ಬ್ರೇಕಿಂಗ್ ನ್ಯೂಸ್
06-05-22 02:49 pm HK Desk News ಕ್ರೈಂ
ಹೈದರಾಬಾದ್, ಮೇ 6: ಕಣ್ಣೆದುರೇ ಪತಿಯನ್ನು ನಡುರಸ್ತೆಯಲ್ಲಿ ಹೊಡೆದು ಕೊಲ್ಲುತ್ತಿದ್ದರೂ, ವಿಡಿಯೋ, ಫೋಟೋ ತೆಗೆಯುತ್ತಿದ್ದರೇ ವಿನಾ ಯಾರೂ ಸಹಾಯಕ್ಕೆ ಬರಲಿಲ್ಲ. 15-20 ನಿಮಿಷಗಳ ಕಾಲ ಸಾರ್ವಜನಿಕರ ನಡುವಲ್ಲೇ ಹೊಡೆದು ನನ್ನ ಪತಿಯನ್ನು ಕೊಂದು ಹಾಕಿದ್ರು. ಇಂಥ ಸ್ಥಿತಿ ಯಾರಿಗೂ ಬರಬಾರದು. ಜನರು ಇಷ್ಟು ಕರುಣೆಯಿಲ್ಲದವರು ಆಗಬಾರದು ಎಂದು ಹೈದ್ರಾಬಾದಿನಲ್ಲಿ ಮುಸ್ಲಿಂ ಯುವತಿಯನ್ನು ಮದುವೆಯಾದ ಕಾರಣಕ್ಕೆ ಹಿಂದು ಯುವಕನನ್ನು ಕೊಲೆಗೈದ ಘಟನೆ ಬಗ್ಗೆ ಸಂತ್ರಸ್ತ ಯುವತಿ ಆಶ್ರಿತಾ ಸುಲ್ತಾನಾ ಅಲವತ್ತುಕೊಂಡಿದ್ದಾಳೆ.
ಪತಿಯನ್ನು ಹೊಡೆದು ಹಾಕಿದ 20 ನಿಮಿಷಗಳ ಬಳಿಕ ಪತಿ ಸತ್ತಿದ್ದಾರೆ. ಜನರು ದೂರ ನಿಂತು ನೋಡಿದರೇ ವಿನಾ ಸಹಾಯಕ್ಕೆ ಬರಲಿಲ್ಲ. ಪೊಲೀಸರು ಕೂಡ ಬರಲಿಲ್ಲ. ಪೊಲೀಸರು ಸ್ಥಳಕ್ಕೆ ಬಂದಾಗ ಅರ್ಧ ಗಂಟೆ ಕಳೆದಿತ್ತು. ಅಷ್ಟೊತ್ತಿಗಾಗಲೇ ನನ್ನ ಸಹೋದರ ಮತ್ತು ಆತನ ಸಹಚರ ಓಡಿ ಪರಾರಿಯಾಗಿದ್ದರು ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಆಶ್ರಿತಾ ಸುಲ್ತಾನಾ ಹೇಳಿದ್ದಾಳೆ.
ನಾನು ಮತ್ತು ನನ್ನ ಪತಿ ಸ್ಕೂಟಿಯಲ್ಲಿ ಹೋಗುತ್ತಿದ್ದೆವು. ಆ ಸಂದರ್ಭದಲ್ಲಿ ನನ್ನ ಸೋದರ ಸೈಯದ್ ಮೊಹ್ಮದ್ ಮತ್ತು ಆತನ ಗೆಳೆಯ ಮೊಹಮ್ಮದ್ ಮಸೂದ್ ಸ್ಕೂಟಿಯನ್ನು ಅಡ್ಡಗಟ್ಟಿ ಪತಿಗೆ ಹಲ್ಲೆ ನಡೆಸಿದ್ದಾರೆ. ನನ್ನ ಸೋದರರೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಾಗ, ದಿಕ್ಕು ತೋಚದಂತಾಗಿತ್ತು. ಹೈದರಾಬಾದಿನ ಗಿಜಿಗುಡುವ ರಸ್ತೆಯಲ್ಲಿ ಅಷ್ಟೆಲ್ಲಾ ವಾಹನಗಳು ಹೋಗುತ್ತಿದ್ದವು. ಬಹಳಷ್ಟು ದಾರಿಹೋಕ ಜನರೂ ಇದ್ದರು. ಆ ಸಂದರ್ಭದಲ್ಲಿ ನಾನು ಒಂಟಿಯಾಗಿದ್ದೆ. ನನ್ನ ಗಂಡ ಪೆಟ್ಟು ತಿಂದು ಸಾಯುವುದನ್ನು ಪಕ್ಕದಲ್ಲೇ ನಿಂತು ನೋಡಿದರು. ಯಾರು ಕೂಡ ಸಹಾಯಕ್ಕೆ ಬರದೇ ಇದ್ದುದನ್ನು ಕಂಡು ಈ ಜಗತ್ತಿನಲ್ಲಿ ಒಳ್ಳೆಯವರಿಲ್ಲ ಅನಿಸುತ್ತಿದೆ. ನನಗೆ ಸಹಾಯ ಸಿಗುತ್ತಿದ್ದರೆ ಪತಿಯನ್ನು ಬದುಕಿಸಬಹುದಿತ್ತು ಎಂದು ಅಳು ತೋಡಿಕೊಂಡಿದ್ದಾರೆ.
ಬಿಲ್ಲಾಪುರಂ ನಾಗರಾಜು (25) ಎಂಬ ದಲಿತ ಯುವಕನನ್ನು ನಡುಬೀದಿಯಲ್ಲಿ ಮೇ 4ರಂದು ರಾತ್ರಿ ಕಡಿದು ಕೊಲ್ಲಲಾಗಿತ್ತು. ಮುಸ್ಲಿಂ ಯುವತಿಯನ್ನು ಮದುವೆಯಾದ ದ್ವೇಷದಲ್ಲಿ ಪತ್ನಿಯ ಸೋದರರೇ ಸೇರಿ ಕೊಂದು ಹಾಕಿದ್ದರು. ಮನೆಯವರ ವಿರೋಧ ಇದ್ದರೂ, ಲೆಕ್ಕಿಸದೆ ನಾಗರಾಜು, ಕಳೆದ ಜನವರಿ 31ರಂದು ಆರ್ಯ ಸಮಾಜದಲ್ಲಿ ತಾನು ಕಾಲೇಜು ದಿನಗಳಿಂದಲೂ ಪ್ರೀತಿಸಿದ್ದ ಮುಸ್ಲಿಂ ಯುವತಿ ಆಶ್ರಿತಾ ಸುಲ್ತಾನಾಳನ್ನು ಮದುವೆಯಾಗಿದ್ದ.
ಮದುವೆಗೂ ಮುನ್ನ ಆಶ್ರಿತಾ ಸುಲ್ತಾನಾ ಸ್ವತಃ ನಾಗರಾಜುವನ್ನು ಈ ಮದುವೆ ಬೇಡ, ನನ್ನಿಂದಾಗಿ ನೀನು ಜೀವ ಕಳಕೊಳ್ಳುವುದು ಬೇಡ ಎಂದು ಸಂತೈಸಿದ್ದಳು. ಈ ಬಗ್ಗೆ ಮಾತನಾಡಿರುವ ಆಶ್ರಿತಾ, ಮದುವೆಯ ಒಂದು ತಿಂಗಳ ಹಿಂದೆಯೇ ನಾಗರಾಜುಗೆ ನಾನು ಮನವರಿಕೆ ಮಾಡಲು ಯತ್ನಿಸಿದ್ದೆ. ನೀನು ಬೇರೆ ಯಾರನ್ನಾದರೂ ಹುಡುಕಿ ಮದುವೆಯಾಗು. ನನ್ನಿಂದಾಗಿ ನಿನ್ನ ಜೀವಕ್ಕೆ ಅಪಾಯ ಆಗುವುದು ಬೇಡ ಎಂದಿದ್ದೆ. ಆದರೆ ನಾನು ಸತ್ತರೆ ನಿನ್ನ ಜೊತೆಗೇ ಎಂದು ಹೇಳಿ ಅತ್ತಿದ್ದ. ಅವನು ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದು ನನ್ನ ಸೋದರರೇ ಬೆದರಿಕೆ ಹಾಕಿದ್ದರು. ನಾನು ನಿನಗಾಗಿ ಸಾಯಲು ರೆಡಿ ಇದ್ದೇನೆ ಎನ್ನುತ್ತಿದ್ದ ಎಂದು ಅಳುತ್ತಿದ್ದಾಳೆ. ಜಗತ್ತಿನ ಎಲ್ಲೇ ಆಗಲಿ, ಇಂಥ ಕೃತ್ಯಗಳಾದ ಸಂದರ್ಭದಲ್ಲಿ ಕನಿಷ್ಠ ಅಲ್ಲಿರುವ ಇತರರು ಸಹಾಯಕ್ಕೆ ಬರಬೇಕು. ಅಷ್ಟು ಕಟುಕರಾಗಿ ವರ್ತಿಸಬಾರದು ಎಂದು ಮನವಿ ಮಾಡಿದ್ದಾಳೆ.
A young man lay bleeding by a busy road in Hyderabad, his face smashed to pulp with iron rods, while his wife valiantly fought off his attackers, in a horrific killing in public caught on camera Wednesday evening. The 25-year-old car salesman was beaten and stabbed to death by his Muslim wife's brother and relatives, the police say.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm