ಬ್ರೇಕಿಂಗ್ ನ್ಯೂಸ್
21-12-23 05:56 pm HK News Desk ಕ್ರೈಂ
ಕಲಬುರಗಿ, ಡಿ.21: ಬಾಲಕಿಯರ ಹಾಸ್ಟೆಲ್ನ ಬಾತ್ರೂಮಿನ ಪಕ್ಕ ಕಾಮುಕನೋರ್ವ ಸಿಸಿ ಕ್ಯಾಮರಾ ಅಳವಡಿಸಿದ್ದ ಪ್ರಕರಣ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ಹುಡುಗಿಯರು ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಕ್ಯಾಮರಾ ಕಂಡಿದ್ದಾರೆ. ಕೃತ್ಯ ಎಸಗಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಸಲೀಂ (34) ಎಂಬಾತನೇ ನೀಚ ಕೃತ್ಯ ಎಸಗಿದ ವ್ಯಕ್ತಿ. ಜೇವರ್ಗಿಯ ಶಾಂತಾ ಕಾಲೊನಿಯಲ್ಲಿನ ಖಾಸಗಿ ಕಟ್ಟಡದಲ್ಲಿ ನಡೆಸುತ್ತಿರುವ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಹಾಸ್ಟೆಲ್ಗೆ ಹೊಂದಿಕೊಂಡಂತಿರುವ ಪಕ್ಕದ ಮನೆಯಲ್ಲಿಯೇ ಆರೋಪಿ ವಾಸವಿದ್ದ. ಈತ ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಎಂದಿನಂತೆ ವಿದ್ಯಾರ್ಥಿನಿಯರು ಸ್ನಾನಕ್ಕೆ ಬಾತ್ ರೂಮಿಗೆ ಹೋದಾಗ ಕಿಟಕಿ ಹೊರಗೆ ಸಿಸಿ ಕ್ಯಾಮರಾ ಕಾಣ್ತಿದಂತೆ ಹೊರಗೆ ಬಂದಿದ್ದಾರೆ. ಅಲ್ಲದೆ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಅಷ್ಟರಲ್ಲಾಗಲೇ ಸ್ಥಳಕ್ಕೆ ಸ್ಥಳೀಯರು ಆಗಮಿಸಿದ್ದು,ಕಾಮುಕ ಎಸ್ಕೇಪ್ ಆಗಿದ್ದಾನೆ. ಬಳಿಕ ಪೊಲೀಸರು ಮತ್ತು ತಹಶಿಲ್ದಾರ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸಲೀಂ ಕುಟುಂಬಸ್ಥರನ್ನು ವಿಚಾರಣೆ ನಡೆಸಿ, ಆರೋಪಿಯನ್ನು ಸ್ಥಳಕ್ಕೆ ಕರೆಯಿಸಿ ಬಂಧಿಸಿದ್ದಾರೆ.
ಸ್ನಾನ ಮಾಡುವುದನ್ನು ಸೆರೆಹಿಡಿಯುವ ದುರುದ್ದೇಶದಿಂದ ಆರೋಪಿಯು ಆನ್ಲೈನ್ನಲ್ಲಿ ಸಿಸಿ ಕ್ಯಾಮರಾ ತರಿಸಿದ್ದಾನೆ. ತನ್ನ ಮನೆ ಛಾವಣಿಯಿಂದ ಹಾಸ್ಟೆಲ್ ಕಟ್ಟಡದ ಮೇಲೆ ಜಂಪ್ ಮಾಡಿ ಹಾಸ್ಟೆಲ್ಗೆ ಬಂದಿದ್ದ. ಬಳಿಕ ಉದ್ದದ ಒಂದು ಪೈಪ್ಗೆ ಸಿಸಿ ಕ್ಯಾಮರಾ ಅಳವಡಿಸಿ, ಅದನ್ನು ಬಾಲಕಿಯರ ಬಾತ್ ರೂಂ ಕಿಟಕಿಗೆ ಇಳಿಬಿಟ್ಟಿದ್ದ. ಬಾಲಕಿಯರು ಸ್ನಾನ ಮಾಡುವುದನ್ನು ವೈಫೈ ಮೂಲಕ ತನ್ನ ಮೊಬೈಲ್ನಲ್ಲಿ ವೀಕ್ಷಿಸಲು ಮುಂದಾಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಬಾಲಕಿಯರು ಬೆಳಿಗ್ಗೆ 6 ಗಂಟೆ ವೇಳೆಗೆ ಸ್ನಾನಕ್ಕೆ ಹೋದಾಗ ಕಿಟಕಿಯಲ್ಲಿ ಸಿಸಿ ಕ್ಯಾಮರಾ ಕಾಣಿಸಿದೆ. ವಿಕೃತ ಕಾಮಿ ಕಳೆದ ಎರಡ್ಮೂರು ದಿನಗಳಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್ಗೆ ಭೇಟಿ ನೀಡಿರುವ ಜೇವರ್ಗಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಬಾಲಕಿಯರಿಂದ ಮಾಹಿತಿ ಕಲೆ ಹಾಕಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಲೀಂನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಬಳಿ ಬಾಲಕಿಯರ ಖಾಸಗಿ ವಿಡಿಯೋ ಇವೆಯಾ ಎಂಬ ಕುರಿತಾಗಿಯೂ ವಿಚಾರಣೆ ಮುಂದುವರೆದಿದೆ.
Police have arrested a man on charges of placing a camera inside the bathroom of the post-matric minorities’ girls’ hostel here on Wednesday.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm