ಬ್ರೇಕಿಂಗ್ ನ್ಯೂಸ್
01-02-22 10:55 pm HK Desk news ಕ್ರೈಂ
Photo credits : Headline Karnataka
ನವದೆಹಲಿ, ಫೆ.1 : ಐಸಿಸ್ ಉಗ್ರರ ನೆಟ್ವರ್ಕ್ ಆರೋಪದಲ್ಲಿ ಮಂಗಳೂರಿನಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟಿರುವ ದೀಪ್ತಿ ಮರಿಯಂ ಸೇರಿದಂತೆ ಎಂಟು ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಮಂಗಳೂರಿನ ಉಳ್ಳಾಲದಲ್ಲಿ ಬಂಧಿತ, ಮಾಜಿ ಶಾಸಕ ಇದಿನಬ್ಬರ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ, ಮೊಹಮ್ಮದ್ ವಕಾರ್ ಲೋನ್ ಅಲಿಯಾಸ್ ವಿಲ್ಸನ್ ಕಾಶ್ಮೀರಿ, ಭಟ್ಕಳದ ಮಿಝಾ ಸಿದ್ದಿಕ್, ಶಿಫಾ ಹ್ಯಾರಿಸ್ ಅಲಿಯಾಸ್ ಆಯೆಷಾ, ಒಬೈದ್ ಹಮೀದ್ ಮಟ್ಟ, ಬೆಂಗಳೂರಿನಲ್ಲಿ ಬಂಧಿತ ಮಾದೇಶ್ ಶಂಕರ್ ಅಲಿಯಾಸ್ ಅಬ್ದುಲ್ಲಾ, ಉಳ್ಳಾಲದ ಮಾಜಿ ಶಾಸಕ ಇದಿನಬ್ಬರ ಮೊಮ್ಮಗ ಅಮರ್ ಅಬ್ದುಲ್ ರಹಿಮಾನ್ ಮತ್ತು ಮುಝಾಮಿಲ್ ಹಸನ್ ಭಟ್ ಎಂಟು ಮಂದಿ ಬಂಧಿತರಾಗಿದ್ದು ಎಲ್ಲರ ವಿರುದ್ಧ ಐಸಿಸ್ ನೆಟ್ವರ್ಕ್ ಜಾಲದಲ್ಲಿ ಯುವಕರ ಸೇರ್ಪಡೆ ಆರೋಪದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
2021ರ ಮಾರ್ಚ್ ನಲ್ಲಿ ಕೇರಳದಲ್ಲಿ ಬಂಧಿತನಾಗಿದ್ದ ಮೊಹಮ್ಮದ್ ಅಮೀನ್ ಅಲಿಯಾಸ್ ಅಬು ಯಾಹ್ಯಾ ಮೂಲಕ ಈ ಜಾಲದ ಮಾಹಿತಿ ಹೊರಬಂದಿತ್ತು. ಮೊಹಮ್ಮದ್ ಅಮೀನ್ ಮತ್ತು ಆಯೆಷಾ ಕೇರಳದಲ್ಲಿದ್ದುಕೊಂಡು ಈ ತಂಡಕ್ಕೆ ಹಣ ಸಂಗ್ರಹಿಸಿ ಕೊಡುತ್ತಿದ್ದರು. ತಂಡದಲ್ಲಿದ್ದವರು ಟೆಲಿಗ್ರಾಮ್, ಇನ್ ಸ್ಟಾ ಗ್ರಾಮ್, ಹೂಪ್ ಹೀಗೆ ವಿವಿಧ ರೀತಿಯ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದು, ಐಸಿಸ್ ಪ್ರೇರಿತ ಬರಹಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದರು.
ಇದಕ್ಕೂ ಮುನ್ನ ಮೂವರು ಆರೋಪಿಗಳ ವಿರುದ್ಧ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಆನಂತರ ಮಂಗಳೂರು, ಭಟ್ಕಳ, ಬೆಂಗಳೂರು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಿ, ಮತ್ತೆ ಐದು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಎಂಟು ಮಂದಿಯ ವಿರುದ್ಧವೂ ಸಿರಿಯಾ ಮೂಲದ ಐಸಿಸ್ ಉಗ್ರವಾದಿ ಸಂಘಟನೆಗೆ ಯುವಕರನ್ನು ಪ್ರಚೋದಿಸಿ, ನೆಟ್ವರ್ಕ್ ಸೇರುವಂತೆ ಮಾಡುತ್ತಿದ್ದರು ಎಂಬ ಆರೋಪ ಹೊರಿಸಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಮತ್ತು ಐಸಿಸ್ ವಿಚಾರಗಳ ಬಗ್ಗೆ ಆಕರ್ಷಣೆ ಹೊಂದಿರುವ ಮೂಲಭೂತವಾದಿ ಮನಸ್ಸುಳ್ಳವರನ್ನು ಪತ್ತೆ ಮಾಡಿ, ಅವರ ಬ್ರೇನ್ ವಾಶ್ ಮಾಡಿ ಐಸಿಸ್ ಪರವಾಗಿ ಪ್ರಚೋದಿಸುತ್ತಿದ್ದರು. ಅದಕ್ಕಾಗಿ ಹಣದ ಪೂರೈಕೆಯನ್ನೂ ಮಾಡುತ್ತಿದ್ದರು.
ಮಂಗಳೂರಿನ ಉಳ್ಳಾಲಲ್ಲಿದ್ದ ದೀಪ್ತಿ ಮರಿಯಂ ಮತ್ತು ಆಕೆಯ ಮೈದುನ ಅಮರ್ ಅಬ್ದುರ್ ರೆಹ್ಮಾನ್ ಆನ್ಲೈನಲ್ಲಿ ಹಲವಾರು ಮಂದಿಯನ್ನು ಸಂಪರ್ಕಿಸಿ, ಬ್ರೇನ್ ವಾಷ್ ಮಾಡಿದ್ದಾರೆ ಎಂಬ ಮಾಹಿತಿಗಳು ಎನ್ಐಎ ಅಧಿಕಾರಿಗಳಿಗೆ ತನಿಖೆ ವೇಳೆ ಲಭಿಸಿತ್ತು. ಕಳೆದ ಆಗಸ್ಟ್ ನಲ್ಲಿ ಉಳ್ಳಾಲದ ಮನೆಗೆ ದಾಳಿ ಮಾಡಿದ್ದ ಅಧಿಕಾರಿಗಳು, ಅಬ್ದುರ್ ರೆಹ್ಮಾನ್ ಮತ್ತು ದೀಪ್ತಿ ಮರಿಯಂ ಬಳಸುತ್ತಿದ್ದ ಲ್ಯಾಪ್ ಟಾಪ್, ಪೆನ್ ಡ್ರೈವ್, ಮೊಬೈಲ್ ಇನ್ನಿತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆದಿದ್ದರು. ದೀಪ್ತಿ ಮರಿಯಂ ಆರು ತಿಂಗಳ ಮಗು ಹೊಂದಿದ್ದರಿಂದ ಆಕೆಯ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು ಜನವರಿ ಆರಂಭದಲ್ಲಿ ಬಂಧಿಸಿದ್ದರು. ಸೆಪ್ಟಂಬರ್ ತಿಂಗಳಲ್ಲಿ ಭಟ್ಕಳದಲ್ಲಿ ಬಂಧಿತನಾಗಿದ್ದ ಮಿಝಾ ಸಿದ್ದಿಕ್, ಐಸಿಸ್ ಪರವಾಗಿದ್ದ ಆನ್ಲೈನ್ ಆವೃತ್ತಿಯನ್ನು ನಡೆಸುತ್ತಿದ್ದ. ಭಟ್ಕಳದಲ್ಲಿದ್ದುಕೊಂಡೇ ತಾನು ಪಾಕಿಸ್ಥಾನದಲ್ಲಿರುವಂತೆ ತೋರಿಸಿಕೊಂಡಿದ್ದ. ಐಸಿಸ್ ನೆಟ್ವರ್ಕಲ್ಲಿದ್ದ ಇತರ ಆರೋಪಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಹೆಸರುಗಳಲ್ಲಿ ಖಾತೆಗಳನ್ನು ಓಪನ್ ಮಾಡಿಕೊಡುತ್ತಿದ್ದ.
ದೀಪ್ತಿ ಮರಿಯಂ ಸೋಶಿಯಲ್ ಮೀಡಿಯಾದಲ್ಲಿ ಹಿಂದು ಮತ್ತು ಮುಸ್ಲಿಂ ಹೆಸರಲ್ಲಿ 15ಕ್ಕೂ ಹೆಚ್ಚು ಖಾತೆಗಳನ್ನು ಹೊಂದಿದ್ದಳು. ಅದರ ಮೂಲಕ ಯುವಕರನ್ನು ಸಂಪರ್ಕಿಸಿ, ಅವರನ್ನು ಐಸಿಸ್ ಹೋರಾಟಕ್ಕೆ ಪ್ರಚೋದಿಸುತ್ತಿದ್ದಳು. ಈಕೆಯಿಂದ ಪ್ರಚೋದಿತರಾಗಿದ್ದ ಕೇರಳದ ನಾಲ್ಕು ಮಂದಿ ಯುವಕರು ಈಗಾಗ್ಲೇ ಸಿರಿಯಾಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಮುಸ್ಲಿಂ ಆಗಿ ಕನ್ವರ್ಟ್ ಆಗಿದ್ದ ಮಾದೇಶ ಪೆರುಮಾಳ್ ಎಂಬ ಹಿಂದು ವ್ಯಕ್ತಿಯೂ ದೀಪ್ತಿ ಮರಿಯಂ ಜಾಲಕ್ಕೆ ಬಿದ್ದ ಕುರಿ ಎನ್ನುವ ಮಾಹಿತಿ ತನಿಖೆಯಲ್ಲಿ ಬಹಿರಂಗ ಆಗಿತ್ತು.
The National Investigation Agency (NIA) on Friday, January 28, filed a chargesheet against eight accused persons in the ISIS Kerala terror module case. The accused have been identified as Deepthi Marla alias Maryam, Mohammed Waqar Lone alias Wilson Kashmiri, Mizha Siddeeque, Shifa Haris alias Ayesha, Obaid Hamid Matta, Madesh Shankar alias Abdullah, Ammar Abdul Rahiman and Muzamil Hassan Bhat.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm