ಬ್ರೇಕಿಂಗ್ ನ್ಯೂಸ್
12-07-23 10:29 pm Mangalore Correspondent ಕ್ರೈಂ
ಮಂಗಳೂರು, ಜುಲೈ 12: ನಾಲ್ಕು ದಿನಗಳ ಹಿಂದೆ ಪಾಂಡೇಶ್ವರ ಠಾಣೆ ವ್ಯಾಪ್ತಿಯ ಮುಳಿಹಿತ್ಲಿನಲ್ಲಿ ಅಂಗಡಿ ಮಾಲಕನೇ ಬೆಂಕಿ ಹಚ್ಚಿ ಕೊಲೆಗೈದಿದ್ದ ಉತ್ತರ ಭಾರತ ಮೂಲದ ಕಾರ್ಮಿಕನ ನಿಜ ಪ್ರವರ ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ, ಆತನ ಹೆಸರನ್ನು ಗಟ್ಯಾನ್ ಥಗು ಎಂದು ಪೊಲೀಸರು ತಿಳಿಸಿದ್ದರು. ಆದರೆ ಆತ ಎಲ್ಲಿಯವನು ಅನ್ನುವ ಮಾಹಿತಿ ಲಭ್ಯವಾಗಿರಲಿಲ್ಲ.
ಮಂಗಳೂರಿನಲ್ಲಿ ಕೊಲೆಯಾದ ವಿಚಾರ ತಿಳಿದ ಉಪ್ಪಿನಂಗಡಿ ಪರಿಸರದ ವ್ಯಾಪಾರಿಗಳು 2020ರ ಲಾಕ್ಡೌನ್ ಸಂದರ್ಭದಲ್ಲಿ ಜಗನ್ ಅಲಿಯಾಸ್ ಜಗ್ಗು ಎಂದು ಹೆಸರಿನ ಈತ ಉಪ್ಪಿನಂಗಡಿಯಲ್ಲಿ ಕೆಲ ಸಮಯ ಇದ್ದ ಅನ್ನುವ ಮಾಹಿತಿ ನೀಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಉಪ್ಪಿನಂಗಡಿಯ ವಾರದ ಸಂತೆಯ ಜಾಗದಲ್ಲಿ ಸಿಕ್ಕಿದ್ದ. ಹಸಿವಿನಿಂದ ಬಳಲುತ್ತಿದ್ದ ಜಗ್ಗು ಊಟಕ್ಕಾಗಿ ಅಂಗಲಾಚುತ್ತಿದ್ದ. ಇದನ್ನು ನೋಡಿ ಆತನಿಗೆ ಊಟ, ತಿಂಡಿ ಕೊಟ್ಟಿದ್ದಾಗಿ ತರಕಾರಿ ವ್ಯಾಪಾರಿ ಬಶೀರ್ ತಿಳಿಸಿದ್ದಾರೆ. ಆನಂತರ ತನ್ನ ಅಂಗಡಿಯಲ್ಲೇ ಕೆಲಸಕ್ಕೆ ನಿಲ್ಲಿಸಿ ತರಕಾರಿ ಲೋಡ್, ಅನ್ ಲೋಡ್ ಮಾಡುವುದಕ್ಕೆ ಬಳಸಿಕೊಂಡಿದ್ದರು.
ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದ ಜಗ್ಗು ಯಾರಿಗೂ ಕೇಡು ಬಗೆದವನಲ್ಲ. ಹಣಕ್ಕಾಗಿ ಕೆಲಸ ಮಾಡುತ್ತಲೂ ಇರಲಿಲ್ಲ. ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥತೆ ಇದ್ದುದರಿಂದ ಹಳೆಯದನ್ನು ಮರೆತಿದ್ದ. ಯಾರಾದ್ರೂ ಹಣ ನೀಡಿದರೆ, ಅದನ್ನು ನಹೀ ಎನ್ನುತ್ತಲೇ ಸ್ವೀಕರಿಸುತ್ತಿರಲಿಲ್ಲ. ಬದಲಿಗೆ, ಊಟ, ತಿಂಡಿ ಕೊಡಿಸುವಂತೆ ಕೇಳುತ್ತಿದ್ದ. ಲಾಕ್ಡೌನ್ ಮಧ್ಯೆ ಅಂಗಡಿಗಳು ತೆರೆಯಲ್ಪಟ್ಟ ಸಂದರ್ಭದಲ್ಲಿ ತರಕಾರಿ ವ್ಯಾಪಾರಿ ಲೋಡ್ ಮಾಡುವ ಕೆಲಸ ಮಾಡಿಕೊಂಡಿದ್ದ. ಹಣದ ಬಗ್ಗೆ ಅರಿವು ಹೊಂದಿರದ ಜಗ್ಗು ಹೊಟ್ಟೆ ತುಂಬ ಊಟ ಮತ್ತು ಚಂದದ ಬಟ್ಟೆಗಳ ಬಗ್ಗೆ ಆಸೆ ಹೊಂದಿದ್ದ ಎಂದು ಬಶೀರ್ ಸ್ಮರಿಸಿದ್ದಾರೆ.
ಕಡಿಮೆ ಮಾತನಾಡುತ್ತಿದ್ದ ಆತನನ್ನು ಊರು ಎಲ್ಲಿ ಪ್ರಶ್ನೆ ಮಾಡಿದಾಗ, ಅಸ್ಸಾಂ ಎಂದು ಹೇಳುತ್ತಿದ್ದ. ಊರು ಸುಂದರ್ ಗಡ್ ಎಂದು ಹೇಳುತ್ತಿದ್ದ. ಆದರೆ, ಮನೆಯವರ ಬಗ್ಗೆ ಮಾಹಿತಿ ಇರಲಿಲ್ಲ. ಲಾಕ್ಡೌನ್ ಸಂದರ್ಭದಲ್ಲಿಯೇ ಬಶೀರ್ ಒಂದು ದಿನ ಮಂಗಳೂರಿಗೆ ತರಕಾರಿಗೆಂದು ಬಂದಿದ್ದಾಗ, ಜಗ್ಗುವನ್ನೂ ಕರೆದುಕೊಂಡು ಬಂದಿದ್ದರು. ತರಕಾರಿಗಳನ್ನು ವಾಹನಕ್ಕೆ ಲೋಡ್ ಮಾಡಿ, ಮರಳಿ ಹೋಗಲು ರೆಡಿ ಮಾಡುತ್ತಿದ್ದಾಗ ಜಗ್ಗು ನಾಪತ್ತೆಯಾಗಿದ್ದ. ಆನಂತರ, ಎಲ್ಲಿದ್ದಾನೆಂದು ಸ್ವಲ್ಪ ಹುಡುಕಾಡಿ ಬಶೀರ್ ಮರಳಿದ್ದರು. ಮಂಗಳೂರಿನಲ್ಲಿ ಅಲೆದಾಡುತ್ತಿದ್ದ ಜಗ್ಗು ಆಬಳಿಕ ಪಾಂಡೇಶ್ವರದ ಮುಳಿಹಿತ್ಲಿನಲ್ಲಿ ತೌಸಿಫ್ ಹುಸೈನ್ ಕೈಗೆ ಸಿಕ್ಕಿದ್ದ ಎನ್ನಲಾಗುತ್ತಿದೆ.
ಸ್ಥಳೀಯರು ಮತ್ತು ತೌಸಿಫ್ ಹೇಳುವಂತೆ, ಲಾಕ್ಡೌನ್ ಕಾಲದಿಂದಲೂ ಜಗ್ಗು ಪಾಂಡೇಶ್ವರದಲ್ಲಿಯೇ ಇದ್ದ. ಜೀನಸು ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಲ್ಲದೆ, ಆತನಿಗೆ ಊಟ ಕೊಟ್ಟು ಅಂಗಡಿ ಹಿಂಭಾಗದಲ್ಲಿ ಉಳಕೊಳ್ಳಲು ಸಣ್ಣ ಕೊಠಡಿ ಮಾಡಿಕೊಟ್ಟಿದ್ದ. ಆದರೆ ದಿನವೂ ತೌಸಿಫ್, ಜಗ್ಗುವಿಗೆ ಹೊಡೆದು ಹಿಂಸಿಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೊನ್ನೆ ಕೊಲೆಯಾದ ಶನಿವಾರ ಬೆಳಗ್ಗೆ ಜಗ್ಗು ಮೇಲೆ ಏಟು ಕೊಟ್ಟಿದ್ದನ್ನು ಸ್ಥಳೀಯರು ನೋಡಿದ್ದಾರೆ. ತಲೆಗೆ ಏಟು ಬಿದ್ದು ನೆಲಕ್ಕುರುಳಿದ್ದ ಜಗ್ಗು ಮೇಲೆ ಪೆಟ್ರೋಲ್ ಸುರಿದು ತೌಸಿಫ್ ಬೆಂಕಿ ಕೊಟ್ಟಿದ್ದಾನೆ ಎನ್ನಲಾಗುತ್ತಿದೆ. ಬೆಂಕಿಯಿಂದ ನರಳಿದ್ದ ಜಗ್ಗು ಅತ್ತಿತ್ತ ಓಡುತ್ತಿದ್ದುದ್ದನ್ನು ಸ್ಥಳೀಯರು ನೋಡಿದ್ದು, ತೌಸಿಫ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಜಗ್ಗುವನ್ನು ಅಲ್ಲಿಯೇ ಬಿಟ್ಟು ತಾನೇ ವೆನ್ಲಾಕ್ ಹೋಗಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದ. ತೌಸಿಫ್ ಕೈಗೂ ಸುಟ್ಟ ಗಾಯಗಳಾಗಿದ್ದವು.
ಸ್ಥಳೀಯರು ಬಳಿಕ ನೆಲದಲ್ಲಿ ಬಿದ್ದುಕೊಂಡಿದ್ದ ಜಗ್ಗುವನ್ನು ವೆನ್ಲಾಕ್ ಆಸ್ಪತ್ರೆಗೆ ಒಯ್ದಿದ್ದರು. ಅಷ್ಟರಲ್ಲಿ ಜಗ್ಗು ಮೃತಪಟ್ಟಿದ್ದ. ಆದರೆ, ತೌಸಿಫ್ ಮಾತ್ರ ಆತನಿಗೆ ವಿದ್ಯುತ್ ಶಾಕ್ ಆಗಿದ್ದಾಗಿ ನಾಟಕವಾಡಿದ್ದ. ಸ್ಥಳೀಯರ ಮಾಹಿತಿಯಂತೆ ಪಾಂಡೇಶ್ವರ ಪೊಲೀಸರು ಆರೋಪಿ ತೌಸಿಫ್ ನನ್ನು ಬಂಧಿಸಿದ್ದರು. ಮರುದಿನ ಮಹಜರು ನಡೆಸಲು ಆರೋಪಿಯನ್ನು ಸ್ಥಳಕ್ಕೆ ಕರೆತಂದಿದ್ದಾಗ, ಪರಿಸರದ ನಿವಾಸಿಗಳು ಪೊಲೀಸರಿಗೆ ಸಾಕ್ಷಿ ಹೇಳಿದ್ದರು. ಈ ವೇಳೆ, ಸ್ಥಳೀಯ ಮುಸ್ಲಿಮ್ ಯುವಕರ ವಿರುದ್ಧವೂ ಆರೋಪಿ ತೌಸಿಫ್ ರೇಗಲು ಮುಂದಾಗಿದ್ದು, ನಿಮ್ಮನ್ನು ಹಾಗೇ ಬಿಡುವುದಿಲ್ಲ ಎಂದು ಪೊಲೀಸರ ಮುಂದೆಯೇ ಬೆದರಿಕೆ ಹಾಕಿದ್ದ. ಆದರೆ ಒಬ್ಬಾತ, ನೀನು ಹೊರಗೆ ಬರುತ್ತೀಯಲ್ಲಾ.. ನಿನ್ನನ್ನೂ ಹಾಗೆಯೇ ಸುಟ್ಟು ಹಾಕುತ್ತೇವೆ ಎಂದು ತಿರುಗಿ ಬೈದಿದ್ದಾನೆ. ಆರೋಪಿ ತೌಸಿಫ್ ಹಾಸನ ಮೂಲದವನಾಗಿದ್ದು, ಮಂಗಳೂರಿನಲ್ಲಿ ವ್ಯಾಪಾರಕ್ಕಾಗಿ ಸೆಟ್ಲ್ ಆಗಿದ್ದ. ಅಮಾಯಕ ವ್ಯಕ್ತಿಯನ್ನು ಸುಟ್ಟು ಹಾಕಿ ಕೊಂದು ಈಗ ಜೈಲು ಸೇರಿದ್ದಾನೆ.
Mangalore Employee murder and burnt by shop case in pandeshwar, was working in Uppinangady earlier. Jaggu alias Jagan, who was murdered by the owner of the shop where he worked in Mulihitlu of Mangaluru, was at Uppinangady during lockdown of 2020 and was loved by all.
17-04-25 05:01 pm
Bangalore Correspondent
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
ಒಂದನೇ ತರಗತಿಗೆ ಪ್ರವೇಶ ; ಈ ವರ್ಷಕ್ಕೆ ಮಾತ್ರ ಮಕ್ಕಳ...
16-04-25 09:07 pm
Bigg Boss Kannada, Rajath arrested: ರೀಲ್ಸ್ ಶೋ...
16-04-25 06:42 pm
16-04-25 03:54 pm
HK News Desk
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
17-04-25 11:06 pm
Mangalore Correspondent
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
Mangalore, Bantwal Accident, Melroy D’Sa: ಬಂಟ...
16-04-25 10:58 pm
Mangalore Traffic diversion, Anti Waqf bill p...
16-04-25 08:22 pm
17-04-25 09:56 pm
Mangalore Correspondent
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm
Sullia, Drugs, Mangalore, Ccb Police; ದೆಹಲಿಯಿ...
17-04-25 11:39 am
Air Hostess, ICU, Sexual Harrasment: ICU ನಲ್ಲ...
15-04-25 10:24 pm
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm