ಬ್ರೇಕಿಂಗ್ ನ್ಯೂಸ್
20-10-21 04:49 pm Giridhar Shetty, Mangaluru ಕ್ರೈಂ
ಮಂಗಳೂರು. ಅ.20: ಒಂದು ಕಾಲದಲ್ಲಿ ಅಂಡರ್ ವರ್ಲ್ಡ್ ಡಾನ್ ಗಳಾಗಿದ್ದ ರವಿ ಪೂಜಾರಿ ಮತ್ತು ಛೋಟಾ ರಾಜನ್ ಜೊತೆಗೆ ಸಹಚರನಾಗಿದ್ದು ಆಬಳಿಕ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಮುಂಬೈನಲ್ಲಿ ಬಾರ್ ಮಾಲಕರ ತಲೆಹಿಡಿದು ಹಫ್ತಾ ವಸೂಲಿ ಮಾಡುತ್ತಿದ್ದ ಮಂಗಳೂರು ಮೂಲದ ನಟೋರಿಯಸ್ ಗ್ಯಾಂಗ್ ಸ್ಟರ್ ಸುರೇಶ್ ಪೂಜಾರಿಯನ್ನು ಫಿಲಿಪೈನ್ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಪೂಜಾರಿ ವಿರುದ್ಧ ಮುಂಬೈ ಮತ್ತು ಬೆಂಗಳೂರಿನಲ್ಲಿ ಹಲವಾರು ಕೇಸುಗಳಿದ್ದು, ಹತ್ತು ವರ್ಷಗಳ ಹಿಂದೆಯೇ ಆತ ವಿದೇಶಕ್ಕೆ ಪರಾರಿಯಾಗಿ ಅಲ್ಲಿಯೇ ನೆಲೆಸಿದ್ದ. ಆನಂತರ, ಆತನ ಪತ್ತೆಗಾಗಿ ಮುಂಬೈ ಪೊಲೀಸರು ಇಂಟರ್ ಪೋಲ್ ನೋಟೀಸ್ ಹಾಕಿದ್ದರು. ಮಲೇಶ್ಯಾ, ಕೆನಡಾ, ಫಿಲಿಪೈನ್ಸ್, ದುಬೈ ಹೀಗೆ ಬೇರೆ ಬೇರೆ ಕಡೆಗೆ ತನ್ನ ನೆಲೆಯನ್ನು ಬದಲಾಯಿಸುತ್ತಿದ್ದ ಸುರೇಶ್ ಪೂಜಾರಿಯನ್ನು ಇದೀಗ ಫಿಲಿಪೈನ್ಸ್ ಪೊಲೀಸರು ಬಂಧಿಸಿದ್ದಾರೆ.
ಅ.15ರಂದು ಸುರೇಶ್ ಪೂಜಾರಿಯನ್ನು ಫಿಲಿಪೈನ್ಸ್ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಭಾರತೀಯ ದೂತಾವಾಸಕ್ಕೆ ಮಾಹಿತಿ ನೀಡಿದ್ದಾರೆ. ಸಿಬಿಐ ಮತ್ತು ಮುಂಬೈ ಪೊಲೀಸರು ಸುರೇಶ್ ಪೂಜಾರಿ ಬಂಧನಕ್ಕಾಗಿ ವಿದೇಶದಲ್ಲಿ ಬಲೆಬೀಸಿದ್ದರು. ಇದಕ್ಕಾಗಿ ಅಮೆರಿಕದ ಸ್ಪೈ ಏಜನ್ಸಿ ಎಫ್ ಬಿಐ ನೆರವನ್ನೂ ಕೋರಿತ್ತು. ಎಫ್ ಬಿಐ ಮಾಹಿತಿಯಂತೆ, ಫಿಲಿಪೈನ್ಸ್ ಪೊಲೀಸರು ಬಂಧಿಸಿದ್ದಾಗಿ ಹೇಳಲಾಗುತ್ತಿದೆ.

(ರವಿ ಪೂಜಾರಿ)

(ಛೋಟಾ ರಾಜನ್)
ಆರಂಭದಲ್ಲಿ ಛೋಟಾ ರಾಜನ್ ಜೊತೆಗೆ, ಆನಂತರ ರವಿ ಪೂಜಾರಿ ಕೈಮೇಲಾಗುತ್ತಿದ್ದಂತೆ ಆತನ ಜೊತೆಗೆ ಖಾಸಾ ಬಂಟನಾಗಿ ಕೆಲಸ ಮಾಡಿದ್ದ. ಹತ್ತು ವರ್ಷಗಳ ಹಿಂದೆ ರವಿ ಪೂಜಾರಿಯಿಂದಲೂ ಅಂತರ ಕಾಯ್ದುಕೊಂಡಿದ್ದ ಸುರೇಶ್, ತನ್ನದೇ ಹುಡುಗರನ್ನು ಕಟ್ಟಿಕೊಂಡು ಪ್ರತ್ಯೇಕ ಗ್ಯಾಂಗ್ ಮಾಡಿದ್ದ. ನವಿ ಮುಂಬೈ, ಮುಂಬೈ ಮತ್ತು ಥಾಣೆಯಲ್ಲಿನ ಬಾರ್ ಮಾಲಕರನ್ನು ಹಫ್ತಾಕ್ಕಾಗಿ ಫೋನ್ ಕರೆ ಮಾಡಿ ಬೆದರಿಸಲು ತೊಡಗಿದ್ದ. ಹಣ ಕೊಡದೇ ಇದ್ದರೆ, ಕೊಲೆ ಮಾಡುವ ಬೆದರಿಕೆ ಒಡ್ಡುತ್ತಿದ್ದ. ತನ್ನ ಸಹಚರರ ಮೂಲಕ ಬಾರ್ ಗಳಿಗೆ ಶೂಟ್ ಮಾಡಿ ಹೆದರಿಸಿ, ಹಣ ಕೀಳುತ್ತಿದ್ದ. 2015ರಲ್ಲಿ ಕೇಬಲ್ ಆಪರೇಟರ್ ಒಬ್ಬನನ್ನು ಕೊಲ್ಲಿಸಿದ್ದ ಪ್ರಕರಣದಲ್ಲಿ ಆತನ ಐವರು ಸಹಚರರನ್ನು ಪೊಲೀಸರು ಬಂಧಿಸಿದ್ದರು. 2018ರಲ್ಲಿ ಕಲ್ಯಾಣ್ ಭೀವಂಡಿಯ ಕೆ.ಎನ್. ಪಾರ್ಕ್ ಹೊಟೇಲಿಗೆ ತನ್ನ ಶಾರ್ಪ್ ಶೂಟರ್ ಮೂಲಕ ಗುಂಡು ಹಾರಿಸಿ, ಅಲ್ಲಿದ್ದ ರಿಸೆಪ್ಶನ್ ಒಬ್ಬನ ಕೊಲೆಗೆ ಕಾರಣವಾಗಿದ್ದ.
ಮುಂಬೈನ ಉಲ್ಲಾಸ್ ನಗರದ ನಿವಾಸಿಯಾಗಿದ್ದ ಸುರೇಶ್ ಪೂಜಾರಿಯ ಮೂಲ ಉಡುಪಿ ಜಿಲ್ಲೆಯ ಕುಂದಾಪುರ ಎನ್ನಲಾಗುತ್ತಿದೆ. 2007ರಲ್ಲಿ ಮುಂಬೈ ಬಿಟ್ಟು ವಿದೇಶಕ್ಕೆ ಹಾರಿದ್ದ ಸುರೇಶ್ ಪೂಜಾರಿ, ಅಲ್ಲಿಂದಲೇ ತನ್ನ ನೆಟ್ವರ್ಕ್ ಬೆಳೆಸಿಕೊಂಡಿದ್ದ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಂಡಿದ್ದಲ್ಲದೆ, ಅದೇ ಹೆಸರಲ್ಲಿ ನಕಲಿ ಪಾಸ್ಪೋರ್ಟನ್ನೂ ಮಾಡಿಸಿದ್ದ. ಸುರೇಶ್ ಪೂಜಾರಿ, ಸುರೇಶ್ ಪುರಿ, ಸತೀಶ್ ಪೈ ಹೀಗೆ ಹಲವು ಹೆಸರುಗಳಿಂದ ಕಾಣಿಸಿಕೊಂಡಿದ್ದ ಪೂಜಾರಿ, ಮುಂಬೈ ಕೇಂದ್ರೀಕರಿಸಿ ಗ್ಯಾಂಗ್ ಗಟ್ಟಿಗೊಳಿಸಲು ಪ್ಲಾನ್ ಹಾಕಿದ್ದ.

ಕಳೆದ ಬಾರಿ, 2020ರ ಫೆಬ್ರವರಿ ತಿಂಗಳಲ್ಲಿ ಆಫ್ರಿಕಾದ ಸೆನೆಗಲ್ ನಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿ, ಆನಂತರ ಬೆಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದರು. ರವಿ ಪೂಜಾರಿ ಸಿಕ್ಕಿಬಿದ್ದ ಬಳಿಕ ಮುಂಬೈ ಕೇಂದ್ರಿತ ಹಫ್ತಾ ವಸೂಲಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಕೆ ನಡೆಸುತ್ತಿದ್ದಾಗಲೇ ಈಗ ಸುರೇಶ್ ಪೂಜಾರಿ ಬಲೆಗೆ ಬಿದ್ದಿದ್ದಾನೆ. ಕೆಲವೇ ದಿನಗಳಲ್ಲಿ ಮುಂಬೈ ಪೊಲೀಸರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲಿದ್ದಾರೆ.
The Interpol police reportedly have arrested notorious gangster of Mangalore Suresh Poojary, who was an associate of underworld fugitives Chota Rajan and Ravi Poojary It is said that after being a confidante of Chota Rajan and Ravi Poojary, Suresh had formed his own gang. He has been named as the main accused in several cases registered in Bengaluru.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm