ಬ್ರೇಕಿಂಗ್ ನ್ಯೂಸ್
06-11-21 12:46 pm HK Desk ಕ್ರೈಂ
ಪುಣೆ, ನ.6: ಅಪರಾಧ ಪ್ರಕರಣಗಳಲ್ಲಿ ಸಣ್ಣ ಕೂದಲು, ರಕ್ತದ ಕಲೆ ಸಿಕ್ಕರೂ, ಅದು ಹಂತಕನ ಸುಳಿವು ನೀಡುತ್ತದೆ ಎನ್ನುತ್ತಾರೆ. ಅದಕ್ಕಾಗಿ ಯಾವುದೇ ಪ್ರಕರಣ ದಾಖಲಾದ ಕೂಡಲೇ ಪೊಲೀಸರು ಮೊದಲಿಗೆ ಏನಾದ್ರೂ ಕುರುಹು ಸಿಗುತ್ತಾ ಎಂದು ಹುಡುಕಾಟ ನಡೆಸುತ್ತಾರೆ. ಇಲ್ಲೊಂದು ಪ್ರಕರಣದಲ್ಲಿ ಬೇರಾವುದೇ ಸಾಕ್ಷ್ಯ ಇಲ್ಲದಿದ್ದರೂ, ಕೊಲೆಯಾದ ಯುವಕನ ಒಂದು ಚಪ್ಪಲಿಯೇ ಹಂತಕರ ಬಗ್ಗೆ ಸುಳಿವು ನೀಡಿತ್ತು.
ಅಕ್ಟೋಬರ್ 22ರಂದು 27 ವರ್ಷದ ಯುವಕ ನಾಪತ್ತೆಯಾದ ಬಗ್ಗೆ ಚಿಂಚ್ವಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವಕನ ತಾಯಿಯೇ ಕೊಲೆ ಬಗ್ಗೆ ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಯುವಕನ ಮೊಬೈಲ್ ಕರೆ ಆಧರಿಸಿ ಕೆಲವು ಸುಳಿವುಗಳು ಲಭಿಸಿದ್ದವು. ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಬಗ್ಗೆ ಶಂಕೆಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದರೆ, ಮಹಿಳೆಯ ಮನೆ ಬಳಿಗೆ ಹೋದವರಿಗೆ ಕೊಲೆಯಾದ ಯುವಕನ ಚಪ್ಪಲಿ ಸಿಕ್ಕಿತ್ತು.
ಪೊಲೀಸರು ಚಪ್ಪಲಿ ಆಧರಿಸಿ ತನಿಖೆ ಆರಂಭಿಸಿದ್ದರು. ಅದರಂತೆ, ಅ.21ರಂದು ಮಹಿಳೆಗೆ ಯುವಕ ಕರೆ ಮಾಡಿದ್ದು ಕಂಡುಬಂದಿದೆ. ಮಹಿಳೆಯನ್ನು ವಿಚಾರಿಸಿದಾಗ, ಅದೇ ದಿನ ರಾತ್ರಿ ಯುವಕ ಮಹಿಳೆಯ ಮನೆ ಬಳಿಗೆ ಬಂದಿದ್ದ ಅನ್ನೋದು ತಿಳಿದುಬಂದಿದೆ. ಅಷ್ಟೇ ಅಲ್ಲ, ತನ್ನ ಪತ್ನಿಯನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು ಆಕೆಯ ಪತಿ ತನ್ನಿಬ್ಬರು ಗೆಳೆಯರ ಜೊತೆ ಸೇರಿ ಚೂರಿಯಿಂದ ಇರಿದು ಕೊಲೆ ಮಾಡಿದ್ದರು.
ಆನಂತರ, ಮಹಿಳೆಯ ಪತಿಗೆ ಸೇರಿದ ಕಳ್ಳಭಟ್ಟಿ ತಯಾರಿಕಾ ಕೇಂದ್ರಕ್ಕೆ ಶವ ಒಯ್ದು ಅಲ್ಲಿ ದೇಹವನ್ನು ತುಂಡು ಮಾಡಿ ಸುಟ್ಟು ಹಾಕಿದ್ದಾರೆ. ಸುಟ್ಟು ಹೋದ ದೇಹದ ಭಾಗಗಳನ್ನು ವಿವಿಧ ಕಡೆ ಎಸೆದು ತಮ್ಮ ಪಾಡಿಗೆ ಕೆಲಸದಲ್ಲಿ ತೊಡಗಿದ್ದರು. ಆದರೆ, ಇತ್ತ ಪೊಲೀಸ್ ದೂರು ದಾಖಲಾಗಿದ್ದು ಗೊತ್ತಾಗುತ್ತಲೇ ಆರೋಪಿಗಳು ತಲೆಮರೆಸಿಕೊಂಡಿದ್ದರು. ಹಂತಕರು ಯಾರೆಂದು ಗೊತ್ತಾಗುತ್ತಲೇ ಬೆನ್ನುಬಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಪುಣೆಯಲ್ಲಿ ಬಂಧಿಸಿದ್ದಾರೆ.
A 27-year-old man, who had gone missing in mid-October, was allegedly murdered by the husband of the woman he was having an affair with, said Pune police. Three people, including the main accused, were arrested in connection with the matter.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
03-02-26 11:14 pm
Mangaluru Staffer
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm