ಬ್ರೇಕಿಂಗ್ ನ್ಯೂಸ್
05-01-22 01:19 pm HK Desk news ಕ್ರೈಂ
ನವದೆಹಲಿ, ಜ.5 : ಮುಸ್ಲಿಮ್ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದ ಬುಲ್ಲಿ ಬಾಯ್ ಏಪ್ ಬೆಳಕಿಗೆ ಬರುತ್ತಲೇ ಹಿಂದು ಮಹಿಳೆಯರನ್ನು ಟಾರ್ಗೆಟ್ ಮಾಡಿರುವ ಇದೇ ಮಾದರಿಯ ಟೆಲಿಗ್ರಾಂ ಗ್ರೂಪ್ ಸಕ್ರಿಯವಾಗಿರುವುದು ಪತ್ತೆಯಾಗಿದ್ದು, ಸಾರ್ವಜನಿಕರು ಗಮನಕ್ಕೆ ತರುತ್ತಲೇ ಅದನ್ನು ಕೂಡ ಕೇಂದ್ರ ಸರಕಾರ ಬ್ಲಾಕ್ ಮಾಡಿದೆ.
ಬುಲ್ಲಿ ಬಾಯ್ ವಿಚಾರ ಹೊರಗೆ ಬರುತ್ತಲೇ ದೇಶಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ಬಲಪಂಥೀಯರನ್ನು ಟಾರ್ಗೆಟ್ ಮಾಡಿ ಬೈದಾಡುವ ವಿದ್ಯಮಾನ ನಡೆದಿತ್ತು. ಇಷ್ಟಾಗುತ್ತಲೇ ಸೋಶಿಯಲ್ ಮೀಡಿಯಾ ಬಳಕೆದಾರರು ಟೆಲಿಗ್ರಾಮ್ ಚಾನೆಲ್ ಗಳಲ್ಲಿ ಹಿಂದು ಮಹಿಳೆಯರನ್ನು ಟಾರ್ಗೆಟ್ ಮಾಡಿರುವ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಸರಕಾರ ಇದರ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಹಲವರು ಟ್ವಿಟರ್ ನಲ್ಲಿ ಪ್ರಶ್ನೆ ಮಾಡಿದ್ದರು.
ಈ ಬಗ್ಗೆ ಮಹಿಳೆಯೊಬ್ಬರ ಪ್ರಶ್ನೆಗೆ ಮರು ಟ್ವೀಟ್ ಮಾಡಿರುವ ಸಚಿವ ಅಶ್ವಿನ್ ವೈಷ್ಣವ್, ಸರಕಾರ ಆ ರೀತಿಯ ಚಾನೆಲ್ಗಳನ್ನು ಬ್ಲಾಕ್ ಮಾಡಿದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರಕಾರದ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. Hindu Randiyan ಎಂಬ ಹೆಸರಲ್ಲಿದ್ದ ಟೆಲಿಗ್ರಾಮ್ ಚಾನೆಲಲ್ಲಿ ಹಿಂದು ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಿ, ನಿಂದಿಸುವ ರೀತಿ ಪೋಸ್ಟ್ ಮಾಡಲಾಗಿತ್ತು. ವಿವಾದ ಹೊರಬರುತ್ತಲೇ ಸರಕಾರ ಈ ಚಾನೆಲ್ ಗ್ರೂಪನ್ನು ಬ್ಲಾಕ್ ಮಾಡಿಸಿದೆ. ಈ ಗ್ರೂಪನ್ನು ಯಾರು ಆರಂಭಿಸಿದ್ದರು, ಯಾರು ಇದರ ಹಿಂದಿದ್ದಾರೆ, ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಅನ್ನೋದ್ರ ಬಗ್ಗೆ ಮಾಹಿತಿಯಿಲ್ಲ.
ಬುಲ್ಲಿ ಬಾಯ್ ಮತ್ತು ಟೆಲಿಗ್ರಾಮ್ ಚಾನೆಲ್ ಎರಡು ಕೂಡ ಒಂದೇ ರೀತಿಯದಾಗಿದ್ದು, ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸಿ ಆನ್ಲೈನಲ್ಲಿ ಕಿರುಕುಳ ನೀಡುವ ಕೃತ್ಯ. ಆದರೆ ಹಿಂದು- ಮುಸ್ಲಿಂ ಪ್ರತ್ಯೇಕಿಸಿ ಈ ರೀತಿಯ ಕಿರುಕುಳ ನೀಡುತ್ತಿರುವುದು ಧಾರ್ಮಿಕವಾಗಿ ಮತ ಭೇದಕ್ಕೆ ಕಾರಣವಾಗುತ್ತಿದೆ. ಕೆಲವು ಕಿಡಿಗೇಡಿಗಳು ಇದರ ಹಿಂದಿದ್ದು, ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಮಹಿಳೆಯರ ಫೋಟೋ ತೆಗೆದು ವಿಕೃತವಾಗಿ ಚಿತ್ರಿಸಿ ಪೋಸ್ಟ್ ಮಾಡುತ್ತಿದ್ದಾರೆ. ಟ್ವಿಟರ್, ಲಿಂಕ್ ಡಿನ್ ಬಳಸುವ ಪ್ರಭಾವಿ ಮಹಿಳೆಯರನ್ನು ಈ ರೀತಿ ಚಿತ್ರಿಸುತ್ತಿದ್ದು, ಆ ಮೂಲಕ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಬುಲ್ಲಿ ಬಾಯ್ ಅತ್ಯಂತ ಸಣ್ಣ ಪ್ಲಾಟ್ ಫಾರ್ಮ್ ಆಗಿದ್ದರೂ, ಇದರ ಸ್ಕ್ರೀನ್ ಶಾಟ್ ತೆಗೆದು, ಅದರಲ್ಲಿನ ಮಹಿಳೆಯರ ಫೋಟೋಗಳನ್ನು ತೆಗೆದು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದರಿಂದಾಗಿ ಬುಲ್ಲಿ ಬಾಯ್ ಒಮ್ಮಿಂದೊಮ್ಮೆಗೆ ಎಲ್ಲರಿಗೂ ಪರಿಚಯ ಆಗುವಂತಾಗಿದೆ. ಅಲ್ಲದೆ, ಅದರಲ್ಲಿ ಬಳಕೆಯಾದ ಮಹಿಳೆಯರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.
ಮುಸ್ಲಿಂ ಮಹಿಳೆಯರ ಫೋಟೋ ಹರಾಜು ಪ್ರಕರಣ ; ಬೆಂಗಳೂರಿನ ಹುಡುಗ, ಉತ್ತರಾಖಂಡದ ಮಹಿಳೆ ಬಂಧನ
ಮುಸ್ಲಿಮ್ ಮಹಿಳೆಯರ ಹರಾಜು ಪ್ರಕರಣ ; ಬೆಂಗಳೂರಿನಲ್ಲಿ ಶಂಕಿತ ಆರೋಪಿ ವಶಕ್ಕೆ
ಮುಸ್ಲಿಂ ಮಹಿಳೆಯರ ಹರಾಜು ; ಬುಲ್ಲಿ ಬಾಯ್ ಬಗ್ಗೆ ಟ್ವಿಟರ್ ಬಳಿ ಮಾಹಿತಿ ಕೇಳಿದ ದೆಹಲಿ ಪೊಲೀಸರು
ಮುಸ್ಲಿಂ ಮಹಿಳೆಯರ ಫೋಟೋ ಕದ್ದು ಸಾರ್ವಜನಿಕ ಹರಾಜಿಗಿಟ್ಟ GitHub ; ದೆಹಲಿಯಲ್ಲಿ ಕಿಡಿ ಎಬ್ಬಿಸಿದ ಸೋಶಿಯಲ್ ಮೀಡಿಯಾ !
NEW DELHI: IT minister Ashwini Vaishnaw confirmed that the government has blocked a Telegram channel that allegedly targeted Hindu women and circulated obscene photos and abused them online. This comes after the Mumbai Police arrested a couple of suspects over the on-going Bulli Bai app case which targeted and abused Muslim women online.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm