ಬ್ರೇಕಿಂಗ್ ನ್ಯೂಸ್
21-11-21 12:45 pm HK News Desk ಕ್ರೈಂ
ಚೆನೈ , ನ.21: ಆನ್ಲೈನ್ ಆಟದ ಹುಚ್ಚಿಗೆ ಒಳಗಾಗಿದ್ದ 15 ವರ್ಷದ ಬಾಲಕನೊಬ್ಬ ಪೋಷಕರು ಬುದ್ದಿವಾದ ಹೇಳಿದ್ದನ್ನೇ ನೆಪವಾಗಿಟ್ಟು ಮನೆಯಿಂದಲೇ ನಾಪತ್ತೆಯಾಗಿದ್ದಲ್ಲದೇ ದೂರದ ನೇಪಾಳಕ್ಕೆ ಹಾರಲು ಪ್ಲಾನ್ ನಡೆಸಿದ್ದು ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಮನೆ ಬಿಡುವ ಮುನ್ನ ಅವನು 33 ಲಕ್ಷ ರೂಪಾಯಿ ನಗದು ಹಾಗೂ 213 ಪವನ್ ಚಿನ್ನಾಭರಣಗಳನ್ನು ಎತ್ತಿಕೊಂಡು ಹೋಗಿದ್ದಾನೆ.
ಪೋಷಕರನ್ನು ಬಿಟ್ಟು ನೇಪಾಳಕ್ಕೆ ಹಾರುವುದು ಮತ್ತು ಯಾವುದೇ ತೊಂದರೆಯಿಲ್ಲದೆ ಅಲ್ಲಿ ಆನ್ಲೈನ್ ಆಟಗಳನ್ನು ಆಡುವುದು ಅವನ ಯೋಜನೆಯಾಗಿತ್ತು. ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದ ಆತ ತನ್ನ ಹಳೆಯ ಮೊಬೈಲ್ ಫೋನನ್ನು ಎಸೆದು ಹೊಸತಾಗಿ ಐಫೋನ್ ಖರೀದಿಸಿ, ಸಿಮ್ ಕಾರ್ಡನ್ನೂ ಬದಲಾಯಿಸಿದ್ದ.
ಈ ಐನಾತಿ ಬಾಲಕ 11 ನೇ ತರಗತಿ ವಿದ್ಯಾರ್ಥಿ. ತಂದೆ ಮೆಟ್ರೋ ಗುತ್ತಿಗೆದಾರ ಮತ್ತು ಅವನ ತಾಯಿ ಕಾಲೇಜು ಪ್ರಾಧ್ಯಾಪಕಿ. ಓಲ್ಡ್ ವಾಷರ್ಮೆನ್ ಪೇಟ್ ಪ್ರದೇಶದಲ್ಲಿ ನೆಲೆಸಿದ್ದಾರೆ. ಯಾವಾಗಲೂ ಆನ್ಲೈನ್ ಆಟಗಳನ್ನು ಆಡುತ್ತಿದ್ದುದರಿಂದ, ಹೆತ್ತವರು ಬೈಯುತ್ತಿದ್ದರು. ಇತ್ತೀಚೆಗೆ ಇದೇ ರೀತಿ ಬೈದು ಅವನಲ್ಲಿದ್ದ ಮೊಬೈಲ್ ಫೋನನ್ನು ಕಿತ್ತುಕೊಂಡು ಮುಟ್ಟದಂತೆ ತಾಕೀತು ಮಾಡಿದ್ದರು.
ಬುಧವಾರ, ತಂದೆ ಕೆಲಸಕ್ಕೆ ಹೋದ ನಂತರ, ತನ್ನ ಸ್ನೇಹಿತನನ್ನು ಭೇಟಿಯಾಗಲೆಂದು ಮನೆಯಿಂದ ಹೊರಗೆ ಹೋಗಿದ್ದ ಬಾಲಕ ತಡರಾತ್ರಿ ವರೆಗೆ ಹಿಂತಿರುಗಲಿಲ್ಲ. ಇದೇ ವೇಳೆ ಕುಟುಂಬದವರು ಆತನನ್ನು ಹುಡುಕಲು ಆರಂಭಿಸಿದ್ದು ಮನೆಯಲ್ಲಿದ್ದ 33 ಲಕ್ಷ ರೂ. ಹಾಗೂ 213 ಪವನ್ ಆಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಅಷ್ಟರಲ್ಲೇ ಆತ ತನ್ನ ಹಳೆಯ ಮೊಬೈಲ್ ಎಸೆದು ಐಫೋನ್ ಮತ್ತು ಹೊಸ ಸಿಮ್ ಕಾರ್ಡ್ ಖರೀದಿಸಿದ್ದೂ ಗೊತ್ತಾಗಿದೆ.
ಕೂಡಲೇ ಸೈಬರ್ ಕ್ರೈಂ ಅಧಿಕಾರಿಗಳ ಗಮನಕ್ಕೆ ತಂದಿದ್ದು ಪೊಲೀಸರು ಸ್ಥಳ ಪತ್ತೆ ಹಚ್ಚಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದ ಬಳಿ ಹೋಟೆಲ್ನಲ್ಲಿ ಕೊಠಡಿಯನ್ನು ಸಹ ಕಾಯ್ದಿರಿಸಿದ್ದ. ಬಳಿಕ ಪೊಲೀಸ್ ತಂಡ ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಲ್ಲದೆ, ಮರಳಿ ಮನೆಗೆ ಕರೆತಂದು ಚಿನ್ನಾಭರಣ ವಸ್ತುಗಳ ಸಮೇತ ಕುಟುಂಬಕ್ಕೆ ಸೇರಿಸಿದೆ.
Not liking his parents' constant nagging about him playing online games, a 15-year-old boy allegedly disappeared from the house on Friday. Before leaving, he packed with him Rs 33 lakh cash and 213 sovereigns of gold ornaments. His plan was to fly to Nepal, away from his parents, and play online games without any disturbance. He had also discarded his old mobile phone, bought an iPhone, and changed his SIM card. However, the police were quick to find him.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am