ಬ್ರೇಕಿಂಗ್ ನ್ಯೂಸ್
04-04-23 09:27 pm Mangalore Correspondent ಕ್ರೈಂ
ಮಂಗಳೂರು, ಎ.4: ಉಳ್ಳಾಲ ಮತ್ತು ಮಂಗಳೂರು ನಗರ ಪ್ರದೇಶದಲ್ಲಿ ಬೈಕ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಕಳ್ಳರ ಜಾಲವನ್ನು ಸಿಸಿಬಿ ಘಟಕದ ಪೊಲೀಸರು ಸೆರೆಹಿಡಿದಿದ್ದಾರೆ. ನಾಲ್ಕು ಮಂದಿ ಕಳ್ಳರು ಮತ್ತು ಆರು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಣಂಬೂರು ಠಾಣೆ ವ್ಯಾಪ್ತಿಯ ಕಸಬಾ ಬೆಂಗ್ರೆ ನಿವಾಸಿಗಳಾದ ಮೊಹಮ್ಮದ್ ಸಿನಾನ್ (19), ಮೊಹಮ್ಮದ್ ಸಾಹಿಲ್ ಬೆಂಗ್ರೆ (22), ಉಳ್ಳಾಲದ ಫೈಜಲ್ ಅಲಿಯಾಸ್ ತೋಟ ಫೈಜಲ್(35), ಪಡುಬಿದ್ರೆ ಕಂಚಿನಡ್ಕ ನಿವಾಸಿ ಮೊಹಮ್ಮದ್ ಸಾಹಿಲ್(18) ಬಂಧಿತರು. ಆರೋಪಿಗಳು ಮಂಗಳೂರು ನಗರದ ಗೂಡ್ಸ್ ಶೆಡ್ ಪರಿಸರದಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಮಾರ್ಚ್ 27ರಂದು ತೊಕ್ಕೊಟ್ಟು ಗ್ರಾಂಡ್ ಸಿಟಿ ಕಾಂಪ್ಲೆಕ್ಸ್ ಬಳಿ ಕಳವಾಗಿದ್ದ ಹೀರೋ ಹೊಂಡಾ ಸಿಟಿ ಸ್ಪ್ಲೆಂಡರ್ ಬೈಕ್, 28ರಂದು ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿಯಿಂದ ಕಳವು ಮಾಡಿದ್ದ ಹೀರೋ ಹೊಂಡಾ ಸ್ಪ್ಲೆಂಡರ್, ಮಂಗಳೂರಿನ ಬಂದರು ಠಾಣೆ ವ್ಯಾಪ್ತಿಯ ಕಸಬಾ ಬೆಂಗ್ರೆ ಬಳಿ ಕಳವಾಗಿದ್ದ ಆಕ್ಟಿವಾ ಸ್ಕೂಟರ್, ಮಾ.27ರಂದು ಕದ್ರಿ ಠಾಣೆ ವ್ಯಾಪ್ತಿಯ ಕದ್ರಿ ಜಿಮ್ಮಿಸ್ ಸೂಪರ್ ಮಾರ್ಕೆಟ್ ಬಳಿಯಿಂದ ಕಳವು ಮಾಡಿದ್ದ ಯಮಹಾ ಎಫ್ ಝೆಡ್ ಬೈಕ್, ಬಂದರು ಠಾಣೆ ವ್ಯಾಪ್ತಿಯ ಕೇಂದ್ರ ಮಾರುಕಟ್ಟೆಯ ದುಬೈ ಮಾರ್ಕೆಟ್ ಬಳಿಯಿಂದ ಕಳವು ಮಾಡಿದ್ದ ಯಮಹಾ ಎಫ್ ಝೆಡ್ ಬೈಕ್. ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ನಂತೂರು ತಾರೆತೋಟ ಬಳಿಯಿಂದ ಮಾ.30ರಂದು ಕಳವು ಮಾಡಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಪೊಲೀಸರು ತ್ವರಿತ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಸುಳಿವು ಕೊಟ್ಟಿದ್ದ ಸಿಸಿಟಿವಿ, ಸೋನು ಸ್ಟಿಕ್ಕರ್
ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿಯಿಂದ ಬೈಕ್ ಕಳವು ಮಾಡಿದ್ದ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದಕ್ಕೆ ಪೂರಕವಾಗಿ ಅಲ್ಲಿ ಕಳವಾಗಿದ್ದ ಬೈಕನ್ನು ಕಸಬಾ ಬೆಂಗ್ರೆಯಲ್ಲಿ ರಫೀಕ್ ಎಂಬವರು ಪತ್ತೆ ಮಾಡಿದ್ದರು. ಅದರಲ್ಲಿ ಅಂಟಿಸಿದ್ದ ಸೋನು ಹೆಸರಿನ ಸ್ಟಿಕ್ಕರ್ ಆಧರಿಸಿ ಬೈಕ್ ಪತ್ತೆಯಾಗಿತ್ತು. ಆರೋಪಿಗಳು ನಂಬರ್ ಪ್ಲೇಟ್ ಬದಲು ಮಾಡಿದ್ದರೂ, ಅದರಲ್ಲಿದ್ದ ಸೋನು ಎಂಬ ಸ್ಟಿಕ್ಕರ್ ತೆಗೆದಿರಲಿಲ್ಲ. ಬೈಕ್ ಅಲ್ಲಿರುವ ಬಗ್ಗೆ ಮಾಹಿತಿ ಲಭಿಸುತ್ತಲೇ ಪೊಲೀಸರು ಅಲರ್ಟ್ ಆಗಿದ್ದು ಅಲ್ಲಿಂದಲೇ ಹುಡುಗರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬೈಕ್ ಕಳವು ಕೃತ್ಯ 2-3 ದಿನಗಳ ಅಂತರದಲ್ಲಿ ಮಂಗಳೂರಿನ ನಾಲ್ಕೈದು ಕಡೆ ಆಗಿದ್ದರಿಂದ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು.
ಫಲಿಸಿದ ಕೊರಗಜ್ಜನ ಪ್ರಾರ್ಥನೆ
ಇದಲ್ಲದೆ, ಕೋಟೆಕಾರಿನ ಕೊರಗಜ್ಜನ ಕಟ್ಟೆ ಬಳಿಯಲ್ಲಿ ನಿಲ್ಲಿಸಿದ್ದ ಬೈಕನ್ನು ಕಳವು ಮಾಡಿರುವುದು ಅಲ್ಲಿನ ಪರಿಸರದ ನಿವಾಸಿಗಳನ್ನು ಆತಂಕಕ್ಕೆ ಈಡುಮಾಡಿತ್ತು. ಹೀಗಾಗಿ ಭಕ್ತರು ಕೊರಗಜ್ಜನ ಬಳಿ ಪ್ರಾರ್ಥನೆ ಮಾಡಿದ್ದಲ್ಲದೆ, ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಕೇಳಿಕೊಂಡಿದ್ದರು. ಪ್ರಾರ್ಥಿಸಿದ ಮರುದಿನವೇ ಕೋಟೆಕಾರಿನಲ್ಲಿ ಬೈಕ್ ಕಳಕೊಂಡಿದ್ದ ವ್ಯಕ್ತಿಯ ಗೆಳೆಯ ರಫೀಕ್ ತಾನು ಕಂಡಿದ್ದ ಬೈಕಿನ ಸುಳಿವು ಹೇಳಿದ್ದರು. ಸರಣಿ ವಾಹನ ಕಳ್ಳತನ ಆಗಿದ್ದರೂ, ಪೊಲೀಸರಿಗೆ ಖಚಿತ ಸುಳಿವು ಲಭಿಸಿರಲಿಲ್ಲ. ಸೋನು ಸ್ಟಿಕ್ಕರ್ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕಳ್ಳರ ಜಾಲವೇ ಸಿಕ್ಕಿಬಿದ್ದಿದೆ.
The CCB police have arrested four individuals in connection with the theft of two-wheelers in Mangaluru in March at Kotekar. The arrested individuals are Mohammed Sinan, aged 19, from Bengre; Mohammed Saheel, aged 22, from Bengre; Faisal, aged 35, from Ullal; and Mohammed Saheel, aged 18, from Nandavara.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm