ಬ್ರೇಕಿಂಗ್ ನ್ಯೂಸ್
07-11-23 10:50 pm Mangalore Correspondent ಕ್ರೈಂ
ಪುತ್ತೂರು, ನ.7: ಯಾರೇ ಆದ್ರೂ ರೌಡಿಸಂ ಲೋಕಕ್ಕೆ ಕಾಲಿಟ್ಟ ಬಳಿಕ ಮುಯ್ಯಿಗೆ ಮುಯ್ಯಿ ಅನ್ನುವುದು ಕಟ್ಟಿಟ್ಟ ಬುತ್ತಿ. ಆದರೆ ಈ ಹುಡುಗನ ಪಾಲಿಗೆ ಮುಯ್ಯಿ ತೀರಿಸಲು ಜೊತೆಗಿದ್ದವರೇ ಕಾಲು ಕೆರೆದುಕೊಂಡಿದ್ದರು. ಅದಕ್ಕೆ ತುಪ್ಪ ಸುರಿದವರು ಮಾತ್ರ ಹಲವರು. ನಿನ್ನೆ ನಡುರಾತ್ರಿಯಲ್ಲಿ ಕೊಲೆಯಾದ ಅಕ್ಷಯ್ ಕಲ್ಲೇಗ, ಹುಲಿ ತಂಡ ಕಟ್ಟಿಕೊಂಡೇ ಅಲ್ಪ ಅವಧಿಯ್ಲಲೇ ಇಡೀ ಜಿಲ್ಲೆಯಲ್ಲಿ ಮಿಂಚು ಹರಿಸಿದ್ದ ಯುವಕ. ಕೆಲವೇ ವರ್ಷಗಳಲ್ಲಿ ಹುಲಿ ತಂಡ ಇಟ್ಕೊಂಡು ತಾನೇ ಹುಲಿ ಎಂಬಂತೆ ಗರ್ಜಿಸತೊಡಗಿದ್ದ. ಬಿಸಿರಕ್ತದ ಯುವಕನ ಈ ರೀತಿಯ ವರ್ತನೆಯೇ ಈಗ ಜೀವಕ್ಕೆ ಮುಳುವಾಗಿದೆ ಅನ್ನುವ ಮಾತು ಪುತ್ತೂರಿನಲ್ಲಿ ಕೇಳಿಬರುತ್ತಿದೆ.
ಮೇಲ್ನೋಟಕ್ಕೆ ಎರಡು ಸಾವಿರ ರೂಪಾಯಿ ಕಾರಣಕ್ಕೆ ಕೊಲೆ ಅಂತ ಪೊಲೀಸರೇನೊ ಹೇಳುತ್ತಿದ್ದಾರೆ. ಆದರೆ ಎರಡು ಸಾವಿರಕ್ಕೆ ಕೊಲೆಯಾಗುತ್ತೆ ಅನ್ನೋದನ್ನು ನಂಬಲು ಪುತ್ತೂರಿನ ಮಂದಿಯೇ ತಯಾರಿಲ್ಲ. ಯಾಕಂದ್ರೆ, ಇದೇನೂ ಬಿಹಾರ ರೀತಿಯ ಗೂಂಡಾ ರಾಜ್ಯವಂತೂ ಅಲ್ಲ. ಎರಡು ಸಾವಿರ ಜುಜುಬಿ ವಿಚಾರಕ್ಕೆ ಜಗಳ ಮಾಡುವ ಹುಡುಗರೂ ಪುತ್ತೂರಿನವರಲ್ಲ. ಇದರ ಹಿಂದೇನೋ ಇರಬೇಕು ಎಂದು ಕೆದಕಿ ನೋಡಿದರೆ, ಹುಲಿ ತಂಡಗಳ ವೈರತ್ವ, ತಾನು ನಡೆದಿದ್ದೇ ದಾರಿ ಎನ್ನುವಂತಿದ್ದ ಅಕ್ಷಯ್ ಧೋರಣೆಯಿಂದಲೇ ವೈರಿಗಳು ಹುಟ್ಟಿಕೊಂಡಿದ್ದು ತಿಳಿದುಬರುತ್ತವೆ. ಈಗ ಅಕ್ಷಯ್ ನನ್ನು ಕೊಲೆ ಮಾಡಿರುವ ನಾಲ್ಕು ಮಂದಿಯೂ ಪೊಲೀಸರಿಗೆ ಶರಣಾಗಿದ್ದಾರೆ. ಎಲ್ಲರೂ ಗಾಂಜಾ ಪಾರ್ಟಿಗಳು. ಗಾಂಜಾ ಮತ್ತಿನಲ್ಲಿಯೇ ಅಷ್ಟೊಂದು ಭೀಕರವಾಗಿ ಕಡಿದು ಕೊಲೆ ಮಾಡಿದ್ದಾರೆ ಅನ್ನುವುದಕ್ಕೆ ವೈದ್ಯರ ಸರ್ಟಿಫಿಕೇಟ್ ಬೇಕಿಲ್ಲ.
ಹಾಗೆ ನೋಡಿದರೆ, ಅಕ್ಷಯ್ ಕಲ್ಲೇಗ ಕೂಡ ಗಾಂಜಾ ಪಾರ್ಟಿಯೇ ಆಗಿದ್ದವನು. ವಿವೇಕಾನಂದ ಕಾಲೇಜು ಕ್ಯಾಂಪಸನ್ನೇ ಗಾಂಜಾ ಅಡ್ಡೆ ಮಾಡಿಕೊಂಡಿದ್ದು ಅಕ್ಷಯ್ ಮತ್ತು ಆತನ ಗೆಳೆಯರು. ಈತನ ವ್ಯವಹಾರಕ್ಕೆಲ್ಲ ಕೃಪಾಪೋಷಕನಂತಿರುವುದು ಪುತ್ತೂರಿನಲ್ಲಿ ಮಾಧ್ಯಮವನ್ನು ಪೋಸು ಮಾಡಿಕೊಂಡಿರುವ ಉಪ್ಪಿನಂಗಡಿ ಮೂಲದ ವ್ಯಕ್ತಿಯಂತೆ. ನಿನ್ನೆ ಸಂಜೆ ಅಕ್ಷಯ್ ಕಲ್ಲೇಗನ ಗೆಳೆಯ ಓಡಿಸುತ್ತಿದ್ದ ಬೈಕ್ ಮತ್ತು ಇನ್ನೊಂದು ಬೈಕ್ ಪರಸ್ಪರ ಡಿಕ್ಕಿಯಾಗಿತ್ತು. ಈ ಬಗ್ಗೆ ಆಸ್ಪತ್ರೆ ಖರ್ಚು ಎರಡು ಸಾವಿರ ಕೊಡಬೇಕೆಂದು ಅಕ್ಷಯ್, ಇನ್ನೊಂದು ಬೈಕಿನಲ್ಲಿದ್ದವರಿಗೆ ತಾಕೀತು ಮಾಡಿದ್ದನಂತೆ. ಇದೇ ವಿಚಾರದಲ್ಲಿ ಎರಡೂ ಕಡೆಯವರು ಫೋನ್ ಮಾಡಿ ಮಾತಿಗೆ ಮಾತು ಆಡಿಕೊಂಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಚೇತು ಮತ್ತು ತಂಡದವರು ಅಕ್ಷಯ್ ನನ್ನು ಮಾತನಾಡಲೆಂದು ನೆಹರು ನಗರಕ್ಕೆ ಕರೆಸಿದ್ದರು. ಅಕ್ಷಯ್ ಮತ್ತು ಆತನ ಗೆಳೆಯ ಬೈಕಿನಲ್ಲಿ ತೆರಳಿದ್ದರೆ, ವಿರೋಧಿ ಗ್ಯಾಂಗಿನ ಚೇತನ್, ಮನೀಶ್, ಮಂಜ ಮತ್ತು ಕೇಶವ ಕಾರಿನಲ್ಲಿ ಬಂದಿದ್ದರು. ತಲವಾರು ಹಿಡಿದುಕೊಂಡೇ ಬಂದಿದ್ದ ಹಂತಕರು ಕಾರಿನಿಂದ ಇಳಿಯುತ್ತಲೇ ಅಕ್ಷಯ್ ಮೇಲೆರಗಿದ್ದಾರೆ. ಅಷ್ಟೇ ಅಲ್ಲ, ಬೆನ್ನಟ್ಟುತ್ತಲೇ ಅತಿ ಭೀಕರವಾಗಿ ಕೊಲೆ ಮಾಡಿದ್ದಾರೆ. ವೈದ್ಯರ ಮಾಹಿತಿ ಪ್ರಕಾರ, ಕೊಲೆಯಾದ ಅಕ್ಷಯ್ ದೇಹದ ಮೇಲೆ 58 ಗಾಯಗಳಿವೆಯಂತೆ.
ಅಕ್ಷಯ್ ಕಲ್ಲೇಗ ಕಳೆದ ಆರು ವರ್ಷಗಳಿಂದ ಕಲ್ಲೇಗ ಟೈಗರ್ಸ್ ಎನ್ನುವ ಹೆಸರಲ್ಲಿ ಹುಲಿ ತಂಡವನ್ನು ಕಟ್ಟಿಕೊಂಡಿದ್ದು, ಎರಡು ವರ್ಷಗಳಿಂದ ಮುಖ್ಯಸ್ಥನಾಗಿ ಬದಲಾಗಿದ್ದ. ಹುಲಿ ತಂಡದ ಮೂಲಕವೇ ಇಡೀ ಜಿಲ್ಲೆಯಲ್ಲಿ ತನ್ನ ಖದರನ್ನೂ ಹೆಚ್ಚಿಸಿಕೊಂಡಿದ್ದ. ಅಷ್ಟೇ ಅಲ್ಲ, ತನ್ನ ತಂಡ ಹೋದಲ್ಲಿ ತಮಗೇ ಬಹುಮಾನ ಸಿಗಬೇಕು ಅನ್ನುವಷ್ಟರ ಮಟ್ಟಿಗೆ ಈತನ ಅಹಂಕಾರ ಇತ್ತಂತೆ. ಬಹುಮಾನ ಸಿಗದೇ ಇದ್ದಲ್ಲಿ ಅಲ್ಲಿ ಗಲಾಟೆ ಮಾಡಿ ಬರುವುದು ಮಾಮೂಲಾಗಿತ್ತು. ಈ ಬಾರಿಯೂ ಪುತ್ತೂರಿನಲ್ಲಿ ಮಾಜಿ ಶಾಸಕಿ ಶುಕಂತಳಾ ಶೆಟ್ಟಿ ಆಯೋಜಿಸಿದ್ದ ಪಿಲಿ ಗೊಬ್ಬು ಹುಲಿ ಕುಣಿತ ಸ್ಪರ್ಧಾ ಕಣದಲ್ಲಿ ಕಲ್ಲೇಗ ತಂಡಕ್ಕೆ ಮೂರನೇ ಸ್ಥಾನ ಸಿಕ್ಕಿದ್ದಕ್ಕೆ, ಹುಲಿಯ ತಲೆಯನ್ನೇ ನೆಲಕ್ಕೆ ಕೆಡವಿದ್ನಂತೆ. ಹುಲಿ ಕುಣಿತದಲ್ಲಿ ಹುಲಿಯ ತಲೆಗೆ ವಿಶೇಷ ಮರ್ಯಾದೆಯಿದ್ದು, ಅದು ದೇವಿಯದ್ದೇ ಪ್ರತಿರೂಪ ಎಂದು ನಂಬುತ್ತಾರೆ. ಅದನ್ನು ನೆಲಕ್ಕೆ ಕೆಡವಿದ್ದು ದೊಡ್ಡ ಶಾಪ ಎಂದು ಪುತ್ತೂರಿನಲ್ಲಿ ಜನರು ಮಾತನಾಡುತ್ತಾರೆ.
ಒಂದು ವರ್ಷದ ಹಿಂದೆ ಕಲ್ಲೇಗ ಹುಲಿ ತಂಡ ಬಿಗ್ ಬಾಸ್ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದು ಈ ತಂಡಕ್ಕೆ ರಾಜ್ಯ ಮಟ್ಟದಲ್ಲಿ ಪ್ರಚಾರ ಸಿಕ್ಕಂತಾಗಿತ್ತು. ಆದರೆ, ಈ ಹುಲಿ ತಂಡದ ಪ್ರದರ್ಶನ ಸಿಗಲು ಕಾರಣವಾಗಿದ್ದು ಮಂಗಳೂರಿನ ಬಿರುವೆರ್ ಕುಡ್ಲ ತಂಡ ಎನ್ನುವ ತಗಾದೆಯೂ ಉಂಟಾಗಿತ್ತು. ಆನಂತರ, ಅಕ್ಷಯ್ ಕಲ್ಲೇಗ ವಿಡಿಯೋ ಮಾಡಿ, ಬಿರುವೆರ್ ಕುಡ್ಲ ತಂಡಕ್ಕೂ ತಮಗೂ ಸಂಪರ್ಕ ಇಲ್ಲ, ನಿತಿನ್ ಎನ್ನುವಾತ ನಮ್ಮ ನಡುವೆ ತಿಕ್ಕಾಟ ಮಾಡಿಸಿದ್ದಾನೆ ಎಂದು ಹೇಳಿದ್ದ. ಈ ವಿಚಾರ ಜಾಲತಾಣದಲ್ಲಿ ಎರಡು ತಂಡಗಳ ನಡುವೆ ವೈರತ್ವಕ್ಕೂ ಕಾರಣವಾಗಿತ್ತು.
ಇದಕ್ಕೂ ಮೊದಲೇ ಕಲ್ಲೇಗ ಟೈಗರ್ಸ್ ತಂಡ ವಿಭಜನೆಗೊಂಡಿತ್ತು. ಮೊದಲು ಇವರ ಜೊತೆಯಲ್ಲೇ ಇದ್ದ ಒಂದಷ್ಟು ಯುವಕರು ಅಕ್ಷಯ್ ನನ್ನು ಬಿಟ್ಟು ಕಲ್ಲೇಗದಲ್ಲಿಯೇ ಮತ್ತೊಂದು ತಂಡ ಕಟ್ಟಿಕೊಂಡಿದ್ದರು. ಈಗ ಅಕ್ಷಯ್ ನನ್ನು ಕೊಲೆ ಮಾಡಿರುವ ಚೇತು, ಮನೀಶ್ ಒಂದು ಕಾಲದಲ್ಲಿ ಜೊತೆಗಿದ್ದು ಈಗ ವಿರೋಧಿ ತಂಡದಲ್ಲಿದ್ದವರು. ಧನುಷ್ ನೇತೃತ್ವದ ಈ ತಂಡಕ್ಕೆ ಮಂಗಳೂರಿನ ಪ್ರಭಾವಿಗಳ ಗುಂಪು ಬೆಂಬಲ ನೀಡಿತ್ತು. ಮೇಲ್ನೋಟಕ್ಕೆ ನಿನ್ನೆ ರಾತ್ರಿ ಕಾಲು ಕೆರೆದು ಜಗಳಕ್ಕೆ ಬಂದಿದ್ದ ಅಕ್ಷಯ್ ನನ್ನು ಮುಗಿಸಲು ಮೇಲಿನಿಂದಲೇ ಹುಕುಂ ಬಂದಿತ್ತು ಎನ್ನಲಾಗಿದೆ. ಯಾವಾಗಲೂ ಅಕ್ಷಯ್ ಜೊತೆಗಿರುತ್ತಿದ್ದ ಇಬ್ರಾಹಿಂ ಕಲ್ಲೇಗ 11 ಗಂಟೆಗೆ ಎದುರಾಳಿ ತಂಡಕ್ಕೆ ಫೋನಾಯಿಸಿ, ಅಕ್ಷಯ್ ಗೆ ಏನೂ ಮಾಡಬೇಡಿ, ಸ್ಥಳಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದ. ಅಷ್ಟರಲ್ಲೇ ಅಕ್ಷಯ್ ಮತ್ತು ಆತನ ಜೊತೆಗಿದ್ದ ಅಲ್ತಾಫ್ ಮೇಲೆ ಚೇತು ಮತ್ತು ತಂಡದವರು ತಲವಾರು ಬೀಸಿದ್ದಾರೆ. ಅಲ್ತಾಫ್ ಕೈಗೆ ತಲವಾರು ಏಟು ಬಿದ್ದಿದೆ ಎನ್ನಲಾಗುತ್ತಿದ್ದು, ಆತ ಎಲ್ಲಿ ದಾಖಲಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿಲ್ಲ.
ಇಷ್ಟಕ್ಕೂ ಚೇತು ತಂಡದಲ್ಲಿದ್ದ ಕೇಶವ್ ಎನ್ನುವಾತ ಕಾಂಗ್ರೆಸಿನ ಸಕ್ರಿಯ ಕಾರ್ಯಕರ್ತ. ಎಸ್ಸಿ ಮೋರ್ಚಾದಲ್ಲಿದ್ದು ಪುತ್ತೂರು ತಾಲೂಕಿನ ಪ್ರಮುಖನಾಗಿ ಗುರುತಿಸಿಕೊಂಡಿದ್ದ. ಇತ್ತ ಅಕ್ಷಯ್ ಕಲ್ಲೇಗ ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡಿರಲಿಲ್ಲ. ಆದರೆ ಇವರೆಲ್ಲ ಗಾಂಜಾ ದಾಸ್ಯದಲ್ಲಿ ಸಿಲುಕಿಕೊಂಡವರಾಗಿದ್ದು, ಅದೇ ಅಮಲಿನಲ್ಲಿ ರಕ್ತ ಹರಿಸಿದ್ದಾರೆ ಅನ್ನುವ ಮಾತನ್ನು ಪುತ್ತೂರಿನ ಜನ ಹೇಳುತ್ತಾರೆ. ಪೊಲೀಸರು ಮಾತ್ರ ಎರಡು ಸಾವಿರಕ್ಕೆ ಹೆಣ ಬಿತ್ತು ಎಂದು ಕೇಸ್ ಕ್ಲೋಸ್ ಮಾಡಲು ಮುಂದಾಗಿದ್ದಾರೆ. ಅಕ್ಷಯ್ ಕೊಲೆ ಅಷ್ಟಕ್ಕೇ ಆಯ್ತಾ ಅನ್ನೋ ಒಳ ಹೊರಗನ್ನು ಕೆದಕಲು ಮುಂದಾಗಿರುವಂತಿಲ್ಲ.
Puttur Akshay Kallega Murder, what was the reason behind murder, crime report. Akshay Kallega (24), the chief of the Kallega Tigers team, was brutally hacked to death by a group of miscreants in Nehrunagar on Monday, November 6. The local police have arrested three men for the murder of a young man who was a member of the Kallega tiger dance group, Akshay Kallega.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm