ಬ್ರೇಕಿಂಗ್ ನ್ಯೂಸ್
13-01-22 03:14 pm HK Desk news ಕ್ರೈಂ
ಮಂಗಳೂರು, ಜ.12 : ಮೊಬೈಲ್ ಕದ್ದು ಓಡುತ್ತಿದ್ದ ಆರೋಪಿಗಳಿಬ್ಬರನ್ನು ಪೊಲೀಸ್ ಎಎಸ್ಐ ಒಬ್ಬರು ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದು ಕೋಳ ತೊಡಿಸಿದ ಪ್ರಸಂಗ ಮಂಗಳೂರು ನಗರದಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ ಘಟನೆ ನಡೆದಿದ್ದು, ಬಂಧಿತರನ್ನು ನೀರುಮಾರ್ಗ ಪಾಲ್ದಾನೆ ನಿವಾಸಿ ಹರೀಶ್ ಪೂಜಾರಿ(32) ಮತ್ತು ಅತ್ತಾವರ ನಿವಾಸಿ ಶಮಂತ್ (20) ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳು ಬುಧವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನೆಹರು ಮೈದಾನದ ಬಳಿ ಮಲಗಿದ್ದ ಉತ್ತರ ಭಾರತ ಮೂಲದ ಕಾರ್ಮಿಕನೊಬ್ಬನಿಗೆ ಹಲ್ಲೆ ನಡೆಸಿ, ಆತನ ಮೊಬೈಲ್ ಕಿತ್ತು ಓಡುತ್ತಿದ್ದರು. ಹಿಂದಿನಿಂದ ಜನರು ಬೊಬ್ಬೆ ಹೊಡೆಯುತ್ತಿದ್ದರು. ಈ ವೇಳೆ, ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡುವ ಎಎಸ್ಐ ವರುಣ್ ಆಳ್ವ ಊಟಕ್ಕೆಂದು ಹೊರಬಂದವರು ಗಮನಿಸಿದ್ದು, ಕೂಡಲೇ ಒಬ್ಬನನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ವಿಚಾರಣೆ ನಡೆಸಿದ್ದಾರೆ.
ವಿಚಾರಿಸಿದಾಗ, ತನ್ನಲ್ಲಿ ಮೊಬೈಲ್ ಇಲ್ಲ. ಇನ್ನಿಬ್ಬರು ಇದ್ದಾರೆ, ಅವರು ಹಿಡಿದು ಓಡಿದ್ದಾರೆ ಎಂದು ಆತ ಹೇಳಿದ್ದಾನೆ. ಅಷ್ಟರಲ್ಲಿ ಉಳಿದಿಬ್ಬರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದರು. ಇಷ್ಟಾಗುತ್ತಲೇ ಪರಾರಿಯಾಗಿದ್ದ ಇನ್ನಿಬ್ಬರು ಈತನಿಗೆ ಫೋನ್ ಮಾಡಿದ್ದಾರೆ. ಆ ಸಂದರ್ಭದಲ್ಲಿ ಫೋನ್ ಕರೆ ಮಾಡಿದವರು ಎಲ್ಲಿದ್ದೀಯಾ ನೀನು.. ನಾವು ವೆನ್ಲಾಕ್ ಹಿಂಭಾಗದ ಮುತ್ತಪ್ಪ ಗುಡಿ ಬಳಿ ಇದ್ದೇವೆ.. ಅಲ್ಲಿಗೆ ಬಾ, ಊಟ ಮಾಡೋಣ ಎಂದು ಕರೆದಿದ್ದಾರೆ. ಇದನ್ನು ಟ್ರಾಪ್ ಮಾಡಿದ ಎಎಸ್ಐ ವರುಣ್ ಆಳ್ವ, ಈ ಬಗ್ಗೆ ಟ್ರಾಫಿಕ್ ಪೊಲೀಸರಿಗೆ ಹೇಳಿದ್ದಾರೆ. ಅತ್ತ ಟ್ರಾಫಿಕ್ ವಾಹನ ಆ ಜಾಗಕ್ಕೆ ಹೋಗುವ ಮೊದಲೇ ಜೊತೆಗಿದ್ದ ಆರೋಪಿ ಶಮಂತ್ ನನ್ನು ಟ್ರಾಪ್ ಮಾಡುತ್ತಲೇ ಮಾಧ್ಯಮದ ವ್ಯಕ್ತಿಯೊಬ್ಬರ ಕಾರಿನಲ್ಲಿ ಸಾಗಿದ್ದಾರೆ.
ಮುತ್ತಪ್ಪ ಗುಡಿ ಬಳಿಗೆ ತಲುಪುತ್ತಲೇ, ಅಲ್ಲಿ ಯಾರೂ ಇರಲಿಲ್ಲ. ಆರೋಪಿ ಶಮಂತಲ್ಲಿ ಕೆಳಗಿಳಿದು ಫೋನ್ ಮಾಡುವಂತೆ ವರುಣ್ ಆಳ್ವ ತಿಳಿಸಿದ್ದರು. ಕೂಡಲೇ ಇನ್ನೊಂದು ಕಡೆಯಿಂದ ಆಟೋದಲ್ಲಿ ಬಂದ ಆರೋಪಿಗಳು ಶಮಂತ್ ನನ್ನು ಅದರಲ್ಲಿ ಕುಳ್ಳಿರಿಸಿ, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅಲ್ಲಿಂದ ಬೆನ್ನಟ್ಟಲು ಶುರು ಮಾಡಿದ ವರುಣ್, ಆಟೋ ಸಾಗುತ್ತಲೇ ಒಬ್ಬನನ್ನು ಎಳೆದು ಹೊರಕ್ಕೆ ಹಾಕಿದ್ದಾರೆ. ಅಷ್ಟರಲ್ಲಿ ಮೂವರೂ ಆಟೋದಿಂದ ಹಾರಿ, ಓಡಿದ್ದಾರೆ. ಒಬ್ಬಾತನನ್ನು ಕಾಲರ್ ಹಿಡಿದು ಸಾರ್ವಜನಿಕರ ಕೈಗೊಪ್ಪಿಸಿದ ವರುಣ್, ಆನಂತರ ಮತ್ತೊಬ್ಬನ ಚೇಸ್ ಮಾಡುತ್ತಾ ಓಡಿದ್ದಾರೆ.
ವೆನ್ಲಾಕ್ ಹಿಂಭಾಗದಲ್ಲಿ ರೌಂಡ್ ಹೊಡೆಯುತ್ತಾ ಎರಡು- ಮೂರು ಕಿಮೀ ಓಡಿದ್ದಾರೆ. ಇದನ್ನು ಮಾಧ್ಯಮದ ವ್ಯಕ್ತಿ ಮೊಬೈಲಿನಲ್ಲಿ ಚಿತ್ರೀಕರಿಸುತ್ತಾ ಸಾಗಿದ್ದು, ಸಿನಿಮಾದಲ್ಲಿ ಮಾತ್ರ ನೋಡ ಸಿಗುವ ಪೊಲೀಸ್ ಅಧಿಕಾರಿಯ ವೇಗದ ಓಟ ಮತ್ತು ಬೆನ್ನಟ್ಟುವ ಕಾರ್ಯಾಚರಣೆ ರೀತಿ ಸೆರೆಯಾಗಿದೆ. ವರುಣ್ ಆಳ್ವ ಕೊನೆಗೆ ಇಬ್ಬರನ್ನು ಬಂಧಿಸಿದ್ದು, ಇನ್ನೊಬ್ಬ ರಾಜೇಶ್ ಎಂಬಾತ ಪರಾರಿಯಾಗಿದ್ದಾನೆ. ಆತ ಉಳ್ಳಾಲದ ವ್ಯಕ್ತಿ ಅನ್ನುವ ಮಾಹಿತಿ ಗೊತ್ತಾಗಿದ್ದು, ಬಂಧಿಸಲು ಪೊಲೀಸ್ ತಂಡ ತೆರಳಿದೆ. ಆದರೆ, ಎಎಸ್ಐ ವರುಣ್ ಆಳ್ವ ಕಳ್ಳನ ಬೆನ್ನು ಬಿಡದೆ ಓಡುತ್ತಾ, ಬೆನ್ನಟ್ಟಿ ಹಿಡಿದ ಕಾರ್ಯಾಚರಣೆ ಕುತೂಹಲ ಮೂಡಿಸಿದೆ. ಆರೋಪಿಗಳಿಂದ ಮೊಬೈಲನ್ನು ವಶಕ್ಕೆ ಪಡೆಯಲಾಗಿದ್ದು, ಪಾಂಡೇಶ್ವರ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಿಸಲಾಗಿದೆ.
ಸೂಕ್ತ ಸಮಯ ಪ್ರಜ್ಞೆ ಪಾಲಿಸಿ, ಆರೋಪಿಯನ್ನು ಬೆನ್ನಟ್ಟಿ ಹಿಡಿದ ವರುಣ್ ಆಳ್ವ ಕಾರ್ಯ ಪ್ರಶಂಸೆಗೆ ಕಾರಣವಾಗಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರಶಂಸಿಸಿದ್ದು, ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
Mangalore Live Police Chase thief for stealing Mobile, video goes viral. In the incident where a policeman caught a man trying to escape after stealing another person’s mobile phone, another accused was also nabbed. The arrested accused is identified as Shamanth (20) from Attavar. When inquired, the police came to know that they operate in a gang of 4-5 members. Assistant Reserve Sub-Inspector (ARSI) Varun Alva had caught another accused, Harish Poojary (32) from Neermarga, by chasing and pinning him down in cinema style.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm