ಬ್ರೇಕಿಂಗ್ ನ್ಯೂಸ್
18-08-23 09:58 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 18: ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ವ್ಯಕ್ತಿಯೊಬ್ಬರು ಪದೋನ್ನತಿ ಹೊಂದಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲಿ ಉದ್ಯೋಗದಲ್ಲಿರುವಾಗಲೇ ಹ್ಯಾಕರ್ ಗಳ ಕಾಟಕ್ಕೆ ಸಿಲುಕಿ ತಾನು ಮಾಡದ ತಪ್ಪಿಗೆ ಜೈಲು ಪಾಲಾಗಿದ್ದಾರೆ.
ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ (34) ಸೌದಿ ಅರೇಬಿಯಾದ ರಿಯಾದ್ ನಲ್ಲಿ ಜೈಲು ಶಿಕ್ಷೆಗೆ ಒಳಗಾದವರು. ಅಲ್ಪಾನರ್ ಸೆರಾಮಿಕ್ಸ್ ಎನ್ನುವ ಕಂಪನಿಯಲ್ಲಿ ಈ ಹಿಂದೆ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಚಂದ್ರಶೇಖರ್ 2022ರಲ್ಲಿ ಭಡ್ತಿ ಪಡೆದು ಸೌದಿಗೆ ತೆರಳಿ ಕೆಲಸ ಆರಂಭಿಸಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ ರಿಯಾದ್ ನಲ್ಲಿ ಮೊಬೈಲ್ ಸಿಮ್ ಖರೀದಿಗೆಂದು ತೆರಳಿದ್ದರು. ಅರ್ಜಿ ತುಂಬಿಸುತ್ತಿದ್ದಾಗ ಎರಡು ಬಾರಿ ಹೆಬ್ಬೆಟ್ಟು ಸಹಿ ನೀಡಿದ್ದರು.
ವಾರದ ಬಳಿಕ ಅವರಿಗೆ ಅವರಿಗೆ ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಎರಡು ದಿನಗಳ ಬಳಿಕ ಅಪರಿಚಿತ ದೂರವಾಣಿ ಕರೆಯೊಂದು ಬಂದಿದ್ದು, ಮೊಬೈಲ್ ಸಂಖ್ಯೆಗೆ ಸಂಬಂಧಿಸಿ ಮಾಹಿತಿ ಕೇಳಿ ಓಟಿಪಿ ನಂಬರ್ ಕೇಳಿದ್ದರು. ಒಂದು ವಾರ ಕಳೆಯುವಷ್ಟರಲ್ಲಿ ಅಲ್ಲಿನ ಪೊಲೀಸರು ಬಂದು ಇವರನ್ನು ಬಂಧಿಸಿದ್ದರು. ಪೊಲೀಸರ ಪ್ರಕಾರ, ಚಂದ್ರಶೇಖರ್ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದಿದ್ದು, ಅದರಿಂದ ಬೇರೊಬ್ಬ ಮಹಿಳೆಯ ಖಾತೆಯಿಂದ 22 ಸಾವಿರ ರಿಯಾಲ್ ಹಣ ಜಮೆಯಾಗಿತ್ತು. ಯಾರೋ ಹ್ಯಾಕರ್ಸ್ ಇದನ್ನು ಚಂದ್ರಶೇಖರ್ ಗೆ ತಿಳಿಯದಂತೆ ಮಾಡಿದ್ದು, ಆ ಹಣ ಕೆಲವೇ ಹೊತ್ತಲ್ಲಿ ಬೇರೆ ದೇಶಕ್ಕೆ ರವಾನೆಯಾಗಿತ್ತು. ಈ ಬಗ್ಗೆ ಮಹಿಳೆ ಚಂದ್ರಶೇಖರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಗಳು ಇವರನ್ನು ಬಂಧಿಸಿದ್ದರು.
ಮದುವೆ ತಯಾರಿಯಲ್ಲಿದ್ದಾಗಲೇ ಬಂಧನ
ಚಂದ್ರಶೇಖರ್ ಅವರಿಗೆ ಊರಿನಲ್ಲಿ ಹೆಣ್ಣು ಗೊತ್ತುಪಡಿಸಿ 2023ರ ಜನವರಿಯಲ್ಲಿ ಮದುವೆ ನಿಶ್ಚಿತಾರ್ಥಕ್ಕೆ ದಿನ ನಿಗದಿ ಮಾಡಲಾಗಿತ್ತು. ಮದುವೆಯ ದಿನಾಂಕವನ್ನೂ ನಿರ್ಧರಿಸಲಾಗಿತ್ತು. ಮದುವೆ ಸಿದ್ಧತೆಯಲ್ಲಿದ್ದಾಗಲೇ ಚಂದ್ರಶೇಖರ್ ತಾನು ಮಾಡದ ತಪ್ಪಿನಿಂದಾಗಿ ಜೈಲು ಸೇರುವಂತಾಗಿದೆ. ಕಳೆದ ಎಂಟು ತಿಂಗಳಿನಿಂದ ಆತನ ಕುಟುಂಬ ಮಗನನ್ನು ಬಿಡಿಸಿ ತರಲು ಶ್ರಮಿಸುತ್ತಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೂಲಕ ವಿದೇಶಾಂಗ ಇಲಾಖೆಯ ನೆರವನ್ನೂ ಯಾಚಿಸಿದೆ. ಅಲ್ಲದೆ, ಚಂದ್ರಶೇಖರ್ ಅವರನ್ನು ಜೈಲಿನಿಂದ ಹೊರತರಲು ಆತನ ಗೆಳೆಯರು ಸೇರಿ 10 ಲಕ್ಷ ರೂ. ಒಟ್ಟು ಸೇರಿಸಿ ಅಲ್ಲಿನ ವಕೀಲರಿಗೆ ನೀಡಿದ್ದಾರೆ. ಆದರೆ ಯಾವುದೂ ಪ್ರಯೋಜನವಾಗಿಲ್ಲ ಎಂದು ಚಂದ್ರಶೇಖರ್ ಅವರ ನಿಕಟವರ್ತಿ ಶ್ರೀಧರ್ ಗೌಡ ಕೊಕ್ಕಡ ಮತ್ತು ಎನ್ಇಸಿಎಫ್ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
Conned by hackers, Kadaba youth arrested in Riyadh prison, family urges for his release in Mangalore. A youth, native of Kadaba, who had gone to Saudi Arabia on employment was trapped by bank account hackers and is languishing presently in a prison in Riyadh. His family members have urged union government for the release of the innocent youth.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm