ್ ಆದೇಶದಂತೆ ಪರಿಶೀಲನೆ ಮುಗಿಸಿ ಸ್ಟ್ರಾಂಗ್ ರೂಮ್ ಕ್ಲೋಸ್ ಮಾಡಲಾಗಿದೆ.
ನಮ್ಮ ವ್ಯಾಪ್ತಿಯಲ್ಲಿ ನಾವು ಕಾರ್ಯ ಮಾಡಿದ್ದೇವೆ ಟ್ಯಾಂಪರಿಂಗ್ ಮಾಡಿದ್ದರೆ ಅದು ಕ್ರಿಮಿನಲ್ ಅಪರಾಧ. ನಾವು ವರದಿಯನ್ನ ಚುನಾವಣಾ ಆಯೋಗಕ್ಕೆ ಕಳಿಸುತ್ತೇವೆ ಎಂದು ಹೇಳಿದ್ದಾರೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm