ಬ್ರೇಕಿಂಗ್ ನ್ಯೂಸ್
05-11-23 10:02 pm Mangalore Correspondent ಕ್ರೈಂ
ಮಂಗಳೂರು, ನ.5: ಮಟನ್ ಅಂಗಡಿಯ ಮುಂದೆ ಇಟ್ಟಿದ್ದ ಕಬ್ಬಿಣದ ರಾಡ್ ಒಂದನ್ನು ಕಳವು ಮಾಡಿದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ರಾಮಸೇನೆ ಸಂಘಟನೆಯ ಕಾರ್ಯಕರ್ತನೊಬ್ಬ ಬೀಯರ್ ಬಾಟಲಿಯಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ಕುಲಶೇಖರದಲ್ಲಿ ನಡೆದಿದೆ.
ಕುಲಶೇಖರದ ಮಟನ್ ಕಾರ್ನರ್ ಎಂಬ ಅಂಗಡಿಯಲ್ಲಿ ಕೆಲಸಕ್ಕಿರುವ ಮೆಹರೂಫ್ ಎಂಬಾತ ಹಲ್ಲೆಗೀಡಾದ ವ್ಯಕ್ತಿ. ನ.4ರಂದು ಮಧ್ಯಾಹ್ನ ವೇಳೆಗೆ ಕಬ್ಬಿಣದ ರಾಡ್ ಕಳವಾದ ಬಗ್ಗೆ ಮೆಹರೂಫ್ ಹತ್ತಿರದ ಚಿಕನ್ ಸ್ಟಾಲ್ ಅಂಗಡಿಯ ಗುರುರಾಜ್ ಬಳಿ ಕೇಳಿದ್ದರು. ರಾಡನ್ನು ಗುಜರಿ ಹೆಕ್ಕುವ ಬಾಬು ಒಯ್ದಿದ್ದಾಗಿ ಗುರುರಾಜ್ ಹೇಳಿದ್ದರು. ಅದೇ ವೇಳೆಗೆ, ಬಾಬು ಸ್ಥಳಕ್ಕೆ ಬಂದಿದ್ದು ಅವರ ಬಳಿಯೂ ಕಬ್ಬಿಣದ ರಾಡ್ ಒಯ್ದಿದ್ದೀಯಾ ಎಂದು ಮೆಹರೂಫ್ ಕೇಳಿದ್ದಾರೆ.
ಇದೇ ಸಂದರ್ಭದಲ್ಲಿ ಎ.ಎಸ್ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುವ ದೀಪಕ್ ಮೂಡುಶೆಡ್ಡೆ ಎಂಬಾತ ಪ್ರಶ್ನೆ ಮಾಡಿದ್ದು, ನೀನು ಅವನಲ್ಲಿ ಏನು ಕೇಳ್ತೀಯಾ.. ನೀನು ದೊಡ್ಡ ಜನವಾ ಎಂದು ಹೇಳಿ ಮುಂದೆ ಬಂದಿದ್ದು ಅಲ್ಲಿಯೇ ಇದ್ದ ಖಾಲಿ ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ಮೆಹರೂಫ್ ತಲೆಗೆ ಗಾಯವಾಗಿದ್ದು ಕಂಕನಾಡಿ ಕೊಲಾಸೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಪಿ ದೀಪಕ್ ರಾಮಸೇನೆ ಸಂಘಟನೆ ಕಾರ್ಯಕರ್ತನಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಹಲವು ಠಾಣೆಗಳಲ್ಲಿ ಕೇಸು ದಾಖಲಾಗಿವೆ.
Mangalore Fight between mutton and chicken stall, Ram sene activist assaults man with beer bottle. The arrested has been identifed as Deepak Moodshede.
13-08-26 07:14 pm
HK News Staffer
ಐಷಾರಾಮಿ ಹೊಟೇಲ್ ಬಳಿಕ ಸರ್ಕಾರಿ ಕಚೇರಿಗಳ ಕ್ಯಾಂಟೀನ್...
13-08-26 02:22 pm
ಸಚಿವ ಸ್ಥಾನ ಕೈತಪ್ಪಿದ ಮಂಕಾಳ ವೈದ್ಯಗೆ ವಿಧಾನಸಭೆ ಉಪ...
13-08-26 01:00 pm
ಕೊನೆಗೂ ಖಾತೆ ಫೈನಲ್ ; ಜಮೀರ್ ಡೌನ್ ಗ್ರೇಡ್, ಖಾದರ್...
12-08-26 06:57 pm
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
13-08-26 04:29 pm
HK News Staffer
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm
ಮದುವೆ ನಿಶ್ಚಿತಾರ್ಥ ಆಗಿದ್ದ ಎಸ್ ಬಿಐ ಬ್ಯಾಂಕ್ ಉದ್ಯ...
13-08-26 01:17 pm
Mangalore crime, Arrest: ಕೈ ಕೋಳದಲ್ಲೇ ಪೊಲೀಸರನ್...
12-08-26 11:18 pm
Panambur Robbery, Update, Mangalore: ಪಣಂಬೂರು...
12-08-26 07:47 pm