ಬ್ರೇಕಿಂಗ್ ನ್ಯೂಸ್
05-11-21 12:25 pm H.K, Bengaluru Desk ಕ್ರೈಂ
ಬೆಂಗಳೂರು, ನ.6: ಇತ್ತೀಚೆಗೆ ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರ ಖಾತೆಗೆ ಕನ್ನ ಹಾಕಿದ ಪ್ರಸಂಗ ನಡೆದಿತ್ತು. ಬ್ಯಾಂಕ್ ಪ್ರತಿನಿಧಿಗಳೆಂದು ಹೇಳಿ ಕರೆ ಮಾಡಿದ್ದವರು ಅವರಿಂದಲೇ ಖಾತೆ ಬಗ್ಗೆ ಮಾಹಿತಿ ಪಡೆದು 89 ಸಾವಿರ ರೂಪಾಯಿ ಹಣವನ್ನು ದೋಚಿದ್ದರು. ಈ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರಿಗೆ ಶಂಕರ್ ಬಿದರಿ ದೂರು ನೀಡಿದ್ದರು. ಆದರೆ, ಸೈಬರ್ ಪೊಲೀಸರು ಬೆನ್ನು ಬಿದ್ದು ಆರೋಪಿಗಳನ್ನು ಪತ್ತೆ ಮಾಡುವ ಮೊದಲೇ ಹಣವನ್ನು ಕನ್ನ ಹಾಕಿದವರೇ ಹಿಂತಿರುಗಿಸಿದ್ದಾರೆ.
ಇತ್ತೀಚೆಗೆ ದುಬೈಗೆ ಹೊರಡುವ ಅವಸರದಲ್ಲಿದ್ದಾಗ, ಶಂಕರ್ ಬಿದರಿ ಅವರಿಗೆ ಬ್ಯಾಂಕ್ ಪ್ರತಿನಿಧಿಗಳ ಹೆಸರಲ್ಲಿ ಕರೆ ಬಂದಿತ್ತು. ನೀವು ನಿಮ್ಮ ಪಾನ್ ಕಾರ್ಡ್ ಸಂಖ್ಯೆಯನ್ನು ಖಾತೆಯೊಂದಿಗೆ ಲಿಂಕ್ ಮಾಡದೇ ಇದ್ದರೆ ನಿಮ್ಮ ಖಾತೆ ಫ್ರೀಜ್ ಆಗಲಿದೆ ಎಂದು ಅತ್ತ ಕಡೆಯಿಂದ ಹೇಳಿದ್ದರು. ವಿದೇಶಕ್ಕೆ ಹೊರಡುವಾಗ ಎಟಿಎಂ ಇನ್ನಿತರ ಅಗತ್ಯಗಳನ್ನು ಒಟ್ಟುಗೂಡಿಸುತ್ತಿದ್ದಾಗಲೇ ಈ ರೀತಿಯ ಕರೆ ಬಂದಿದ್ದರಿಂದ ಶಂಕರ್ ಬಿದರಿ ಸಹಜವಾಗೇ ಆತಂಕಕ್ಕೆ ಒಳಗಾಗಿದ್ದರು. ತರಾತುರಿಯಲ್ಲಿ ಏನೆಲ್ಲಾ ಅಗತ್ಯವಿದೆಯೋ ಅವೆಲ್ಲ ಮಾಹಿತಿಯನ್ನೂ ಫೋನ್ ಕರೆ ಮಾಡಿದವರಿಗೆ ನೀಡಿದ್ದರು. ಆನಂತರ ಓಟಿಪಿ ನಂಬರ್ ಬಂದಿದ್ದನ್ನೂ ಅವರಿಗೆ ನೀಡಿದ್ದರು. ಬಳಿಕ ಎರಡು ದಿನಗಳಲ್ಲಿ ನೋಡಿದರೆ ಖಾತೆಯಿಂದ 89 ಸಾವಿರ ರೂ. ಹಣ ಕಟ್ ಆಗಿತ್ತು.
ಕೂಡಲೇ ವಿಷಯ ತಿಳಿದ ಶಂಕರ್ ಬಿದರಿ, ತನಗೆ ಕರೆ ಮಾಡಿದ್ದ ವ್ಯಕ್ತಿಯ ನಂಬರಿಗೆ ಫೋನ್ ಮಾಡಿದ್ದರಲ್ಲದೆ, ಬೆದರಿಕೆ ಹಾಕಿದ್ದರು. ನೀನು ಫ್ರಾಡ್ ಅನ್ನೋದು ಗೊತ್ತಾಗಿದೆ. ನೀನು ದೇಶದ ಎಲ್ಲೇ ಅಡಗಿದ್ದರೂ ಲೊಕೇಶನ್ ಟ್ರೇಸ್ ಮಾಡಿ ಅರೆಸ್ಟ್ ಮಾಡಿಸ್ತೀನಿ. ಕೂಡಲೇ ಹಣ ಹಿಂದಿರುಗಿಸು.. ನಾನು ಯಾರೆಂದು ನಿನಗೆ ಗೊತ್ತಿಲ್ಲ ಎಂದು ಹೆದರಿಸಿದ್ದರು. ಆನಂತರ, ತಾನು ಹಣ ಕಳಕೊಂಡ ಬಗ್ಗೆ ಸೈಬರ್ ಠಾಣೆಗೆ ದೂರನ್ನೂ ನೀಡಿದ್ದರು. ಈ ನಡುವೆ, ಕನ್ನ ಹಾಕಿದ್ದವರೇ ಶಂಕರ ಬಿದರಿ ಖಾತೆಗೆ ಪೂರ್ತಿ ಹಣವನ್ನು ಮರು ಪಾವತಿ ಮಾಡಿದ್ದಾರೆ.
ಶಂಕರ್ ಬಿದರಿ ಸ್ವತಃ ಈ ಬಗ್ಗೆ ಮಾಹಿತಿ ನೀಡಿದ್ದು, ಈ ರೀತಿ ಮೋಸ ಮಾಡುವ ಮಂದಿ ಪಶ್ಚಿಮ ಬಂಗಾಳದಲ್ಲಿ ಅಡಗಿರುತ್ತಾರೆ. ನಾನು ಕರೆ ಮಾಡಿದಾಗಲೇ ಆ ವ್ಯಕ್ತಿ ತಪ್ಪನ್ನು ಒಪ್ಪಿಕೊಂಡಿದ್ದ. ಹೆದರಿಕೆ ಆಗಿಯೋ ಏನೋ ಪೂರ್ತಿ ಹಣವನ್ನು ಹಿಂತಿರುಗಿಸಿದ್ದಾನೆ ಎಂದು ಹೇಳಿದ್ದಾರೆ.
ಶಂಕರ್ ಬಿದರಿಗೆ ಈ ರೀತಿ ಅನುಭವ ಆಗಿರುವುದು ಇದು ಎರಡನೇ ಬಾರಿ. ಕಳೆದ ಫೆಬ್ರವರಿ ತಿಂಗಳಲ್ಲಿ ಶಂಕರ್ ಬಿದರಿಯ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಹ್ಯಾಕ್ ಮಾಡಿ, ಬಿದರಿಯ ಫ್ರೆಂಡ್ ಒಬ್ಬರಿಗೆ ಮೈಲ್ ಸಂದೇಶ ಕಳುಹಿಸಲಾಗಿತ್ತು. ತನಗೆ ಅರ್ಜೆಂಟ್ ಆಗಿ 25 ಸಾವಿರ ಹಣ ಬೇಕೆಂದು ಹೇಳಿ ಪಂಜಾಬ್ ನ್ಯಾಶನಲ್ ಬ್ಯಾಂಕಿನ ಖಾತೆಯನ್ನು ನೀಡಲಾಗಿತ್ತು. ಆ ಫ್ರೆಂಡ್ ಬಿದರಿ ಬಗ್ಗೆ ತಿಳಿದವರಾಗಿದ್ದರಿಂದ ಆ ಕೂಡಲೇ ಹಣವನ್ನು ಹಾಕಿದ್ದರು. ಆಮೇಲೆ ನೋಡಿದರೆ, ಅದು ಫ್ರಾಡ್ ಆಗಿತ್ತು. ಬಳಿಕ ಸೈಬರ್ ಠಾಣೆಗೆ ದೂರು ನೀಡಿದ್ದು, ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಾಗಾಲ್ಯಾಂಡ್ ನಲ್ಲಿ ಅವಿತಿದ್ದ ಮೂವರನ್ನು ಹಿಡಿದು ತಂದಿದ್ದರು.
ಬಿದರಿ ಇಲಾಖೆಯಲ್ಲಿ ಪ್ರಭಾವ ಹೊಂದಿದ್ದರಿಂದ ಮೋಸಗಾರರು ಸಿಕ್ಕಿಬಿದ್ದಿದ್ದರು. ಪೊಲೀಸರು ದೂರದ ಮೂಲೆಯಲ್ಲಿ ಅಡಗಿದ್ದರೂ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಈ ರೀತಿಯ ಮೋಸದ ಪ್ರಕರಣಗಳಲ್ಲಿ ಹೆಚ್ಚಾಗಿ ಯಾವುದೇ ಪ್ರಕರಣ ಪತ್ತೆ ಆಗುವುದಿಲ್ಲ. ಪೊಲೀಸರು ಕೂಡ ಹೆಚ್ಚು ಮುತುವರ್ಜಿ ವಹಿಸ್ಕೊಂಡು ತನಿಖೆಯನ್ನೂ ನಡೆಸುವುದಿಲ್ಲ.
Shankar M Bidari, former DG-IGP of Karnataka, has got back the Rs 89,000 he lost to cyber fraud in the second week of October. He was getting ready to leave for Dubai and was about to withdraw money from an ATM when he got a call saying he had to update his PAN or his account would be blocked.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am