ಬ್ರೇಕಿಂಗ್ ನ್ಯೂಸ್
03-12-21 02:42 pm HK Desk news ಕ್ರೈಂ
ಮಂಗಳೂರು, ಡಿ.3: ಮನೆಯ ಹೊರಭಾಗದಲ್ಲಿ ಕಟ್ಟಿಹಾಕಿದ್ದ ಮೂರು ದನಗಳನ್ನು ಮನೆಯವರಿಗೆ ತಲವಾರು ತೋರಿಸಿ, ಸ್ಕಾರ್ಪಿಯೋ ವಾಹನದಲ್ಲಿ ಹೊತ್ತೊಯ್ದ ಘಟನೆ ಕುಳೂರಿನಲ್ಲಿ ನಡೆದಿದ್ದು, ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಾಗನ ಕಲ್ಲಿಗೆ ಹಾನಿ ಘಟನೆ ನಡೆದಿದ್ದ ಪ್ರದೇಶದ ಕುಳೂರಿನ ಉಮೇಶ್ ಎಂಬವರ ಮನೆಯ ಆವರಣದಲ್ಲಿ ಘಟನೆ ನಡೆದಿದೆ. ಇಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ನಾಲ್ಕು ಮಂದಿ ಸೇರಿ ಮನೆಯ ಹೊರಗೆ ಕಟ್ಟಿಹಾಕಿದ್ದ ದನಗಳನ್ನು ಸ್ಕಾರ್ಪಿಯೋ ವಾಹನದಲ್ಲಿ ತುಂಬಿಸುತ್ತಿದ್ದುದನ್ನು ಅದೇ ಪರಿಸರದ ಜನರು ನೋಡಿದ್ದಾರೆ. ಈ ಬಗ್ಗೆ ಮನೆಯವರಿಗೆ ತಿಳಿಸಿದ್ದು, ಬಳಿಕ ಸ್ಥಳೀಯರು ಬೊಬ್ಬೆ ಹಾಕುತ್ತಲೇ ಮೂರು ದನಗಳ ಜೊತೆ ಸ್ಕಾರ್ಪಿಯೋ ವಾಹನದಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.


ಈ ಬಗ್ಗೆ ಉಮೇಶ್ ಮತ್ತು ಬಜರಂಗದಳ ಸಂಘಟನೆಯ ನಾಯಕರು ಕಾವೂರು ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಅಲ್ಲದೆ, ಬಜರಂಗದಳ ಸಂಘಟನೆಯ ಪ್ರಮುಖರು ಸದ್ರಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕೃತ್ಯ ಎಸಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಕದ್ದೊಯ್ದ ಗೋವುಗಳನ್ನು ಪತ್ತೆಮಾಡಿ ಮತ್ತೆ ತಂದು ಕೊಡಬೇಕು ಎಂದು ಆಗ್ರಹಿಸಿದ್ದಾರೆ. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಸ್ಥಳೀಯ ಪರಿಸರದ ನಿವಾಸಿಗಳು ಮತ್ತು ಮಂಗಳೂರಿನ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಡಿ.4ರಂದು ಕಾವೂರು ಠಾಣೆಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ.


ಕಾವೂರು, ಪಂಜಿಮೊಗರು, ಕುಳೂರು ಪರಿಸರದಲ್ಲಿ ಕಳೆದ ಹಲವು ದಿನಗಳಲ್ಲಿ ಇದೇ ರೀತಿ ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದೊಯ್ಯುವ ಕೃತ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಸ್ಥಳೀಯರು ದೂರು ದಾಖಲಿಸಿಲ್ಲ. ಇಂದಿನ ಕೃತ್ಯ ಬಯಲಾಗುತ್ತಿದ್ದಂತೆ, ನಮ್ಮ ದನವನ್ನೂ ಇದೇ ರೀತಿ ಕದ್ದೊಯ್ದಿದ್ದಾರೆ ಎಂದು ಹಲವರು ಹೇಳತೊಡಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪರಿಸರದ ಜನರು ಆಕ್ರೋಶಿತರಾಗಿದ್ದು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಪೊಲೀಸರು ಅಂತ್ಯ ಹಾಡಬೇಕು ಎಂದು ಒತ್ತಾಯಿಸಿದ್ದಾರೆ.
Mnagalore Bangrakuloor Miscreants show talwar and steal cows VHP visit spot. The incident has taken place early in the morning today. Also the VHP has demanded the arrest of the culprits by 24 hours.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
03-02-26 11:14 pm
Mangaluru Staffer
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm