ಬ್ರೇಕಿಂಗ್ ನ್ಯೂಸ್
23-03-22 10:23 pm Mangalore Correspondent ಕ್ರೈಂ
ಉಳ್ಳಾಲ, ಮಾ.23 : ಸೋಮೇಶ್ವರ ಉಚ್ಚಿಲ ಬಟ್ಟಂಪಾಡಿಯಲ್ಲಿ ಪ್ರವಾಸೋದ್ಯಮ ನೆಪದಲ್ಲಿ ಖಾಸಗಿ ಕಂಪನಿಗಳು ಸಮುದ್ರ ಕಿನಾರೆಯಲ್ಲಿ ಅಕ್ರಮ ಮತ್ತು ಅಸುರಕ್ಷಿತವಾಗಿ ಬೋಟಿಂಗ್ ನಡೆಸುವುದಲ್ಲದೆ, ಅಳಿವಿನಂಚಿನಲ್ಲಿರುವ ಕಾಂಡ್ಲಾ ವನ ಕಡಿದು ಹಾಕಿದ್ದು, ಇದಕ್ಕೆಲ್ಲ ಕಡಿವಾಣ ಹಾಕಬೇಕಾದ ಮಂಗಳೂರಿನ ಡಿಸಿ ಸಾಹೇಬರು ತಮ್ಮ ಸಂಸಾರ ಸಮೇತ ಉಚ್ಚಿಲದ ಅನಧಿಕೃತ ಗೆಸ್ಟ್ ಹೌಸಲ್ಲಿ ಠಿಕಾಣಿ ಹೂಡಿ ಅಕ್ರಮಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆಂದು ಸ್ಥಳೀಯ ಮೀನುಗಾರ ಸುಖೇಶ್ ಉಚ್ಚಿಲ್ ಆರೋಪಿಸಿದ್ದಾರೆ.
ಉಚ್ಚಿಲ ಬಟ್ಟಂಪಾಡಿ ಕಡಲ ತೀರದಲ್ಲಿ ಪ್ರವಾಸೋದ್ಯಮ ನೆಪದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಬಟ್ಟಂಪಾಡಿಯಲ್ಲಿ 150 ಮೀನುಗಾರರ ಮನೆಗಳಿವೆ. ಕೋರ್ಟ್ ಕಾನೂನು ಪಾಲಿಸುವುದಾದರೆ ಇಲ್ಲಿ ಅಭಿವೃದ್ಧಿ ಮಾಡಲು ಆಗುವುದಿಲ್ಲ, ನಿರ್ವಹಣೆ ಮಾತ್ರ ಮಾಡಲು ಸಾಧ್ಯ. ಆದರೆ ಇಲ್ಲಿ ಮಾತ್ರ ಇದ್ಯಾವುದೂ ಆಗುತ್ತಿಲ್ಲ. ಸಮುದ್ರ ಕೊರೆತ ತಡೆಯುವ, ಅಳಿವಿನಂಚಿನ ಕಾಂಡ್ಲಾ ಮರಗಳನ್ನೇ ಇಲ್ಲಿ ಕಡಿದು ಹಾಕಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿಗಳ ಬಂಧನ ಆಗಿಲ್ಲ. ಬಟ್ಟಂಪಾಡಿ ಎಂಡ್ ಪಾಯಿಂಟಲ್ಲಿ ಪ್ರವಾಸೋದ್ಯಮ ಇಲಾಖೆಯು ಮುಂಬೈ ಮೂಲದ ಕೃಷ್ಣ ಪ್ಯಾಲೇಸ್ ಎಂಬ ಕಂಪನಿಗೆ ನಿರ್ವಹಣಾ ಲೀಸ್ ಗುತ್ತಿಗೆ ನೀಡಿದೆ. ಆದರೆ ತುಂಬೆಯ ಪ್ರಕಾಶ್ ಶೆಟ್ಟಿ ಎಂಬವರು ಪರವಾನಿಗೆ ಇಲ್ಲದೆ ಇಲ್ಲಿನ ನದಿಯಲ್ಲಿ ಬೋಟಿಂಗ್ ನಡೆಸಿ ಈ ಕೃತ್ಯ ಎಸಗಿದ್ದಾರೆ.
ಯಾವುದೇ ರಕ್ಷಣಾತ್ಮಕ ವಿಧಾನ ಬಳಸದೆ ನಡೆಸುತ್ತಿರುವ ಬೋಟಿಂಗ್ ನಿಂದ ಅನಾಹುತಗಳು ಸಂಭವಿಸಿದರೆ ಹೊಣೆ ಯಾರು ? ಈ ಪ್ರದೇಶದಲ್ಲಿ ಕಾಂಡ್ಲಾ ಮರಗಳಿಂದಾಗಿ ಸ್ಥಳೀಯ ಬಹಳಷ್ಟು ಮನೆಗಳು ಉಳಿದುಕೊಂಡಿವೆ. ಅದನ್ನು ಕಡಿದಿರುವುದರಿಂದ ಸ್ಥಳೀಯರಿಗೆ ತೊಂದರೆ ಆಗಿದೆ.
ಇಲ್ಲಿ ಬಹಳಷ್ಟು ಮನೆಗಳು ಇದ್ದರೂ ಸರಿಯಾದ ರಸ್ತೆ ಇಲ್ಲ. ಇದ್ದ ರಸ್ತೆ ಕಡಲಿನಬ್ಬರಕ್ಕೆ ಸಮುದ್ರ ಪಾಲಾಗಿ ಹೋಗಿದೆ. ಅಕ್ರಮ ಬೋಟಿಂಗಲ್ಲಿ ಅನಾಹುತಗಳಾದರೆ ಅಂಬುಲೆನ್ಸ್ ಬರುವುದಕ್ಕೂ ಸಾಧ್ಯವಿಲ್ಲ. ಇಲ್ಲಿ ಹಲವು ಬಗೆಯ ಮಾಫಿಯಾಗಳು ಕಾರ್ಯಾಚರಿಸುತ್ತಿವೆ. ಅನಧಿಕೃತ ಗೆಸ್ಟ್ ಹೌಸ್ ಗಳಲ್ಲಿ ಮಧ್ಯರಾತ್ರಿ ಕಳೆದರೂ ಡಿಜೆ ಹಾಕಿ ಕುಣಿಯುತ್ತಾರೆ. ಇದರಿಂದ ಸ್ಥಳೀಯ ಮೀನುಗಾರರಿಗೂ ಮೀನುಗಾರಿಕೆಗೂ ತೊಂದರೆ ಆಗುತ್ತಿದೆ. ಗೆಸ್ಟ್ ಹೌಸ್ ಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಚಿತ್ರೀಕರಣಗಳೂ ನಡೆಯುತ್ತಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ದೂರು ಕೊಟ್ಟರೂ ಜಿಲ್ಲಾಡಳಿತವಾಗಲಿ ಸ್ಥಳೀಯ ಸಂಸ್ಥೆ, ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಮುಂಬೈಯಲ್ಲಿ ಕಾಂಡ್ಲಾವನ ವ್ಯಾಪ್ತಿಯಲ್ಲಿ ಚಿತ್ರ ತಾರೆಯರು ಕಟ್ಟಿಸಿದ ಮನೆಗಳನ್ನು ತೆರವು ಮಾಡಲಾಗಿದೆ. ಬಟ್ಟಂಪಾಡಿ ಬೀಚಲ್ಲಿ ಕಾಂಡ್ಲಾ ವನದ 50 ಮೀಟರ್ ಅಂತರದಲ್ಲೇ ಪ್ರಭಾವಿ ವೈದ್ಯ ಅಖ್ತರ್ ಹುಸೇನ್ ಎಂಬವರು ಅನಧಿಕೃತ ಸ್ಯಾಂಟಮ್ ಎಂಬ ಗೆಸ್ಟ್ ಹೌಸ್ ಕಟ್ಟಿದ್ದಾರೆ. ಇಂತಹ ಅನಧಿಕೃತ ಗೆಸ್ಟ್ ಹೌಸಲ್ಲಿ ಕಳೆದ ತಿಂಗಳು ಒಂದು ವಾರ ಕಾಲ ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಅವರು ಸಂಸಾರ ಸಮೇತ ತಂಗಿದ್ದಾರೆ. ಇತರ ಅಧಿಕಾರಿಗಳು ಕೂಡ ಇಲ್ಲಿ ಮಜಾ ಉಡಾಯಿಸಿ ಹೋಗ್ತಿದ್ದಾರೆ. ಹಾಗಾದರೆ ನಮಗೆ ನ್ಯಾಯ ಒದಗಿಸುವವರು ಯಾರೆಂದು ಕೇಳಿದರು.
ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ಮಾತನಾಡಿ, ಮೀನುಗಾರರಿಗೆ ಇಲ್ಲಿ ಬಹಳಷ್ಟು ಅನ್ಯಾಯ ಆಗಿದೆ. ಅನ್ಯಾಯದ ವಿರುದ್ಧ ಕಳೆದ 10 ವರ್ಷದಿಂದ ಹೋರಾಟ ನಡೆಯುತ್ತಿದೆ. ಆದರೆ ಸೂಕ್ತ ಪರಿಹಾರ ಆಗಿಲ್ಲ. ಬಟ್ಟಂಪಾಡಿ ಸೂಕ್ಷ್ಮ ಪರಿಸರ. ಈ ವಲಯವನ್ನು ಸಂರಕ್ಷಿತ ವಲಯ ಎಂದು ಘೋಷಣೆ ಮಾಡಬೇಕು. ಅಕ್ರಮ ಮಾಫಿಯಾ ನಿಲ್ಲಬೇಕು ಎಂದು ಆಗ್ರಹಿಸಿದರು. ಸ್ಥಳೀಯರಾದ ರಂಜಿತ್ ಉಚ್ಚಿಲ್, ಶಬೀರ್, ವಸಂತ್ ಉಚ್ಚಿಲ್ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿದ್ದರು.
Illegal boating at Someshwar Beach in Ullal by unauthorised companies slams local fishermen Sukesh Uchil in Mangalore.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm