ಬ್ರೇಕಿಂಗ್ ನ್ಯೂಸ್
08-06-22 03:29 pm HK News Desk ಕ್ರೈಂ
ಮೈಸೂರು, ಜೂ 8: ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯ ಘಟನೆಯೊಂದು ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಇಂತಹದ್ದೇ ಒಂದು ಘಟನೆ ನಡೆದಿತ್ತು. ಇದೀಗ ಮತ್ತೊಮ್ಮೆ ಮರ್ಯಾದಾ ಹತ್ಯೆ ನಡೆದಿದ್ದು ಈ ಘಟನೆ ನಾಗರಿಕರ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.
ಮಗಳು ತಮ್ಮ ಜಾತಿಗಿಂತ ಕೆಳ ವರ್ಗದ ಯುವಕನನ್ನು ಪ್ರೀತಿಸಿದ್ದಲ್ಲದೇ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದೇ ಆಕೆಯ ಹತ್ಯೆಗೆ ಕಾರಣವಾಗಿದೆ. ಹಾಗಾದರೆ ಇಷ್ಟಕ್ಕೂ ಆಗಿದ್ದೇನು? ಕೊಲೆ ಮಾಡಿದ್ದು ಏಕೆ? ಕೊಲೆಯಾದ ಯುವತಿ ಯಾರು? ಎಂಬಿತ್ಯಾದಿ ವಿಚಾರಗಳನ್ನು ಕಲೆಹಾಕುತ್ತಾ ಹೋದರೆ ಮರ್ಯಾದಾ ಹತ್ಯೆ ಹಿಂದಿನ ಭಯಾನಕತೆ ಎದ್ದು ಕಾಣುತ್ತದೆ.
ಒಂದು ವೇಳೆ ಮಗಳು ತನ್ನ ಮಾತನ್ನು ಧಿಕ್ಕರಿಸಿ ತಾನು ಪ್ರೀತಿಸಿದವನನ್ನೇ ಮದುವೆಯಾಗುವುದಾಗಿ ಹಠ ಹಿಡಿದ ವೇಳೆ ಆಕೆಯನ್ನು ಅವಳ ಪಾಡಿಗೆ ಬಿಟ್ಟು ಬಿಟ್ಟಿದ್ದರೂ ಆಕೆಯ ಜೀವ ಉಳಿಯುತ್ತಿತ್ತಲ್ಲದೆ ಮಗಳನ್ನು ಕೊಂದು ಜೈಲು ಸೇರುವ ಪ್ರಮೇಯ ಹೆತ್ತವರಿಗೆ ಬರುತ್ತಿರಲಿಲ್ಲ.ಆದರೆ ಆಗಿದ್ದೇ ಬೇರೆ.
ಅನ್ಯಜಾತಿಯ ಯುವಕನನ್ನು ಪ್ರೀತಿಸಿದ ತಪ್ಪಿಗೆ ಹೆಣವಾಗಿ ಹೋದ ಯುವತಿ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ನಿವಾಸಿ ಸುರೇಶ್ ಹಾಗೂ ಬೇಬಿ ದಂಪತಿಯ ಪುತ್ರಿ. ಪಿರಿಯಾಪಟ್ಟಣದ ಕಾಲೇಜೊಂದರಲ್ಲಿ ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಬಲೆಗೆ ಬಿದ್ದ ಈಕೆ, ತಮ್ಮ ಗ್ರಾಮಕ್ಕೆ ಸಮೀಪವಿರುವ ಮೆಲ್ಲಹಳ್ಳಿ ಬೋರೆ ಗ್ರಾಮದ ಪರಿಶಿಷ್ಟ ಜನಾಂಗಕ್ಕೆ ಸೇರಿದ ಮಂಜು ಎಂಬ ಯುವಕನನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಳು.
ಮಗಳು ಓದುವ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಬಿದ್ದ ವಿಷಯ ತಿಳಿದ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಆಕೆ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದ ವೇಳೆ ಪಟ್ಟಣದ ಪೊಲೀಸ್ ಠಾಣೆಗೆ ಯುವಕನ ವಿರುದ್ಧ ದೂರು ನೀಡಿದ್ದರು. ಆ ಸಮಯದಲ್ಲಿ ಯುವತಿ ಆತನನ್ನೇ ಪ್ರೀತಿಸುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಆದರೆ ಆಕೆಗೆ 18 ವರ್ಷ ತುಂಬಿರದ ಕಾರಣ ಪೊಲೀಸರು ಮೈಸೂರಿನ ಬಾಲಮಂದಿರಕ್ಕೆ ಕಳುಹಿಸಿದ್ದರು.
ಆದರೆ ಕಳೆದ ಕೆಲವು ದಿನಗಳ ಹಿಂದೆ ಯವತಿ ತನ್ನ ಪೋಷಕರಿಗೆ ಕರೆ ಮಾಡಿ ಇಲ್ಲಿಂದ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಹೀಗಾಗಿ ಮಗಳ ಮನಸ್ಸು ಬದಲಾಯಿಸಿದ್ದು, ಇನ್ನು ಮುಂದೆ ಸರಿಹೋಗಬಹುದೆಂದು ನಂಬಿ ಪೋಷಕರು ಬಾಲಮಂದಿರಕ್ಕೆ ಒಪ್ಪಿಗೆ ಪತ್ರ ಬರೆದುಕೊಟ್ಟು ತಮ್ಮ ಮಗಳನ್ನು ಸ್ವಗ್ರಾಮಕ್ಕೆ ಕರೆತಂದಿದ್ದರು.
ಸೋಮವಾರ ರಾತ್ರಿ ಮತ್ತೆ ತನ್ನ ಪೋಷಕರೊಂದಿಗೆ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಹೋಗುವುದಾಗಿ ಹಠ ಮಾಡಿ ಕುಳಿತಾಗ ಆಕೆಯ ತಂದೆ ಸುರೇಶ್ ಒಪ್ಪಲಿಲ್ಲ. ಮಗಳ ಕತ್ತು ಹಿಸುಕಿ ಕೊಲೆ ಮಾಡಿ ತನ್ನ ಪತ್ನಿ ಬೇಬಿಯೊಂದಿಗೆ ಸೇರಿ ಆಕೆ ಪ್ರೀತಿಸುತ್ತಿದ್ದ ಹುಡುಗನ ಗ್ರಾಮದ ಜಮೀನೊಂದರ ಬಳಿ ಎಸೆದು ಹೋಗಿದ್ದಾರೆ.
ಬಳಿಕ ಮಂಗಳವಾರ ಬೆಳಿಗ್ಗೆ 6.30 ರ ಸಮಯದಲ್ಲಿ ಸುರೇಶ್ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಬಂದು ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಪೊಲೀಸರ ಮುಂದೆ ಶರಣಾಗಿದ್ದಾನೆ. ಆರೋಪಿ ಹೇಳಿಕೆ ಆಧರಿಸಿ ಪೊಲೀಸರು ಸ್ವ ವರದಿ ದಾಖಲಿಸಿಕೊಂಡು ಆರೋಪಿ ಸುರೇಶನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಅಪರ ಎಸ್ಪಿ ಶಿವಕುಮಾರ್, ಡಿವೈಎಸ್ ಪಿ ರವಿಪ್ರಸಾದ್, ಸಿಪಿಐ ಗಳಾದ ಜಗದೀಶ್, ಪ್ರಕಾಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
Mysuru Dalit girl brutally killed by patents for loving boy of lower caste.
20-07-25 04:24 pm
Bangalore Correspondent
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
20-07-25 03:06 pm
Mangaluru Correspondent
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
20-07-25 12:16 pm
HK News Desk
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm