ಬ್ರೇಕಿಂಗ್ ನ್ಯೂಸ್
18-10-23 10:35 am Mangalore Correspondent ಕ್ರೈಂ
ಬೆಳ್ತಂಗಡಿ, ಅ.18: ಅರಣ್ಯ ಭೂಮಿ ಅತಿಕ್ರಮಣ ತೆರವಿಗೆ ಬಂದಿದ್ದ ಅರಣ್ಯಾಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾರ್ವಜನಿಕರ ಮಧ್ಯೆ ಸರ್ಕಾರಿ ಅಧಿಕಾರಿಯನ್ನು ನಿಂದಿಸಿದ್ದಾಗಿ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು ಅದರಂತೆ ಐಪಿಸಿ ಸೆಕ್ಷನ್ 143, 353, 504, 149 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ಲೋಲಾಕ್ಷ ಯಾನೆ ಅನಂತು ಎಂಬವರು ಅರಣ್ಯ ಇಲಾಖೆಯ ಜಾಗ ಅತಿಕ್ರಮಿಸಿ ಮನೆ ಕಟ್ಟಲು ಮುಂದಾಗಿದ್ದ ಬಗ್ಗೆ ಮಂಗಳೂರು ಅರಣ್ಯ ವಿಭಾಗಕ್ಕೆ ದೂರು ಬಂದಿತ್ತು. ಅದರಂತೆ, ಅ.6 ರಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿದ ಸಿಬಂದಿ ಮನೆಯ ಫೌಂಡೇಶನ್ ತೆರವುಗೊಳಿಸಿದ್ದರು.
ಆದರೆ ಮರುದಿನ ಸ್ಥಳಕ್ಕೆ ಬಂದ ಶಾಸಕ ಹರೀಶ್ ಪೂಂಜ ಹೈಡ್ರಾಮಾ ಮಾಡಿದ್ದು ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನ ಸೆಳೆಯುವ ಯತ್ನ ಮಾಡಿದ್ದರು. ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅವಾಚ್ಯವಾಗಿ ನಿಂದಿಸಿದ್ದ ವಿಡಿಯೋಗಳು ಜಾಲತಾಣದಲ್ಲಿ ಹರುದಾಡಿದ್ದವು. ಈ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ತನ್ನ ಜಾಲತಾಣದಲ್ಲಿ ಪ್ರಕಟಿಸಿ, ಬೆಳ್ತಂಗಡಿ ಬಿಜೆಪಿ ಶಾಸಕರ ನಡೆಯನ್ನು ಖಂಡಿಸಿತ್ತು. ಇದೇ ವೇಳೆ, ಅರಣ್ಯ ಇಲಾಖೆ ಭೂಮಿ ಒತ್ತುವರಿ ಮಾಡಿದ ಬಗ್ಗೆ 11 ಜನರ ವಿರುದ್ಧ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಧರ್ಮಸ್ಥಳ ಠಾಣೆಯಲ್ಲಿ ಅ.7ರಂದು ದೂರು ನೀಡಿದ್ದರು. ಇವೆಲ್ಲದರ ನಡುವೆಯೇ ಶಾಸಕ ಪೂಂಜ ಮತ್ತು ಬಿಜೆಪಿ ನಾಯಕರು ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಅರಣ್ಯ ಇಲಾಖೆಗೆ ಸಡ್ಡು ಹೊಡೆದಿದ್ದರು.
ಅ.9ರಂದು ಮೇಲಧಿಕಾರಿಗಳ ಸೂಚನೆಯಂತೆ ಎಸಿಎಫ್ ಸುಬ್ಬಯ್ಯ ನಾಯ್ಕ್ ಮತ್ತು ಆರ್ ಎಫ್ ಓ ಜಯಪ್ರಕಾಶ್ ಸ್ಥಳಕ್ಕೆ ಪೊಲೀಸರ ಜೊತೆಗೆ ಬಂದು ಮನೆಯ ಶೆಡ್ ತೆರವುಗೊಳಿಸಲು ಮುಂದಾಗಿದ್ದರು. ಬಿಜೆಪಿ ಶಾಸಕ ಪೂಂಜ ಜೊತೆಗೆ ಬಂಟ್ವಾಳ, ಸುಳ್ಯದ ಶಾಸಕರು, ಎಂಎಲ್ಸಿ ಪ್ರತಾಪಸಿಂಹ ನಾಯಕ್ ಸ್ಥಳಕ್ಕೆ ಬಂದು ಹೋರಾಟಕ್ಕೆ ಕೈಜೋಡಿಸಿದ್ದು ಶೆಡ್ ತೆರವು ಮಾಡದಂತೆ ಜಟಾಪಟಿ ನಡೆಸಿದ್ದರು. ಇದೇ ವೇಳೆ, ಶಾಸಕ ಹರೀಶ್ ಪೂಂಜ, ಆರ್ ಎಫ್ ಓ ಜಯಪ್ರಕಾಶ್ ಅವರನ್ನು ಲೋಫರ್ ಎಂದು ಅವಾಚ್ಯವಾಗಿ ನಿಂದಿಸಿದ್ದ ಘಟನೆ ನಡೆದಿತ್ತು. ಈ ಬಗ್ಗೆ ಅ.13ರಂದು ಜಯಪ್ರಕಾಶ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
FIR lodged by Dharmasthala police against MLA Harish Poonja for misbehaving with forest officers. The video of this had been viral on social media.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm