ಬ್ರೇಕಿಂಗ್ ನ್ಯೂಸ್
22-10-23 04:11 pm Bengaluru Correspondent ಕ್ರೈಂ
ಬೆಂಗಳೂರು, ಅ.22: ಚೈತ್ರಾ ವಂಚನೆ ಪ್ರಕರಣದ ರೀತಿಯಲ್ಲೇ ಮತ್ತೊಂದು ಬಿಜೆಪಿ ಟಿಕೆಟ್ ವಂಚನೆ ಪ್ರಕರಣ ನಡೆದಿದ್ದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೆಸರಲ್ಲಿಯೇ ಎರಡು ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಎಸಗಲಾಗಿದೆ.
ಹಣ ಕಳಕೊಂಡ ಪಿಡಬ್ಲ್ಯುಡಿ ಇಲಾಖೆಯ ನಿವೃತ್ತ ಇಂಜಿನಿಯರ್ ಶಿವಮೂರ್ತಿ ಎಂಬವರು ಈ ಬಗ್ಗೆ ಕೊಟ್ಟೂರಿನ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅ.19ರಂದು ಎಫ್ಐಆರ್ ದಾಖಲಾಗಿದೆ. ಚೈತ್ರಾ ಕುಂದಾಪುರ ವಂಚನೆ ಮಾದರಿಯಲ್ಲೇ ಶಿವಮೂರ್ತಿ ಅವರಿಗೆ ಬಿಜೆಪಿ ಮುಖಂಡರನ್ನು ಪರಿಚಯ ಮಾಡಿಸಿ, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದವರೇ ವಂಚನೆ ಎಸಗಿದ್ದಾರೆ. ಕೊಟ್ಟೂರಿನ ಮೋಹನ್, ರೇವಣಸಿದ್ದಪ್ಪ, ಪುತ್ತೂರಿನ ಎನ್.ಪಿ ಶೇಖರ್ ಮತ್ತು ಕುಂದಾಪುರ ಮೂಲದ ಅರ್ಜುನ ಎಂಬವರು ಸೇರಿ 2022ರ ಅಕ್ಟೋಬರ್ 10ರಿಂದ 2023ರ ಎಪ್ರಿಲ್ 30ರ ನಡುವೆ ಎರಡೂವರೆ ಕೋಟಿಗೂ ಹೆಚ್ಚು ಹಣ ಪಡೆದಿದ್ದಾರೆ.
ಒಂದು ತಿಂಗಳ ಹಿಂದೆ ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಬಿಜೆಪಿ ಟಿಕೆಟ್ ಡೀಲ್ ಕುರಿತು ಬರೆಯಲಾಗಿದ್ದ ಪತ್ರಗಳು ಜಾಲತಾಣದಲ್ಲಿ ವೈರಲ್ ಆಗಿದ್ದವು. ಶೇಖರ್ ಅಲಿಯಾಸ್ ಪುತ್ತೂರಿನ ನೇರಳಕಟ್ಟೆ ನಿವಾಸಿ ರಾಜಶೇಖರ ಕೋಟ್ಯಾನ್ ಪ್ರಕರಣದಲ್ಲಿ ಪ್ರಮುಖ ಪಾತ್ರಧಾರಿ ಎನ್ನುವ ಮಾಹಿತಿಗಳಿದ್ದವು. ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರೂ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಶೇಖರ ಕೋಟ್ಯಾನ್ ಪುತ್ತಿಲ ಪರಿವಾರದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದ. ಆದರೆ ಚುನಾವಣೆಗೂ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಪ್ತನೆಂದು ಹೇಳಿಕೊಂಡು ಶಿವಮೂರ್ತಿ ಅವರಿಂದ ಹಣ ಪಡೆದುಕೊಂಡಿದ್ದ. ಶಿವಮೂರ್ತಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠರಿಗೆ ನೀಡಿರುವ ದೂರಿನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ತನ್ನನ್ನು ರೇವಣಸಿದ್ದಪ್ಪ ಮತ್ತು ಶೇಖರ್ ಅವರು ನಳಿನ್ ಕುಮಾರ್ ಅವರನ್ನು ಭೇಟಿ ಮಾಡಿಸಿದ್ದರು. ವ್ಯವಹಾರ ಎಲ್ಲ ಶೇಖರ್ ಜೊತೆ ಮಾಡಿಕೊಳ್ಳಿ ಎಂದು ನಳಿನ್ ಕುಮಾರ್ ಅವರೇ ಹೇಳಿದ್ದರು ಎಂಬುದಾಗಿ ಬರೆದಿದ್ದಾರೆ.
ಟಿಕೆಟ್ ತೆಗೆಸಿಕೊಡುವುದಾಗಿ ಹೇಳಿ ನಾಲ್ವರು ಪದೇ ಪದೇ ಹಣ ಕೇಳಿ ಪಡೆದಿದ್ದು, ನಗದು ಮತ್ತು ಬ್ಯಾಂಕ್ ಖಾತೆ ಮೂಲಕ ಹಣ ಪಡೆದಿದ್ದಾರೆ. ಎರಡೂವರೆ ಕೋಟಿಯಲ್ಲಿ 1.90 ಕೋಟಿಯಷ್ಟು ಹಣವನ್ನು ಬ್ಯಾಂಕ್ ಖಾತೆಯಲ್ಲೇ ನೀಡಿರುವುದಾಗಿ ಶಿವಮೂರ್ತಿ ತಿಳಿಸಿದ್ದಾರೆ. ತಿಂಗಳ ಹಿಂದೆ ಪತ್ರ ವೈರಲ್ ಆದಬಳಿಕ ಶೇಖರ್ ಮತ್ತು ರೇವಣಸಿದ್ದಪ್ಪ ನಾವು ಹಣವನ್ನು ಹಿಂತಿರುಗಿಸುತ್ತೇವೆ ಎಂದು ತಿಳಿಸಿದ್ದರು ಎನ್ನಲಾಗಿದೆ. ಈ ಮಧ್ಯೆ ಶೇಖರ್ ಖಾಲಿ ಚೆಕ್ ನೀಡಿದ್ದು, ಅದನ್ನು 20 ಲಕ್ಷ ಮತ್ತು 50 ಲಕ್ಷ ಹಣ ನಮೂದಿಸಿ ಬ್ಯಾಂಕಿಗೆ ಹಾಕಿದಾಗ ಬೌನ್ಸ್ ಆಗಿದೆ. ಬೌನ್ಸ್ ಆಗಿರುವ ಚೆಕ್ ಸಹಿತ ಶಿವಮೂರ್ತಿ ಪೊಲೀಸರಿಗೆ ದೂರು ನೀಡಿದ್ದು, ತನಗೆ ಹಣ ದೊರಕಿಸಿಕೊಡಬೇಕೆಂದು ಮುಖ್ಯಮಂತ್ರಿ, ಗೃಹಮಂತ್ರಿ, ಡಿಜಿಪಿ ಅವರನ್ನು ಭೇಟಿಯಾಗಿ ತನಿಖೆಗೆ ಆಗ್ರಹ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಊರಿನದ್ದೇ ನಿವಾಸಿಯಾಗಿರುವ ಶೇಖರ್ ಅಲಿಯಾಸ್ ರಾಜಶೇಖರ ಕೋಟ್ಯಾನ್ ಸೇರಿದಂತೆ ವಂಚನೆ ನಡೆಸಿರುವ ನಾಲ್ವರು ಈಗ ನಾಪತ್ತೆಯಾಗಿದ್ದಾರೆ. ಈ ಪೈಕಿ ರೇವಣಸಿದ್ದಪ್ಪ ಹಿಂದೆ ಬಿಜೆಪಿ ಮುಖಂಡನಾಗಿದ್ದು, ಚುನಾವಣೆ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಪಕ್ಷಕ್ಕೆ ಸೇರಿದ್ದು ವಿಜಯನಗರ ಜಿಲ್ಲಾಧ್ಯಕ್ಷನೂ ಆಗಿದ್ದ. ಶಿವಮೂರ್ತಿ ಮೂಲತಃ ಕೊಟ್ಟೂರಿನ ನಿವಾಸಿಯೇ ಆಗಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ಪಿಡಬ್ಲ್ಯುಡಿ ಇಂಜಿನಿಯರ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ನೀವೇ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯೆಂದು ನಂಬಿಸಿ ಬಿಜೆಪಿ ಟಿಕೆಟ್ ತೆಗೆಸಿಕೊಡುತ್ತೇವೆಂದು ಹೇಳಿ ಹಣ ಪಡೆದು ವಂಚಿಸಿದ್ದಾರೆ. ಚೈತ್ರಾ ಪ್ರಕರಣದಲ್ಲಿಯೇ ತೀವ್ರ ಮುಜುಗರಕ್ಕೀಡಾಗಿದ್ದ ರಾಜ್ಯ ಬಿಜೆಪಿಗೆ ಈ ಪ್ರಕರಣ ಮತ್ತೊಮ್ಮೆ ಕೊರಳು ಸುತ್ತಿಕೊಳ್ಳುವ ಸಾಧ್ಯತೆ ಕಂಡುಬಂದಿದೆ.
BJP ticket deal in the name of Nalin Kumar Kateel in Mangalore; FIR registered against 4 at Kudligi. BJP ticket deal as like Chitra Kundapur in the name of Nalin Kateel in Mangalore; FIR registered against 4 at Kudligi. A man was deceived of 2 crores in the name of getting a BJP ticket. Shivamurthy has registered case agianst four at Kudlligi police station. The Bengaluru CCB Police squad arrested two persons accused in a multi-crore cheating case here at the Sri Krishna Math parking area. In true cinematic style and in a swift operation, the police took into custody Chaitra Kundapura, one of the prime accused who had been at large in a multi-crore cheating case who had promised a MLA ticket to an industrialist.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm