ಬ್ರೇಕಿಂಗ್ ನ್ಯೂಸ್
12-07-23 03:43 pm HK News Desk ಕ್ರೈಂ
ನವದೆಹಲಿ, ಜುಲೈ 12: ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬಯಲಾಗಿದೆ. ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ದಿಲ್ಲಿಯ ಹಲವೆಡೆ ತುಣುಕುಗಳನ್ನು ಎಸೆಯಲಾಗಿದೆ. ದಿಲ್ಲಿಯ ಗೀತಾ ಕಾಲೋನಿ ಫ್ಲೈ ಓವರ್ ಬಳಿ ಮೃತ ದೇಹದ ಕೆಲವು ತುಂಡುಗಳು ಪತ್ತೆಯಾಗಿವೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಈ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಇದು ಮಹಿಳೆಯ ಶವ ಎಂದು ಕಂಡು ಬಂದಿದೆ. ಮಹಿಳೆಯ ವಯಸ್ಸು 35 ರಿಂದ 40 ವರ್ಷ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಶವದ ತುಂಡುಗಳನ್ನು ಸಂಗ್ರಹಿಸಿರುವ ಪೊಲೀಸರು, ವಿಧಿ ವಿಜ್ಞಾನ ಪರೀಕ್ಷೆ ಹಾಗೂ ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಗಳು ಈ ಪ್ರಕರಣದ ಕುರಿತಾಗಿ ಇನ್ನಷ್ಟು ಬೆಳಕು ಚೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.
ಕಪ್ಪು ಬಣ್ಣದ ಪಾಲಿಥೀನ್ ಚೀಲದಲ್ಲಿ ಮೃತ ದೇಹದ ತುಂಡುಗಳು ಪತ್ತೆಯಾಗಿದೆ. ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ತಲೆ ಪತ್ತೆಯಾಗಿದೆ. ಮತ್ತೊಂದು ಚೀಲದಲ್ಲಿ ದೇಹದ ಇತರ ಭಾಗಗಳು ಪತ್ತೆಯಾಗಿವೆ. ತಲೆಯ ಕೂದಲು ಉದ್ದವಾಗಿದ್ದು, ಇದು ಮಹಿಳೆಯ ಶವ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ದಿಲ್ಲಿ ಕೇಂದ್ರ ವಲಯದ ಜಂಟಿ ಪೊಲೀಸ್ ಆಯುಕ್ತ ಪರಮಾಧಿತ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ.
ದಿಲ್ಲಿಯ ಗೀತಾ ಕಾಲೋನಿಯ ನಿರ್ಜನ ಪ್ರದೇಶದಲ್ಲಿ ಶವದ ತುಣುಕುಗಳು ಪತ್ತೆಯಾದ ಪ್ರದೇಶದಲ್ಲಿ ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಸುದ್ದಿ ತಿಳಿದ ಜನರು ಸ್ಥಳಕ್ಕೆ ಧಾವಿಸುತ್ತಿದ್ದು, ಭಯಭೀತರಾಗಿರುವ ಜನರನ್ನು ಪೊಲೀಸರು ನಿಯಂತ್ರಿಸುತ್ತಿದ್ಧಾರೆ.
ಇನ್ನು ದಿಲ್ಲಿಯ ಯಮುನಾ ಖಾದರ್ ಎಂಬಲ್ಲಿ ಮರ, ಗಿಡಗಳಿಂದ ತುಂಬಿರುವ ಪ್ರದೇಶದಲ್ಲೂ ಮೃತ ದೇಹದ ತುಣುಕುಗಳು ಪತ್ತೆಯಾಗಿವೆ. ಈ ಭಾಗದಲ್ಲಿ ಎರಡು ಕಡೆ ಪ್ಲಾಸ್ಟಿಕ್ ಚೀಲದಲ್ಲಿ ಶವದ ತುಂಡುಗಳನ್ನು ಎಸೆಯಲಾಗಿತ್ತು ಎಂದು ತಿಳಿದು ಬಂದಿದೆ.
ದಿಲ್ಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹತ್ಯೆಗೀಡಾದ ಮಹಿಳೆ ಯಾರು? ಎಲ್ಲಿಯ ನಿವಾಸಿ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದಷ್ಟು ಬೇಗ ಈ ಪ್ರಕರಣವನ್ನು ಭೇದಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಹೆಚ್ಚಿನ ಮಾಹಿತಿ ನೀಡಿರುವ ದಿಲ್ಲಿ ಡಿಸಿಪಿ ಸಾಗರ್ ಸಿಂಗ್, ವಿಧಿ ವಿಜ್ಞಾನ ತಂಡದ ತಜ್ಞರು ಶವದ ತುಂಡುಗಳು ಪತ್ತೆಯಾದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದು, ಹಲವು ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ. ಈ ಪ್ರಕರಣದ ಕುರಿತಾಗಿ ಕೆಲವು ಸುಳಿವುಗಳೂ ಸಿಕ್ಕಿವೆ ಎಂದಿದ್ದಾರೆ.
ಯಮುನಾ ಖಾದರ್ ಪ್ರದೇಶದಲ್ಲಿ ಸಿಕ್ಕ ಪ್ಲಾಸ್ಟಿಕ್ ಕವರ್ನಲ್ಲಿ ಶವದ 5 ತುಂಡುಗಳು ಪತ್ತೆಯಾಗಿವೆ. ಇನ್ನುಳಿದ ದೇಹದ ಭಾಗಗಳು ಉತ್ತರ ದಿಲ್ಲಿಯ ಗೀತಾ ಕಾಲೋನಿ ಫ್ಲೈ ಓವರ್ ಬಳಿ ಸಿಕ್ಕಿವೆ.
ಬುಧವಾರ ಬೆಳಗ್ಗೆ 9.15ಕ್ಕೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಸ್ಥಳೀಯ ನಿವಾಸಿಗಳು, ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಶವದ ತುಣುಕುಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಪರಿಶೀಲನೆ ನಡೆಸಿದ ವೇಳೆ ಪೊಲೀಸರಿಗೆ ಶವದ ತುಂಡುಗಳು ಪತ್ತೆಯಾಗಿವೆ.
#WATCH | Delhi: Two black polythene bags have been found. One polythene contains the head of the body and the other polythene contains other parts of the body. On the basis of long hair, we are assuming that it is the body of a woman. It is yet to be identified, probe underway:… https://t.co/C5stJpUwHj pic.twitter.com/ARMGleSsSU
— ANI (@ANI) July 12, 2023
VIDEO | Delhi Police recovered chopped up body of a woman near Geeta Colony flyover earlier today. More details are awaited. pic.twitter.com/muMRgoaxzI
— Press Trust of India (@PTI_News) July 12, 2023
The Delhi Police Wednesday found chopped body parts near Geeta Colony flyover in Yamuna Khadar area. DCP (North) Sagar Singh Kalsi said, “Prima facie, it is a body of around a 35 to 40-year-old person.” Talking to the media, Paramaditya, Joint CP, Central Range, said: “Two black polythene bags have been found.
19-04-25 12:24 pm
HK News Desk
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm