ಗುಂಡು ಹಾರಿಸಿಕೊಂಡು ಕಾಂಗ್ರೆಸ್ ಶಾಸಕನ ಪುತ್ರ ಆತ್ಮಹತ್ಯೆ ; ಸಾಯುವ ಮುನ್ನ ಸ್ನೇಹಿತರಿಗೆ ಧನ್ಯವಾದ ಮೆಸೇಜ್

13-11-21 11:14 am       HK NEWS DESK   ಕ್ರೈಂ

ಶಾಸಕರ ಅಪ್ರಾಪ್ತ ಪುತ್ರನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಬಬಲ್‌ ಪುರ ನಡೆದಿದೆ.

ಮಧ್ಯಪ್ರದೇಶ, ನವೆಂಬರ್ 12: ಶಾಸಕರ ಅಪ್ರಾಪ್ತ ಪುತ್ರನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಬಬಲ್‌ ಪುರ ನಡೆದಿದೆ. ಕಾಂಗ್ರೆಸ್‌ ಶಾಸಕ ಸಂಜಯ್‌ ಯಾದವ್‌ ಅವರ ಪುತ್ರ ವೈಭವ್‌ ಅಲಿಯಾಸ್‌ ವಿಭು ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.

ವೈಭವ್ ಯಾದವ್ (17 ವರ್ಷ) ಎಂಬಾತ ಜಬಲ್‌ಪುರ ಪಟ್ಟಣದ ಗೋರಖ್‌ಪುರ ಪ್ರದೇಶದಲ್ಲಿ ತನ್ನ ತಂದೆ ಸಂಜಯ್ ಯಾದವ್ ಅವರ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆಯುತ್ತಲೇ ವೈಭವ್‌ ಯಾದವ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ವೈಭವ್‌ ಯಾದವ್‌ ತಂದೆ ಸಂಜಯ್ ಯಾದವ್ ಅವರು ಜಬಲ್ಪುರ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿರುವ ಬಾರ್ಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.

ಘಟನೆಯ ಬೆನ್ನಲ್ಲೇ ಪೊಲೀಸರು ಬಬಲ್‌ಪುರದಲ್ಲಿರುವ ಮನೆಯಲ್ಲಿ ಶಾಸಕ ಸಂಜಯ್‌ ಯಾದವ್‌ ಅವರ ರಿವಾಲ್ವಾರ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯಲ್ಲಿ ವೈಭವ್‌ ಯಾದವ್‌ ಡೆತ್‌ನೋಟ್‌ ಪತ್ತೆಯಾಗಿದ್ದು, ಪತ್ರದಲ್ಲಿ ಸಾವಿಗೆ ನಿಖರವಾದ ಕಾರಣ ಏನೂ ಅನ್ನೋದನ್ನು ನಮೂದಿಸಿಲ್ಲ ಎಂದು ಜಬಲ್ ಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದಾರ್ಥ್‌ ಬಹುಗುಣ ಅವರು ತಿಳಿಸಿದ್ದಾರೆ ಎಂದು ಖ್ಯಾತ ಸುದ್ದಿವಾಹಿನಿ ಇಂಡಿಯಾ ಟುಡೆ ವರದಿ ಮಾಡಿದೆ.

ವೈಭವ್‌ ಯಾದವ್‌ 12ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾನೆ. ವಾಶ್‌ ರೂಂನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವೈಭವ್‌ ಯಾದವ್‌ ತನ್ನ ಸ್ನೇಹಿತರಿಗೆ ಮೇಸೇಜ್‌ ಕಳುಹಿಸಿದ್ದು, ಅವರಿಗೆಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾನೆ ಎನ್ನಲಾಗುತ್ತಿದೆ. ಆದರೆ ಶಾಸಕರ ಪುತ್ರನ ಸಾವಿಗೆ ನಿಖರವಾದ ಕಾರಣ ಮಾತ್ರ ತಿಳಿದುಬಂದಿಲ್ಲ.

Congress MLA Sanjay Yadav's minor son Vaibhav, alias Vibhu, shot himself on Thursday. He was admitted to a hospital where he died during treatment. Sanjay Yadav is an MLA from Bargi in Madhya Pradesh.