ಬ್ರೇಕಿಂಗ್ ನ್ಯೂಸ್
18-11-23 09:26 pm Udupi Correspondent ಕ್ರೈಂ
ಉಡುಪಿ, ನ.18: ನೇಜಾರಿನ ತಾಯಿ, ಮಕ್ಕಳ ಕೊಲೆಗಾರ ಪ್ರವೀಣ್ ಚೌಗುಲೆ(39) ತನ್ನ ಕೃತ್ಯಕ್ಕಾಗಿ ಸಾಕಷ್ಟು ಮುಂಜಾಗ್ರತೆ ವಹಿಸಿದ್ದು ಮತ್ತು ಕ್ರಿಮಿನಲ್ ಮೈಂಡ್ ಉಪಯೋಗಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಯಾವುದೇ ಸಾಕ್ಷ್ಯ ಅಥವಾ ಮುಖ ಪರಿಚಯವೂ ಸಿಸಿಟಿವಿಯಲ್ಲಿ ದಾಖಲಾಗಬಾರದೆಂದು ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ. ಅಷ್ಟೇ ಅಲ್ಲ, ಪ್ರಯಾಣದ ಉದ್ದಕ್ಕೂ ವಾಹನ ಬದಲಿಸುತ್ತಾ ಸಾಗಿದ್ದ. ಹಲವು ಬಾರಿ ಆಟೋ ಬದಲಿಸಿದ್ದಾನೆ, ಕೆಲವು ಕಡೆ ದಾರಿಯಲ್ಲಿ ಸಿಕ್ಕಿದ್ದ ಬಸ್, ಬೈಕ್ ಗಳನ್ನೂ ಪ್ರಯಾಣಕ್ಕೆ ಬಳಸಿದ್ದಾನೆ.
ಅದೇ ರೀತಿ ಬ್ಯಾಗ್ ಮತ್ತು ಬ್ಯಾಗ್ ಒಳಗೆ ಹರಿತವಾದ ಚೂರಿ ಹಾಗೂ ಬಟ್ಟೆಗಳನ್ನು ಇಟ್ಟುಕೊಂಡಿದ್ದನು. ಏರ್ ಇಂಡಿಯಾದಲ್ಲಿ ಉದ್ಯೋಗಿ ಆಗೋದಕ್ಕೂ ಮುನ್ನ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಕೆಲ ತಿಂಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಪ್ರವೀಣ್ ಕೃತ್ಯಕ್ಕಾಗಿ ಕ್ರಿಮಿನಲ್ ಮೈಂಡ್ ಬಳಸಿಕೊಂಡಿದ್ದು ತನಿಖೆಯಲ್ಲಿ ಪತ್ತೆಯಾಗಿದೆ. ನ.12ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಆರೋಪಿ ಪ್ರವೀಣ್ ಚೌಗುಲೆ, ಮಂಗಳೂರಿನ ಮನೆಯಿಂದ ತನ್ನ ಕಾರಿನಲ್ಲೇ ಹೊರಟಿದ್ದರೂ ಅದನ್ನು ಹೆಜಮಾಡಿ ಟೋಲ್ ಗೇಟ್ ದಾಟೋದಕ್ಕೂ ಮೊದಲೇ ಪಾರ್ಕ್ ಮಾಡಿದ್ದ. ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗುತ್ತೆ ಮತ್ತು ತನ್ನ ಜಾಡನ್ನು ಪೊಲೀಸರು ಪತ್ತೆ ಮಾಡಬಾರದು ಎನ್ನುವ ನೆಲೆಯಲ್ಲಿ ಹೀಗೆ ಮಾಡಿದ್ದಾನೆ.
ತಾನು ಉಡುಪಿಗೆ ಬಂದಿರುವ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಕಾರನ್ನು ಹೆಜಮಾಡಿ ಟೋಲ್ಗೇಟ್ಗಿಂತ ಮೊದಲೇ ರಸ್ತೆ ಬದಿ ಪಾರ್ಕ್ ಮಾಡಿದ್ದ. ಅಲ್ಲಿಂದ ಬೈಕ್, ಬಸ್ ಹಿಡಿದು ಉಡುಪಿಗೆ ಆಗಮಿಸಿದ್ದ ಪ್ರವೀಣ್, ಸಂತೆಕಟ್ಟೆಯಿಂದ ಆಟೊ ರಿಕ್ಷಾದಲ್ಲಿ ತೆರಳಿದ್ದ. ಈ ವೇಳೆ, ಮುಖಕ್ಕೆ ತಿಳಿ ನೀಲಿ ಬಣ್ಣದ ಮಾಸ್ಕ್ ಹಾಕ್ಕೊಂಡೇ ಇದ್ದ. ನೇಜಾರಿನ ಮನೆಗೆ ನುಗ್ಗಿ ನಾಲ್ವರನ್ನು ಕಗ್ಗೊಲೆ ಮಾಡಿದ್ದು ಅಲ್ಲಿಂದ ಏನೂ ಆಗಿಯೇ ಇಲ್ಲವೆಂಬಂತೆ ಹಿಂತಿರುಗಿದ್ದ. ಬಳಿಕ ದಾರಿ ಹೋಕರ ಬೈಕಿನಲ್ಲಿ ಬಂದು ಸಂತೆಕಟ್ಟೆಯಲ್ಲಿ ಬೇರೊಂದು ರಿಕ್ಷಾ ಹಿಡಿದಿದ್ದ. ಉಡುಪಿ ಕರಾವಳಿ ಬೈಪಾಸ್ ವರೆಗೆ ಆ ರಿಕ್ಷಾದಲ್ಲಿ ತೆರಳಿ, ಅಲ್ಲಿಂದ ಬೈಕ್ ಏರಿ ಕಿನ್ನಿಮೂಲ್ಕಿಗೆ ಬಂದಿದ್ದ. ಅಲ್ಲಿಂದ ಮುಂದಕ್ಕೆ ನಡೆದುಕೊಂಡು ಹೋಗಿ ಬಸ್ ಹತ್ತಿದ್ದ. ಹೆಜಮಾಡಿ ಟೋಲ್ ಗೇಟ್ ಸಮೀಪ ಬಸ್ನಿಂದ ಇಳಿದು ಅಲ್ಲಿಂದ ತನ್ನ ಕಾರಿನಲ್ಲಿ ನೇರವಾಗಿ ತನ್ನ ಸುರತ್ಕಲ್ ನಲ್ಲಿರುವ ಮನೆಗೆ ಹೋಗಿದ್ದ ಎನ್ನಲಾಗಿದೆ.
ಗಾಯಕ್ಕೆ ಚಿಕಿತ್ಸೆ, ಪಶ್ಚಾತ್ತಾಪ ಇಲ್ಲದೆ ಸುತ್ತಾಟ
ಕೃತ್ಯದ ಬಳಿಕ ಮನೆಗೆ ಬಂದಿದ್ದ ಆರೋಪಿ ಪ್ರವೀಣ್, ತನ್ನ ಬಟ್ಟೆಯಲ್ಲಾಗಿದ್ದ ರಕ್ತದ ಕಲೆಗಳನ್ನು ತೊಳೆದಿದ್ದ. 10 ನಿಮಿಷ ಕಾಲ ಮನೆಯಲ್ಲಿದ್ದು, ಕೃತ್ಯದ ವೇಳೆ ಕೈ ಬೆರಳಿಗೆ ಆಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದ ಎನ್ನಲಾಗಿದೆ. ಬಳಿಕ ಮನೆಗೆ ಬಂದು ತನ್ನ ಪತ್ನಿ ಮತ್ತು ಮಕ್ಕಳನ್ನು ಕಾರಿನಲ್ಲಿ ಹೊರಗೆ ವಿಹಾರಕ್ಕೆ ಕರೆದುಕೊಂಡು ಹೋಗಿ, ಸುತ್ತಾಡಿ ಸಂಜೆ ವೇಳೆಗೆ ಮನೆಗೆ ಬಂದಿದ್ದ. ನಾಲ್ಕು ಮಂದಿಯನ್ನು ಭೀಕರವಾಗಿ ಕೊಲೆಗೈದಿದ್ದರೂ ಯಾವುದೇ ಪಶ್ಚತ್ತಾಪ ಇಲ್ಲದೆ ಮಾಮೂಲಿಯಂತೆ ಮನೆಯವರೊಂದಿಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾರಿನಲ್ಲಿ ಬೆಳಗಾವಿ ತೆರಳಿ ದೀಪಾವಳಿ ಆಚರಣೆ
ಮರುದಿನ ನ.13ರಂದು ಬೆಳಗ್ಗೆ ಹಬ್ಬದ ಪ್ರಯುಕ್ತ ಎರಡು ದಿನ ರಜೆ ಇದೆ ಎಂದು ಹೇಳಿ ಪತ್ನಿ, ಮಕ್ಕಳೊಂದಿಗೆ ತನ್ನ ಕಾರಿನಲ್ಲಿಯೇ ಬೆಳಗಾವಿಗೆ ಹೊರಟಿದ್ದ. ಕುಡಚಿಯಲ್ಲಿ ತನ್ನ ಸಂಬಂಧಿ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಮನೆಯಲ್ಲಿ ದೀಪಾವಳಿಯನ್ನೂ ಆಚರಿಸಿದ್ದ. ಇತ್ತ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಏರ್ಪೋರ್ಟ್ ನಲ್ಲಿ ನಾಪತ್ತೆಯಾಗಿದ್ದರಿಂದ ಈತನೇ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಅದೇ ಸಮಯಕ್ಕೆ ಕುಡಚಿಯಲ್ಲಿದ್ದಾಗಲೇ ಮೊಬೈಲ್ ಸ್ವಿಚ್ ಆನ್ ಮಾಡಿದ್ದು ಅಲರ್ಟ್ ಆಗಿದ್ದ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದರು.
ಕೃತ್ಯಕ್ಕೆ ಬಳಸಿದ್ದ ಚೂರಿಗಾಗಿ ತೀವ್ರ ಶೋಧ
ಆರೋಪಿ ಕೊಲೆಗೆ ಬಳಸಿದ ಚೂರಿ ಪತ್ತೆಯಾಗಿಲ್ಲ. ಇದಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕೊಲೆ ಬಳಿಕ ಚೂರಿಯನ್ನು ತನ್ನ ಬ್ಯಾಗ್ ನಲ್ಲಿ ಹಾಕಿದ್ದ ಆರೋಪಿ, ಅದನ್ನು ಬೆಳಗಾವಿಗೆ ತೆರಳುತ್ತಿದ್ದಾಗ ಹೆಜಮಾಡಿಯಿಂದ ಮುಂದೆ ಸೇತುವೆಯಿಂದ ಕೆಳಗೆ ಎಸದಿದ್ದಾನೆ ಎಂದು ಒಮ್ಮೆ ಹೇಳಿಕೆ ನೀಡಿದ್ದ. ಆನಂತರ ಮನೆ ಸಮೀಪವೇ ಎಸೆದು ಹೋಗಿದ್ದಾಗಿ ತಿಳಿಸಿದ್ದ ಎನ್ನಲಾಗಿದೆ. ಆದರೆ ಪೊಲೀಸರು ಶೋಧ ನಡೆಸಿದ ವೇಳೆ ಚೂರಿ ಪತ್ತೆಯಾಗಿಲ್ಲ.
ರಕ್ತದ ಕಲೆಗಳಿದ್ದ ಬಟ್ಟೆಯನ್ನೇ ಬದಲಿಸಿರಲಿಲ್ಲ
ನಾಲ್ಕು ಮಂದಿಯನ್ನು ಕೊಲೆಗೈದ ಬಳಿಕ ಆರೋಪಿ ತನ್ನ ಬಟ್ಟೆಯನ್ನು ಬದಲಾಯಿಸಿದ್ದಾನೆ ಎನ್ನಲಾಗಿತ್ತು. ಆದರೆ ತನಿಖೆಯ ವೇಳೆ ರಕ್ತ ಸಿಕ್ತವಾಗಿದ್ದ ಬಟ್ಟೆಯನ್ನು ಬದಲಾಯಿಸಿಯೇ ಇರಲಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ನಾಲ್ವರ ಹತ್ಯೆಯಿಂದ ಇಡೀ ಮನೆ ರಕ್ತಸಿಕ್ತವಾಗಿತ್ತು. ನಾಲ್ವರು ಕೂಡ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆದರೂ ಆತನ ಬಟ್ಟೆಗೆ ಅಲ್ಪಸ್ವಲ್ಪ ಮಾತ್ರವೇ ರಕ್ತದ ಕಲೆಗಳು ಅಂಟಿದ್ದವು. ಇದನ್ನು ಆತ ಬೈಕು, ರಿಕ್ಷಾ, ಬಸ್ನಲ್ಲಿ ಹೋಗುವಾಗ ತನ್ನ ಕೈಯಲ್ಲಿದ್ದ ಬ್ಯಾಗ್ನಿಂದ ಮರೆಯಾಗಿಸಿದ್ದು ರಕ್ತದ ಕಲೆಗಳು ಬೇರೆಯವರಿಗೆ ಕಾಣದಂತೆ ನೋಡಿಕೊಂಡಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಲ್ಸಂಕ ರಿಕ್ಷಾ ಚಾಲಕ, ಬಟ್ಟೆಯಲ್ಲಿ ಗುರುತು ಹಿಡಿದಿದ್ದೆ ಎಂದು ಹೇಳಿಕೆ ನೀಡಿದ್ದರು.
ಮಂಗಳೂರಿನಲ್ಲಿ ಮಹಜರು ಪ್ರಕ್ರಿಯೆ
ಬಂಧಿತ ಆರೋಪಿ ಪ್ರವೀಣ್ ಚೌಗುಲೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೃತ್ಯದ ಬಗ್ಗೆ ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ. ನೇಜಾರಿನ ಮನೆಗೆ ಹಾಗೂ ಮಂಗಳೂರಿನ ಆತನ ಮನೆಗೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಯನ್ನು ಮಂಗಳೂರಿಗೆ ಕರೆದೊಯ್ದು ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ. ಮುಂದೆ ಹೆಚ್ಚಿನ ತನಿಖೆಗಾಗಿ ಆತನನ್ನು ಬೆಳಗಾವಿ, ಮಹಾರಾಷ್ಟ್ರಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
Udupi Murder, Accused praveen pre planned murder, parked his car at Hejamadi toll. He travelled all the way to Udupi by bike and bus. He got his treatment done in private hospital after his fingers were wounded.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm