ಬ್ರೇಕಿಂಗ್ ನ್ಯೂಸ್
27-02-22 04:53 pm HK Desk news ಕ್ರೈಂ
ಬೆಳಗಾವಿ, ಫೆ 27 : ನಿತ್ಯ ಲಕ್ಷಾಂತರ ರೂಪಾಯಿ ಪೆಟ್ರೋಲ್ ಬಂಕ್ ಮಾಲೀಕನ ಅಕೌಂಟ್ಗೆ ಜಮಾವಣೆ ಆಗ್ತಿತ್ತು. ಇತ್ತ ಲೆಕ್ಕಕ್ಕೆ ಲೆಕ್ಕವೂ ಇರ್ತಿತ್ತು. ಆದರೆ, ಪಂಪ್ನ ಮಾಲೀಕ ಮಾತ್ರ ಲಾಸ್ ಅನುಭವಿಸುತ್ತಿದ್ದ. ಒಂದೂವರೆ ವರ್ಷದ ಬಳಿಕ ಬಂಕ್ ಮಾಲೀಕ ತನಗೆ ಆಗ್ತಿರುವ ಹಾನಿ ಕುರಿತು ಠಾಣೆ ಮೇಟ್ಟಿಲೇರಿದ್ದ. ಈ ವೇಳೆ ಸಿಕ್ಕಿದ್ದೇ ಅದೊಬ್ಬ ಖದೀಮನ ಫೋನ್ ಪೇ ಗಿಮಿಕ್ ವಂಚನೆ.
ಬೆಳಗಾವಿ ಫೋನ್ ಪೇ ವಂಚನೆ ಪ್ರಕರಣ ನಗರದ ಮಚ್ಚೆಯಲ್ಲಿರುವ ಸೋಮನಾಥ್ ಪೆಟ್ರೋಲ್ ಬಂಕ್ನ ಮಾಲೀಕ ಸುನೀಲ್ ಶಿಂಧೆ ಮೋಸ ಹೋದ ಮಾಲೀಕ. ರೋಹಿತ್ ರಾಜು ಮೋಸ ಮಾಡಿದಾತ. ಈತ ಕಳೆದ ಮೂರು ವರ್ಷದಿಂದ ಸುನೀಲ್ ಬಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಖದೀಮ ಒಂದು ವರ್ಷದಲ್ಲಿ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.
ಫೋನ್ ಪೇ ಅಸ್ತ್ರ;
ಇತ್ತಿಚೀನ ದಿನಗಳಲ್ಲಿ ಹೆಚ್ಚಾಗಿ ವಾಹನ ಸವಾರರು ಪೆಟ್ರೋಲ್ ಬಂಕ್ಗಳಲ್ಲಿ ಫೋನ್ ಪೇ, ಗೂಗಲ್ ಪೇ ಮೂಲಕ ಜನ ಪೇಮೆಂಟ್ ಮಾಡ್ತಿದ್ದಾರೆ. ವ್ಯಾಪಾರಸ್ಥರಿಗೆ ಮಾತ್ರ ಈ ಫೋನ್ ಪೇ ಆಯಪ್ನವರು ಹಣ ಮರು ಪಾವತಿಗೆ ವ್ಯವಸ್ಥೆ ಮಾಡಿದ್ದಾರೆ. ಕೆಲವೊಮ್ಮೆ ವಾಹನ ಸವಾರರು ನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಸಾವಿರ ರೂಪಾಯಿ ಫೋನ್ ಪೇ ಮಾಡ್ತಾರೆ. ಆಗ ಅವರಿಗೆ ಹಣ ಹಿಂತಿರುಗಿಸಬೇಕಾಗುತ್ತದೆ. ಈ ವೇಳೆ, ಕ್ಯಾಶ್ ಕೊಡಲು ಬರುವುದಿಲ್ಲ. ಆಗ ಫೋನ್ ಪೇದಲ್ಲೇ ಈ ರಿಫಂಡ್ ಆಪ್ಷನ್ ಬಳಸಿಕೊಂಡು ಉಳಿದ ಹಣ ಮರಳಿಸಬಹುದು. ಇದೇ ಮಾರ್ಗವನ್ನು ಬಳಸಿಕೊಂಡ ಖದೀಮ ನಿತ್ಯವೂ ತನ್ನ ನಂಬರ್ನಿಂದ ಪಂಪ್ ನಂಬರ್ಗೆ ಎಂಟು ಸಾವಿರ ರೂ. ಫೋನ್ ಪೇ ಮಾಡುತ್ತಿದ್ದ. ಹೀಗೆ ಮಾಡಿ ಮಾಲೀಕನಿಗೆ ಲೆಕ್ಕವನ್ನೂ ಕೊಡುತ್ತಿದ್ದ. ಇದಾದ ಬಳಿಕ ರಾತ್ರಿ ಮನೆಗೆ ವಾಪಸ್ ಆಗುವಾಗ ಪಂಪ್ ನಂಬರ್ನಿಂದ ಮತ್ತೆ ತನ್ನ ಅಕೌಂಟ್ಗೆ ತಾನು ಹಾಕಿದ ಹಣವನ್ನು ರಿಫಂಡ್ ಮಾಡಿಕೊಳ್ಳುತ್ತಿದ್ದ.

44 ಲಕ್ಷ ಹಣ ಎಗರಿಸಿದ ಖದೀಮ:
ಹೀಗೆ ರಿಫಂಡ್ ಆದ ಹಣದ ಮೇಸೆಜ್ ಅನ್ನು ಕೂಡಲೇ ಡಿಲಿಟ್ ಮಾಡಿ ತೆರಳುತ್ತಿದ್ದ. ದಿನಕ್ಕೆ 200 ರಿಂದ 300 ಜನ ಫೋನ್ ಪೇಯಿಂದ ಹಣ ವರ್ಗಾವಣೆ ಮಾಡುತ್ತಿದ್ದು, ಯಾರಿಗೆ ರಿಫಂಡ್ ಆಗಿದೆ ಅನ್ನೋದನ್ನು ಮಾಲೀಕ ನೋಡಲು ಹೋಗುತ್ತಿರಲಿಲ್ಲ. ಇದನ್ನು ಬಳಸಿಕೊಂಡು ಸಿಬ್ಬಂದಿ ರೋಹಿತ್ ಒಂದೂವರೆ ವರ್ಷದಲ್ಲಿ 44 ಲಕ್ಷ ರೂ. ಎಗರಿಸಿದ್ದಾನೆ.

ಠಾಣೆ ಮೆಟ್ಟಿಲೇರಿದಾಗ ಸತ್ಯ ಬಯಲು:
ದಿನೇ ದಿನೆ ಲಾಸ್ ಆಗುವ ಕಾರಣಕ್ಕೆ ಕಂಗಾಲಾದ ಮಾಲೀಕ ಕೊನೆಗೆ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಬ್ಯಾಂಕ್ನ ವಹಿವಾಟು ನೋಡಿದಾಗ ಬಂಕ್ ಸಿಬ್ಬಂದಿ ರೋಹಿತ್ ನಂಬರ್ಗೆ ನಿತ್ಯವೂ ಹಣ ರಿಫಂಡ್ ಆಗುವುದು ಗೊತ್ತಾಗಿದೆ. ಪೊಲೀಸರು ಆರೋಪಿಯನ್ನು ವಿಚಾರಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನಿಂದ 28 ಲಕ್ಷ ಹಣ ವಸೂಲಿ ಮಾಡಿದ್ದು, ಇನ್ನುಳಿದ ಹಣವನ್ನು ವಸೂಲಿ ಮಾಡಿಕೊಡುವುದಾಗಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Belagavi petrol pump over cheated of 44 lakhs via phone pay and google pay, employee held.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
11-08-26 10:23 pm
HK News Staffer
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
Vitla School Bus Accident: ನಿಯಂತ್ರಣ ತಪ್ಪಿ ವಿದ...
11-08-26 03:08 pm
Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...
10-08-26 11:00 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm